For Quick Alerts
  ALLOW NOTIFICATIONS  
  For Daily Alerts

  ತಾರೆ ಕರಿಷ್ಮಾ ಕಪೂರ್ ದಾಂಪತ್ಯ ಜೀವನ ನುಚ್ಚುನೂರು

  By Rajendra
  |

  'ರಾಜ ಹಿಂದೂಸ್ತಾನಿ' ಚಿತ್ರದ ಮೂಲಕ ಚಿತ್ರರಸಿಕರ ಮನಸ್ಸಿನ ಮೇಲೆ ಚಿರಮುದ್ರೆಯೊತ್ತಿದ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಅವರ ಒಂಬತ್ತು ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನುಚ್ಚುನೂರಾಗುವ ಸಮಯ ಬಂದಿದೆ. ತನ್ನ ಪತಿ ಸಂಜಯ್ ಕಪೂರ್ ಅವರೊಂದಿಗಿನ ಡೈವೋರ್ಸ್ ಪತ್ರಗಳಿಗೆ ಇಬ್ಬರೂ ಸಹಿ ಹಾಕಿದ್ದಾರೆ.

  2010ರಲ್ಲಿ ಎರಡನೆ ಮಗು ಕಿಯಾನ್ ರಾಜ್ ನನ್ನು ಹೆತ್ತ ಬಳಿಕ ಕರಿಷ್ಮಾ ತಮ್ಮ ಪತಿ ಸಂಜಯ್ ಮೇಲೆ ಆಸಕ್ತಿ ಕಳೆದುಕೊಂಡಿದ್ದರು. ಆತನೊಬ್ಬ ಸ್ತ್ರೀಲೋಲ ಎಂಬ ಕಾರಣಕ್ಕೆ ಕರಿಷ್ಮಾ ಕಪೂರ್ ದೂರಾಗಿದ್ದರು. ಈ ಕಾರಣಕ್ಕೆ ತಮ್ಮ ಗಂಡನಿಗೆ ಸೋಡಾಚೀಟಿ ನೀಡಿದ್ದಾಗಿ ತಿಳಿಸಿದ್ದರು.

  ಈಗ ಇಬ್ಬರೂ ಪರಸ್ಪರ ಬೇರ್ಪಡಲು ಒಪ್ಪಿದ್ದು ವಿಚ್ಛೇದನ ಪತ್ರಗಳಿಗೆ ಸಹಿಹಾಕಿದ್ದಾರೆ. ಇನ್ನೇನಿದ್ದರೂ ಕಾನೂನಿನ ಮುದ್ರೆ ಬೀಳುವುದೊಂದು ಬಾಕಿ ಉಳಿದಿದೆ. ಕರಿಷ್ಮಾ ಹಾಗೂ ಸಂಜಯ್ ಅವರು 2003ರಲ್ಲಿ ಮದುವೆಯಾದ ಸ್ವಲ್ಪ ದಿನಗಳಲ್ಲೇ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು.

  ಇಬ್ಬರೂ ಅದು ಹೇಗೋ ಹೊಂದಾಣಿಕೆ ಮಾಡಿಕೊಂಡು ಬಾಳದೋಣಿಯನ್ನು ಮುಂದೂಡುತ್ತಿದ್ದರು. 2005ರಲ್ಲಿ ಮಗಳು ಸಮೈರಾ ಹುಟ್ಟಿದ ಬಳಿಕ ಕರಿಷ್ಮಾ ಕಪೂರ್ ತನ್ನ ಗಂಡನನ್ನು ದೆಹಲಿಯಲ್ಲೇ ಬಿಟ್ಟು ಮುಂಬೈಗೆ ಸ್ಥಳಾಂತರವಾಗಿದ್ದರು. ಕರಿಷ್ಮಾ ಪೋಷಕರು ಇವರಿಬ್ಬರನ್ನು ಒಂದು ಮಾಡಲು ಮಾಡಿದ ಪ್ರಯತ್ನಗಳೆಲ್ಲವೂ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಯಿತು.

  ಕಡೆಗೆ ಇಬ್ಬರನ್ನೂ ಒಂದು ಮಾಡಲು ಸಾಧ್ಯವಾಗಲಿಲ್ಲ. ಸಂಜಯ್ ಹೇಳಿಕೇಳಿ ಸ್ತ್ರೀಲೋಲ. ಈ ಬಗ್ಗೆ ಕರಿಷ್ಮಾ ಆತನಿಗೆ ಎಷ್ಟು ಬುದ್ಧಿ ಹೇಳಿದರು ಆತ ತನ್ನ ಚಾಳಿ ಬಿಡಲಿಲ್ಲ. ಕಡೆಗೆ ಆತನ ವರ್ತನೆಗೆ ರೋಸಿಹೋಗಿ ಆತನಿಂದ ಬೇರ್ಪಡಲು ಕೈಗೆತ್ತಿಕೊಂಡ ಅಸ್ತ್ರವೇ ವಿವಾಹ ವಿಚ್ಛೇದನ. (ಏಜೆನ್ಸೀಸ್)

  English summary
  The buzz is that both bollywood actress Karisma Kapoor and Sunjay Kapur have resigned to the differences in their marriage and decided to split. Sources says, They’re now trying to come upon an agreement where they can get mutual custody of the two children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X