»   » ಏಡ್ಸ್ ಸರ್ಟಿಫಿಕೇಟ್ ಕೇಳಿದ ತಾರೆ ಸನ್ನಿ ಲಿಯೋನ್

ಏಡ್ಸ್ ಸರ್ಟಿಫಿಕೇಟ್ ಕೇಳಿದ ತಾರೆ ಸನ್ನಿ ಲಿಯೋನ್

Posted By:
Subscribe to Filmibeat Kannada
ಹಾಟ್ ಬೆಡಗಿ ಸನ್ನಿ ಲಿಯೋನ್ ಅಭಿನಯಿಸುತ್ತಿರುವ ಚೊಚ್ಚಲ ಬಾಲಿವುಡ್ ಚಿತ್ರ 'ಜಿಸ್ಮ್ 2' ಬಗ್ಗೆ ರೋಚಕ ಸಂಗತಿಗಳು ಒಂದಾಗಿ ಹೊರಬೀಳುತ್ತಿವೆ. ಈ ಚಿತ್ರದಲ್ಲಿ ಇಬ್ಬರು ನಾಯಕರೊಂದಿಗೆ ಸನ್ನಿ ಲಿಯೋನ್ ತೆರೆಹಂಚಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ರಣದೀಪ್ ಹೂಡಾ ಹಾಗೂ ಅರುಣೋದಯ್ ಸಿಂಗ್ ಜೊತೆಗಿನ ಹಾಟ್ ದೃಶ್ಯಗಳು ಈಗಾಗಲೆ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿವೆ. ಈ ಹಾಟ್ ಸನ್ನಿವೇಶಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ವಿಚಿತ್ರ ಬೇಡಿಕೆಯನ್ನು ನಿರ್ದೇಶಕರ ಮುಂಡಿಟ್ಟಿದ್ದಾರೆ ಸನ್ನಿ ಲಿಯೋನ್.

ಅದೇನೆಂದರೆ ತನ್ನ ಸಹನಟರಿಗೆ ಏಡ್ಸ್ ಇಲ್ಲ ಎಂಬ ಸರ್ಟಿಫಿಕೇಟ್ ನೀಡಿ ಎಂದು. ‌ಚಿತ್ರದಲ್ಲಿ ಸಂಪೂರ್ಣ ನಗ್ನವಾಗಿ ಬೇಕಾದರೆ ಅಭಿನಯಿಸುತ್ತೇನೆ. ಆದರೆ ತನ್ನೊಂದಿಗೆ ಅಭಿನಯಿಸುವ ನಟನಿಗೆ ಎಚ್ಐವಿ ಟೆಸ್ಟ್ ಮಾಡಿಸಬೇಕೆಂದು ಡಿಮ್ಯಾಂಡ್ ಮಾಡಿದ್ದರಂತೆ.

ಮೊದಲೇ ಈಕೆ ನೀಲಿ ಚಿತ್ರಗಳ ತಾರೆ. ನೀಲಿ ಚಿತ್ರಗಳಿಗೆ ಸಹಿ ಹಾಕುವ ಮುನ್ನ ಸಹನಟನಿಗೆ ಎಚ್ಐವಿ ಟೆಸ್ಟ್ ಮಾಡಿಸಲು ಕೇಳುತ್ತಿದ್ದರಂತೆ. ಇಲ್ಲೂ ಸಹ ಅಷ್ಟೇ ಎಚ್ಐವಿ ಸರ್ಟಿಫಿಕೇಟ್ ಕೇಳಿದ್ದಾರೆ. ಬರೀ ಕೇಳುವುದಷ್ಟೇ ಅಲ್ಲದೆ ತನಗೂ ಎಚ್ಐವಿ ಸೋಂಕಿಲ್ಲ ಎಂಬ ಪ್ರಮಾಣಪತ್ರವನ್ನೂ ತೋರಿಸಿದರಂತೆ.

ಒಟ್ಟಿನಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಸಿಕ್ಕಿದ ಸಖತ್ ಪ್ರೊಫೆಷನಲ್ ತಾರೆ ಎನ್ನಬಹುದು. ಈ ಕಾಲದಲ್ಲಿ ಯಾವ ನಟನಿಗೆ ಯಾವ ರೋಗ ಇದೆಯೋ ಯಾವೊನಿಗ್ ಗೊತ್ತು. ಆಕೆಯ ಮುಂಜಾಗ್ರತೆ ಆಕೆ ವಹಿಸಿದ್ದಾರೆ ಅಷ್ಟೇ. ಇದರನ್ನೂ ತಪ್ಪಿಲ್ಲ ಬಿಡಿ.

ಸನ್ನಿ ಲಿಯೋನ್, ರಣದೀಪ್ ಹೂಡ, ಅರುಣೋದಯ್ ಸಿಂಗ್ ತಾರಾಗಣದ ಈ ಚಿತ್ರ ಆಗಸ್ಟ್ 3ರಂದು ತೆರೆಕಾಣುತ್ತಿದೆ. ಪೂಜಾ ಭಟ್ ನಿರ್ದೇಶನದ ಈ ಚಿತ್ರವನ್ನು ಡಿನೋ ಮೋರಿಯಾ ಹಾಗೂ ಪೂಜಾ ಭಟ್ ಜಂಟಿಯಾಗಿ ನಿರ್ಮಿಸಿದ್ದಾರೆ.

ಈ ಹಿಂದೆ 2003ರಲ್ಲಿ ತೆರೆಕಂಡಿದ್ದ 'ಜಿಸ್ಮ್' ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಬಿಪಾಶಾ ಬಸು ಲೀಲಾಜಾಲವಾಗಿ ಅಭಿನಯಿಸಿದ್ದರು. ಆ ಚಿತ್ರದ ಮುಂದುವರಿದ ಭಾಗವಾಗಿ 'ಜಿಸ್ಮ್ 2' ಚಿತ್ರ ಬರುತ್ತಿದೆ. ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಧುಮ್ಮಿಕ್ಕುವ ಸೌಂದರ್ಯ ಪ್ರಮುಖ ಆಕರ್ಷಣೆ. (ಏಜೆನ್ಸೀಸ್)

English summary
A source informed a daily that Sunny Leone had sent an E-mail to Pooja Bhatt, demanding a medical certificate of Randeep and Arunoday with whom she was scheduled to shoot lovemaking sequences. Being a professional x rated actress, Leone's demand was very much obvious as she wanted to ensure whether her male co-stars' were HIV victims or not.
Please Wait while comments are loading...