»   » ಖುಷ್ಬೂ ಸೀರೆಯ ಮೇಲೆ ರಾಮ ಕೃಷ್ಣ ಹನುಮಂತ!

ಖುಷ್ಬೂ ಸೀರೆಯ ಮೇಲೆ ರಾಮ ಕೃಷ್ಣ ಹನುಮಂತ!

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಸಿಕರ ಹೃದಯವೀಣೆ ಮೀಟಿದ್ದ ತಾರೆ ಖುಷ್ಬೂ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರು ಹಿಂದು ಧಾರ್ಮಿಕ ಭಾವನೆಗಳಿಗೆ ಮರ್ಮಾಘಾತ ನೀಡದಿದ್ದರೂ ಒಂಚೂರು ಹೃದಯಾಘಾತವನ್ನಂತೂ ತಂದಿಟ್ಟಿದ್ದಾರೆ.

ಇತ್ತೀಚೆಗೆ ಹೈದರಾಬಾದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಖುಷ್ಬೂ ವಿಚಿತ್ರ ಸೀರೆಯನ್ನು ತೊಟ್ಟು ಬಂದಿದ್ದರು. ಎಲ್ಲರ ಕಣ್ಣು ಅವರ ಸೀರೆ ಮೇಲೆ ನೆಟ್ಟಿತ್ತು. ಸೂಕ್ಷ್ಮವಾಗಿ ನೋಡಿದವರು ಅಯ್ಯೋ ರಾಮ ರಾಮ ಕೃಷ್ಣ ಕೃಷ್ಣ ಎಂದು ಮೂಗಿನ ಮೇಲೆ ಬೆರಳಿಟ್ಟರು.

ಹಿಂದು ಮಕ್ಕಳ್ ಕಚ್ಚಿ ಕೆಂಗಣ್ಣಿಗೆ ಖುಷ್ಬೂ

ಕೋಟ್ಯಾಂತರ ಮಂದಿ ಹಿಂದುಗಳು ಭಕ್ತಿಭಾವದಿಂದ ಪೂಜಿಸುವ ದೇವರನ್ನು ಸೀರೆಯ ಮೇಲೆ ಹಾಕಿಕೊಂಡು ಅವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಖುಷ್ಬೂ ಅವರು ಎಲ್ಲರ ಕ್ಷಮೆ ಕೇಳಬೇಕು ಎಂದು ಎಚ್ಎಂಕೆ ಆಗ್ರಹಿಸಿದೆ.

ಕಿಂಚಿತ್ತೂ ಕಿಮ್ಮತ್ತು ಕೊಡದ ಖುಷ್ಬೂ

ಈ ಸಂಬಂಧ ಖುಷ್ಬು ಮನೆ ಮುಂದೆಯೂ ಧರಣಿ ನಡೆಸಿದ ಸಂಘಟನೆ ಖುಷ್ಬು ಅವರ ವಿರುದ್ಧ ಘೋಷಣೆಗಳನ್ನೂ ಕೂಗಿದೆ. ಆದರೆ ಖುಷ್ಬೂ ಮಾತ್ರ ಇವರ ಧರಣಿ ಸತ್ಯಾಗ್ರಹಕ್ಕೆ ಕಿಂಚಿತ್ತೂ ಕಿಮ್ಮತ್ತು ನೀಡಿಲ್ಲ. ಈ ಬಗ್ಗೆ ಖುಷ್ಬು ತಲೆ ಕೂಡ ಹಾಕದೆ ಸುಮ್ಮನಾಗಿದ್ದಾರೆ.

ಇದಕ್ಕೆಲ್ಲಾ ಪ್ರತಿಕ್ರಿಯಿಸಲು ತಮಗೆ ಟೈಮಿಲ್ಲ

ತಾವು ಏನೇ ಮಾಡಿದರೂ ಅದರಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸವಾಗಿದೆ. ಇದಕ್ಕೆಲ್ಲಾ ಪ್ರತಿಕ್ರಿಯಿಸಲು ತಮಗೆ ಸಮಯವಿಲ್ಲ ಎಂದಿದ್ದಾರೆ 42ರ ಹರೆಯದ ತಾರೆ ಖುಷ್ಬೂ.

