»   » ನಟಿ ರಾಧಿಕಾ ಕುಮಾರಸ್ವಾಮಿ ಫೋನಿಲ್ಲ ಮೆಸೇಜಿಲ್ಲ

ನಟಿ ರಾಧಿಕಾ ಕುಮಾರಸ್ವಾಮಿ ಫೋನಿಲ್ಲ ಮೆಸೇಜಿಲ್ಲ

By: ಜೀವನರಸಿಕ
Subscribe to Filmibeat Kannada

ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ ಯಾರು ಫೋನ್ ಮಾಡಿದ್ರೂ ರಿಸೀವ್ ಮಾಡೋ ಮನಸ್ಸು ಮಾಡ್ತಿಲ್ಲವಂತೆ. ಮಾಧ್ಯಮದ ಮಂದಿ ಫೋನ್ ಮಾಡಿದ್ರೆ ಸದಾ ರಿಸೀವ್ ಮಾಡ್ತಿದ್ದ ಈ ಕರಾವಳಿ ಚೆಲುವೆ ಒಂದು ವೇಳೆ ಬಿಜಿ ಇದ್ರೆ ಸ್ವಲ್ಪ ಸಮಯದ ನಂತರ ಮತ್ತೆ ಫೋನ್ ಮಾಡ್ತಾರೆ. ಇಲ್ಲದಿದ್ರೆ ಮೆಸೇಜ್ ಗಾದ್ರೂ ರಿಪ್ಲೈ ಮಾಡ್ತಾರೆ.

ಇದಕ್ಕೆ ಕಾರಣವೂ ಇದೆಯಂತೆ. ಈಗ ರಾಧಿಕಾ ಕುಮಾರಸ್ವಾಮಿ 'ಸ್ವೀಟಿ' ಚಿತ್ರದ ನಂತರ ಬಹಳ ನಿರೀಕ್ಷೆ ಇಟ್ಟು ನಟಿಸೋಕೆ ಒಪ್ಪಿಕೊಂಡಿದ್ದ ಸಿನಿಮಾ 'ರುದ್ರತಾಂಡವ'. ತಮಿಳಿನ 'ಪಾಂಡಿಯನಾಡು' ಚಿತ್ರದ ರೀಮೇಕ್ ಸಿನಿಮಾ 'ರುದ್ರತಾಂಡವ'. ಈ ಚಿತ್ರವನ್ನ ನಿರ್ದೇಶನ ಮಾಡ್ತಿರೋದು ವಿವಾದಾತ್ಮ ನಿರ್ದೇಶಕ ಗುರುದೇಶಪಾಂಡೆ. [ವೆರೈಟಿ ಅವತಾರಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ]


ಬಹುಪಾಲು ಸಿನಿಮಾ ಶೂಟಿಂಗ್ ಮುಗಿಸಿದ ನಂತರ ಗುರುದೇಶಪಾಂಡೆ ಮಾಧ್ಯಮಗಳ ಮುಂದೆ ಎಡವಟ್ಟು ಮಾಡಿಕೊಂಡ ಮೇಲೆ ಈಗ ಸಿನಿಮಾ ಬಗ್ಗೆ ಮಾತ್ನಾಡ್ತಾನೂ ಇಲ್ಲ. ಇನ್ನು ಈ ವಿಷಯದಿಂದ ರಾಧಿಕಾ ಕುಮಾರಸ್ವಾಮಿ ಕೂಡ ತಲೆಕೆಡಿಸಿಕೊಂಡತಿಲ್ಲ.

ಅಣ್ಣ ತಂಗಿಯಂತಹಾ ಸೆಂಟಿಮೆಂಟ್ ಪಾತ್ರಗಳಿಂದ ಗ್ಲಾಮರಸ್ ರೋಲ್ ವರೆಗೂ ಅದ್ಭುತ ಅಭಿನಯ ನೀಡಿದ ರಾಧಿಕಾ ನಾವು ಯಾರಿಗೂ ಕಮ್ಮಿಯಿಲ್ಲ ಅಂತ ಕನ್ನಡದ ಟಾಪ್ ಹೀರೋಯಿನ್ ಗಳ ಲಿಸ್ಟ್ ನಲ್ಲಿದ್ರು. ಈ ದುಂಡುಮುಖದ ಚೆಲುವೆ ಒಂದಷ್ಟು ಚಿತ್ರಗಳಲ್ಲಿ ಬಿಜಿಯಾಗುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ರು. ಈಗ ಮೀಡಿಯಾದವ್ರ ಕೈಗೆ ಸಿಕ್ತಿಲ್ಲವಂತೆ, ಗೆಳೆಯರ ಕೈಗೂ ಸಿಕ್ತಿಲ್ಲ ಅಂತಿದೆ ಗಾಂಧಿನಗರ. ರಾಧಿಕಾ ಕುಮಾರಸ್ವಾಮಿಯವರೇ ಹೇಗಿದ್ದೀರಾ?

English summary
The Sandalwood buzz is that, Kannada actress Radhika Kumaraswamy not answering calls and even messages. The actress is now busy in 'Rudratandava' with Chiranjeevi Sarja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada