For Quick Alerts
  ALLOW NOTIFICATIONS  
  For Daily Alerts

  ನೀರ್ ದೋಸೆ ತಿನ್ನೋಕೆ ರಮ್ಯಾ ರೆಡಿ ಅಂತೆ!

  By ಜೇಮ್ಸ್ ಮಾರ್ಟಿನ್
  |

  ಲಕ್ಕಿ ಸ್ಟಾರ್ ರಮ್ಯಾ ಹಾಗೂ ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ 'ನೀರ್ ದೋಸೆ' ವಿವಾದ ಅಂತ್ಯಗೊಂಡಿದೆ. ಈ ವಿವಾದಕ್ಕೆ ತೆರೆ ಎಳೆಯಲು ಹೊಸ ಹೊಸ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ, ಭಾನುವಾರ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ನಲ್ಲಿ ವಿವಾದ ಸುಖಾಂತ್ಯಗೊಂಡಿರುವ ಸುದ್ದಿ ಬಂದಿದೆ. ರಮ್ಯಾ ಆವರು ಕಾರಣಾಂತರಗಳಿಂದ ಸಂಧಾನ ಸಭೆಗೆ ಹಾಜರಾಗಿರಲಿಲ್ಲ. ಈಗ ಜನವರಿ ನಂತರ ಶೂಟಿಂಗ್ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

  ಮಂಡ್ಯ ಕ್ಷೇತ್ರದ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ತಮ್ಮ ಜನತೆ ನೋವು ನಲಿವು ಆಲಿಸುತ್ತಾ ಚಿತ್ರರಂಗದಿಂದ ಕೊಂಚ ದೂರ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ರಮ್ಯಾ ಅವರನ್ನು ಬಿಟ್ಟರೂ ಬಿಡದಿ ಮಾಯೆ ಎಂಬಂತೆ ಚಿತ್ರರಂಗ ಮಾತ್ರ ಕೈ ಬೀಸಿ ಕರೆಯುತ್ತಲೇ ಇದೆ. ಅದರಲ್ಲೂ ವಿವಾದಗಳು ಮತ್ತೆ ಮತ್ತೆ ರಮ್ಯಾ ಅವರ ಸುತ್ತ ಸುತ್ತುತ್ತಿದೆ.

  ಹ್ಯಾಟ್ರಿಕ್ ಹೀರೋ ಜೊತೆ ಆರ್ಯನ್, ಜಗ್ಗೇಶ್ ಜೊತೆ ನೀರ್ ದೋಸೆ ಹಾಗೂ ಪ್ರಜ್ವಲ್ ದೇವರಾಜ್ ಜೊತೆ ದಿಲ್ ಕಾ ರಾಜಾ ಚಿತ್ರಗಳನ್ನು ಮಂಡ್ಯ ಸಂಸದೆ ರಮ್ಯಾ ಅವರು ಆದಷ್ಟು ಬೇಗ ಮುಗಿಸಿಕೊಟ್ಟು ತಮ್ಮ ಕ್ಷೇತ್ರಕ್ಕಾಗಿ ಸೇವೆ ಸಲ್ಲಿಸುವಲ್ಲಿ ಕಾಲದೂಡುತ್ತಾರೆ ಎಂದು ಅವರ ಮ್ಯಾನೇಜರ್ ಗಳು ಹೇಳುತ್ತಲೇ ಇದ್ದಾರೆ.ಈ ಚಿತ್ರಗಳ ಜತೆಗೆ ರಮ್ಯಾ ಅವರು ಇನ್ನೊಂದು ದ್ವಿಭಾಷಾ ಚಿತ್ರಕ್ಕೂ ಸಹಿ ಹಾಕಿದ್ದರು ಎನ್ನಲಾಗಿದೆ. ಈ ಎಲ್ಲಾ ಚಿತ್ರಗಳ ಮೊತ್ತ 20 ಕೋಟಿ ರು ದಾಟಲಿದೆ ಎಂದು ಮೂಲಗಳು ಹೇಳುತ್ತಿದೆ.

  ಮಂಡ್ಯ ಕ್ಷೇತ್ರದ ಚುನಾವಣೆಗೆ ರಮ್ಯಾ ಸ್ಪರ್ಧಿಸುವುದಕ್ಕೂ ಮುನ್ನ ಕೆಲವು ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆದರೆ, ಚುನಾವಣೆ ಅಡ್ಡಿ ಬಂದಿದ್ದರಿಂದ ರಮ್ಯಾ ಮತ್ತೆ ಶೂಟಿಂಗ್ ಗೆ ಹೋಗಿಲ್ಲ. ರಮ್ಯಾ ಅವರಿಗಾಗಿ ನಿರ್ಮಾಪಕರು ಕೂಡಾ ತಾಳ್ಮೆಯಿಂದ ಕಾದಿದ್ದಾರೆ. ಇಂದಿಗೂ ರಮ್ಯಾ ಮೇಡಂ ಶೂಟಿಂಗ್ ಗೆ ಬರ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಅದರೆ, ರಮ್ಯಾ ಎಲ್ಲಕ್ಕೂ ಸೂಕ್ತ ಉತ್ತರ ನೀಡಿದ್ದಾರೆ. ನೀರ್ ದೋಸೆ ಚಿತ್ರೀಕರಣ ನಿಂತಿದ್ದು ನನ್ನಿಂದಾಗಿ ಅಲ್ಲ ಎಂದಿದ್ದರು. ರಮ್ಯಾ ಮಾತು ಕೇಳುತ್ತಿದ್ದರೆ ಮುಂದಿನ ಲೋಕಸಭೆ ಚುನಾವಣೆ ಮುಗಿಯುವ ತನಕ ಮತ್ತೆ ಚಿತ್ರೀಕರಣಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ ಎನ್ನಲಾಗಿತ್ತು.

  ಜಗ್ಗೇಶ್ ಪ್ರಶ್ನೆಗೆ ಉತ್ತರವಿಲ್ಲ

  ಜಗ್ಗೇಶ್ ಪ್ರಶ್ನೆಗೆ ಉತ್ತರವಿಲ್ಲ

  ರಮ್ಯಾ ಅವರು ಕೆಲ ಚಿತ್ರಗಳ ಅಡ್ವಾನ್ಸ್ ರಮ್ಯಾ ಹಿಂತಿರುಗಿಸಿದ್ದಾರೆ. ಅದರೆ, ನೀರ್ ದೋಸೆ ಖರ್ಚು ನೀಡುವವರು ಯಾರು ಎಂದು ಜಗ್ಗೇಶ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದರು. ನೀರ್ ದೋಸೆ ಚಿತ್ರಕ್ಕೆ ಆಗಿರುವ ಖರ್ಚು ವೆಚ್ಚ ಲೆಕ್ಕ ಕೊಟ್ಟ ನವರಸನಾಯಕ 4 ಕ್ಜೋಟಿ ರು ಯಾರು ಕೊಡ್ತಾರೆ ಎಂದು ಕೇಳಿದ್ದರು. ಅಲ್ಲದೆ ನಿಯತ್ತಿಗೆ ಹೆಸರಾದ ಪ್ರಾಣಿಯೊಂದಿದೆ ಎಂದು ಪರೋಕ್ಷವಾಗಿ ರಮ್ಯಾ ಅವರನ್ನು ಕಿಚಾಯಿಸಿದ್ದರು ಈ ಬಗ್ಗೆ ರಮ್ಯಾ ತುಟಿಪಿಟಿಕ್ ಅಂದಿಲ್ಲ.

  ನಿರ್ಮಾಪಕರ ಅಳಲು

  ನಿರ್ಮಾಪಕರ ಅಳಲು

  'ನೀರ್ ದೋಸೆ' ನಿರ್ಮಾಪಕ ಸುಧೀಂದ್ರ ಅವರು ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ರಮ್ಯಾ ತಲಾ ಹತ್ತು ದಿನಗಳ ಡೇಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ರಮ್ಯಾ ಅವರಿಗೆ ಕಾಲಾವಕಾಶವೇ ಇಲ್ಲದಂತಾಗಿದೆ. ಜನವರಿ ನಂತರವಷ್ಟೇ ನಾನು ಡೇಟ್ಸ್ ನೀಡಲು ಸಾಧ್ಯ ಎಂದು ರಮ್ಯಾ ಹೇಳಿದ್ದಾರೆ.

  ರಮ್ಯಾ ಸಮಸ್ಯೆ ಏನು

  ರಮ್ಯಾ ಸಮಸ್ಯೆ ಏನು

  ಒಂದು : ಇನ್ನು ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಚಿತ್ರದಲ್ಲಿ ತೊಡಗಿಕೊಳ್ಳುವುದರಿಂದ ಅವರ ರಾಜಕೀಯ ಭವಿಷ್ಯಕ್ಕೆ ಹೊಡೆತ ಬೀಳಲಿದೆ.

  ಇನ್ನೊಂದು: ಚಿತ್ರದ ದೃಶ್ಯಗಳು, ಚಿತ್ರಗಳು ಇಮೇಜ್ ಹಾಳು ಮಾಡುತ್ತದೆ ಎಂದು ರಮ್ಯಾ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಚುನಾವಣೆ ನಂತರ ಸಿನಿಮಾ ರಿಲೀಸ್ ಆಗುವಂತೆ ನೋಡಿಕೊಳ್ಳಲು ಎಲ್ಲಾ ವ್ಯವಸ್ಥೆಯಾಗುತ್ತಿದೆ

  ವಿಜಯ್ ಪ್ರಸಾದ್ ಕಥೆ

  ವಿಜಯ್ ಪ್ರಸಾದ್ ಕಥೆ

  ಪ್ರತಿಭಾವಂತ ನಿರ್ದೇಶಕ ವಿಜಯ್ ಪ್ರಸಾದ್ ಅವರ ಹೊಸ ಪ್ರಾಜೆಕ್ಟ್ 'ಪೆಟ್ರೋಮ್ಯಾಕ್ಸ್' ಶುರುವಾಗಿದೆ. ನೀನಾಸಂ ಸತೀಶ್ ಹಾಕಿಕೊಂಡು ಹೊಸ ಬಗೆ ಚಿತ್ರ ನೀಡಲು ವಿಜಯ್ ಮುಂದಾಗಿದ್ದಾರೆ. ಚಿತ್ರದ ಪ್ರೊಮೋ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ವಿಜಯ್ ಅವರು ಹುಳಿ ಬಂದಿರುವ 'ನೀರ್ ದೋಸೆ' ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದಾರೆ. ರಮ್ಯಾ ಓಕೆ ಅನ್ನುವ ತನಕ ಕಾಯಲು ನಿರ್ಧರಿಸಿದ್ದಾರೆ.

  ದೋಸೆ ರಾಜಕೀಯ

  ದೋಸೆ ರಾಜಕೀಯ

  ಎಲ್ಲಾ ಹನ್ನೆರೆಡಾಣೆ ರಾಜಕಾರಣಿಗಳು ಹೇಳುವಂತೆ ರಮ್ಯಾ ಅವರು ಕೂಡಾ ಇದೊಂದು ರಾಜಕೀಯ ಕುತಂತ್ರ ನನ್ನ ಇಮೇಜ್ ಹಾಳುಗೆಡವಲು ನಡೆಸಿರುವ ಪಿತೂರಿ ಎಂದಿದ್ದಾರೆ. ಅಭಿಮಾನಿಗಳು ನಿಜವಿರಬಹುದು ಕಣ್ಲಾ ಎಂದು ಲೊಚಗುಟ್ಟಿದ್ದರು.

  ನಾನು ದೋಸೆ ತಿನ್ನಲು ಬರುವುದಿಲ್ಲ ಎಂದು ಅಂಬರೀಷ್ ಹೇಳಿದ ಮೇಲೆ ವಿಧಿ ಇಲ್ಲದೆ ಮ್ಯಾನೇಜರ್ ಕಳುಹಿಸಿ ರಮ್ಯಾ ಡೀಲ್ ಕುದುರಿಸಿದ್ದಾರೆ. ಪ್ರೇಕ್ಷಕರ ಪಾಲಿಗೆ ಇದು ಶುಭ ಸೂಚನೆ.

  ಈ ನಡುವೆ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ಇಲ್ಲದ ಕಾಳಜಿ, ಉಸಾಬರಿ ಜಗ್ಗೇಶ್ ಗೆ ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ ಕೂಡಾ.

  ಕೆಎಫ್ ಸಿಸಿ ನಿಯಮ ಏನು?

  ಕೆಎಫ್ ಸಿಸಿ ನಿಯಮ ಏನು?

  ಕಾಲ್ ಶೀಟ್ ಗೆ ಸಹಿ ಹಾಕಿದ್ದ ರಮ್ಯಾ ಅವರು ಆರೋಗ್ಯ ಕೆಡದ ಹೊರತು ಕೈಕೊಡುವಂತಿಲ್ಲ. ಉಳಿದಿರುವ 40 ದಿನಗಳ ಚಿತ್ರೀಕರಣ ಪೂರೈಸಿಕೊಡಬೇಕು. ಆದರೆ, ದಿನಗಳು ಉರುಳುತ್ತಿರುವುದರಿಂದ ಅಗಿರುವ ನಷ್ಟದ ಕಥೆ ಏನು ಎಂದು ನಿರ್ಮಾಪಕ ಸುಧೀಂದ್ರ ಗೋಳಿಟ್ಟಿದ್ದಾರೆ.

  ಅಡ್ವಾನ್ಸ್ ಪಡೆದು ಚಿತ್ರೀಕರಣಕ್ಕೆ ಬರದಿದ್ದರೆ ಪರಿಹಾರ ಕೊಡಿಸುವ ರೀತಿ ರಿವಾಜು ಕೆಎಫ್ ಸಿಸಿಯಲ್ಲಿದೆ. ಚೆಕ್ ಬೌನ್ಸ್ ಆಗಿ ನಟ, ನಟಿಗೆ ಹಣ ಸಿಗದಿದ್ದರೆ ಕೂಡಾ ಪರಿಹಾರವಿದೆ. ಆದರೆ, ರಮ್ಯಾ ಮಾಡಿರುವ ವಿಳಂಬಕ್ಕೆ ಯಾವ ಪರಿಹಾರ ಎಂಬುದು ಕೆಎಫ್ ಸಿಸಿ ತಲೆಗಳಿಗೆ ಹೊಳೆಯುತ್ತಿಲ್ಲ

  English summary
  Actress Ramya and the Neer Dose film team finally agreed to compromise each and other.Karnataka Film Chamber of Commerce reports say Ramya has given shooting dates after January. Ramya is MP from Mandya, Karnataka

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X