ಈ ರೀತಿಯ ವಾದಗಳಿಗೆ ಸೊಪ್ಪು ಹಾಕಲ್ಲ

ಈ ರೀತಿಯ ವಾದಗಳಿಗೆ ತಾವು ಸೊಪ್ಪು ಹಾಕಲ್ಲ. ಅವರಿಗೆ ಕೆಲಸವಿಲ್ಲ. ಆದರೆ ತಮಗೆ ಕೈತುಂಬ ಕೆಲಸವಿದೆ. ಇಲ್ಲಸಲ್ಲದ ಕ್ಯಾತೆಗಳನ್ನು ತೆಗೆಯುವುದೇ ಅವರ ಕೆಲಸ ಎಂದಿದ್ದಾರೆ ಖುಷ್ಬು.

ಖುಷ್ಬುಗೂ ವಿವಾದಕ್ಕೂ ನಂಟು ಉಂಟು

ಈ ಹಿಂದೆಯೂ ಖುಷ್ಬು ಅವರು ಹಿಂದು ದೇವತೆಗಳಿಗೆ ಅಪಮಾಡಿದ್ದರು ಎಂದು ಹಿಂದು ಪರ ಸಂಘಟನೆಗಳು ಕಿಡಿಕಾರಿದ್ದವು. ಚಪ್ಪಲಿ ಹಾಕಿಕೊಂಡೇ ಲಕ್ಷ್ಮಿ, ಪಾರ್ವತಿ ಹಾಗೂ ಸರಸ್ವತಿಗೆ ಫೋಟೋಗಳ ಮುಂದೆ ಕೂರುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.


ಖುಷ್ಬೂ ಸೀರೆ ಮೇಲೆ ರಾಮ, ಕೃಷ್ಣ, ಹನುಮಂತನ ಚಿತ್ರಗಳು ಪ್ರಿಂಟಾಗಿರುವುದನ್ನು ನೋಡಿದ ಹಿಂದೂ ಮಕ್ಕಳ್ ಕಚ್ಚಿ (ಎಚ್ ಎಂಕೆ) ಪಕ್ಷ ಕಾಳಿಂಗಸರ್ಪದಂತೆ ಬುಸ್ ಎಂದು ಹೆಡೆ ಎತ್ತಿದೆ. ಖುಷ್ಬೂ ಅವರು ಹಿಂದುಗಳ ಧಾರ್ಮಿಕ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ ಎಂದಿದೆ ಹಿಂದು ಮಕ್ಕಳ್ ಕಚ್ಚಿ.

ಖುಷ್ಬೂ ಅವರಿಗೆ ಒಂಚೂರು ಸದಭಿರುಚಿಯಿಲ್ಲ. ಇದು ಅವರ ಕೆಟ್ಟ ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ. ರಾಮ, ಕೃಷ್ಣ ಹಾಗೂ ಹನುಮಂತ ಹಿಂದುಗಳ ಪವಿತ್ರ ದೇವಾನುದೇವತೆಗಳು. ಹಿಂದು ದೇವತೆಗಳನ್ನು ಸೀರೆಯ ಮೇಲೆ ಪ್ರಿಂಟ್ ಹಾಕಿಸಿಕೊಳ್ಳುವ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದೆ ಎಚ್ಎಂಕೆ.

English summary
Recently, Khushboo attended the audio launch function where she was seen wearing a saree with Lord Rama, Krishna and Hanuman printed on it. This has irked Hindu Makkal Katchi (HMK), a political party in Tamil Nadu, as they accuse her of being insensitive towards the feelings of the Hindus.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada