»   » ಇದೇನು ಸಭ್ಯತೆ ಇದೇನು ಸಂಸ್ಕೃತಿ ಭುವನ ಸುಂದರಿ?

ಇದೇನು ಸಭ್ಯತೆ ಇದೇನು ಸಂಸ್ಕೃತಿ ಭುವನ ಸುಂದರಿ?

Posted By:
Subscribe to Filmibeat Kannada
ಮಾಜಿ ಭುವನ ಸುಂದರಿ ಹಾಗೂ ಬಾಲಿವುಡ್ ತಾರೆ ಸುಶ್ಮಿತಾ ಸೇನ್ ಅವರ ಈ ಅವತಾರ ನೋಡಿದರೆ ಯಾರಿಗೇ ಆಗಲಿ ಮುಜುಗರವಾಗುತ್ತದೆ. "ಇದೇನು ಸಭ್ಯತೆ ಇದೇನು ಸಂಸ್ಕೃತಿ" ಎಂದು ಮತ್ತೊಮ್ಮೆ 'ಮಣ್ಣಿನ ಮಗ' ಚಿತ್ರದ ಗೀತಪ್ರಿಯ ರಚನೆಯ ಹಾಡನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

I Am She ಪತ್ರಿಕಾಗೋಷ್ಠಿಗೆ ಸುಶ್ಮಿತಾ ಸೇನ್ ಮಿನಿ ಸ್ಕರ್ಟ್ ನಲ್ಲಿ ಬಂದಿದ್ದರು. ಮೊದಲೇ ನೀಲಕಾಲ್ಗಳ ಚೆಲುವೆ. ಪತ್ರಿಕಾಗೋಷ್ಠಿಯಲ್ಲಿ ಪಟ್ಟಾಂಗ ಹೊಡೆಯುತ್ತಾ, ತಮ್ಮ ಕಾಲ್ಗಗಳನ್ನು ಹಾಗೆ ಹೀಗೆ ಮಾಡುತ್ತಾ ಕೊನೆಗೆ ತಮ್ಮ ಒಳಚಡ್ಡಿಯ ದರ್ಶನ ಮಾಡಿಸಿ ಮುಂದೆ ಕುಳಿತಿದ್ದವರು ಉಸಿರು ಬಿಗಿಹಿಡಿಯುವಂತೆ ಮಾಡಿದರು.

ಕೊರಿಯಾದ ಬೂಸಾನ್ ನಲ್ಲಿ ನಡೆದ ಮಿಸ್ ಏಷ್ಯಾ ಫೆಸಿಫಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹಿಮಾಂಗಿನಿ ಸಿಂಗ್ ಯಾದು ಅವರನ್ನು ಸನ್ಮಾನಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಶ್ಮಿತಾರ I Am She ಸಂಸ್ಥೆ ಕಾರ್ಯಕ್ರಮದ ರೂವಾರಿ.

"ಈ ಟೈಟಲ್ ಗೆಲ್ಲುವ ಮೂಲಕ ಭಾರತದ ಗೌರವ ಘನತೆಗಳನ್ನು ಹಿಮಾಂಗಿನಿ ಎತ್ತಿಹಿಡಿದಿದ್ದಾರೆ. ಸುದೀರ್ಘ ಸಮಯದ ಬಳಿಕ ಈ ಟೈಟಲ್ ಭಾರತಕ್ಕೆ ಸಿಗುತ್ತಿದೆ. ನಮಗೆಲ್ಲಾ ಹಿಮಾಂಗಿನಿ ಅತಿದೊಡ್ದ ಉಡುಗೊರೆಯನ್ನೇ ನೀಡಿದ್ದಾರೆ. ವಿಶ್ವ ಭೂಪಟದಲ್ಲಿ ಮತ್ತೊಮ್ಮೆ ಭಾರತೀಯ ನಾರಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ" ಎಂದು ಹಾಡು ಹೊಗಳಿದರು.

ಆದರೆ ಅವರು ಈ ರೀತಿ ಹೊಗಳುತ್ತಾ ಹೊಗಳುತ್ತಾ ಮೈಮೇಲೆ ಪರಿವೇ ಇಲ್ಲದಂತೆ ನಡೆದುಕೊಂಡದ್ದು ಸಭಿಕರನ್ನು ಮುಜುಗರಕ್ಕೀಡು ಮಾಡಿತು. ಸುಶ್ಮಿತಾ ಅವರೇನು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. 37ರ ಹರೆಯದ ಸುಶ್ಮಿತಾ ಹೀಗೆ ಮಾಡಿದ್ದು ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಹಿಂದೊಮ್ಮೆ ಐಟಂ ಬೆಡಗಿ ಯಾನಾ ಗುಪ್ತಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ರೀತಿ ಬಾಟಂ ಐಟಂ ಪ್ರದರ್ಶಿಸಿದ್ದರು. ಆದರೆ ದುರಂತ ಎಂದರೆ ಸುಶ್ಮಿತಾ ಸೇನ್ ಅವರಾದರೂ ಒಳಚಡ್ಡಿ ಹಾಕಿದ್ದರು ಆದರೆ ಯಾನಾ ಏನೂ ಹಾಕಿರಲಿಲ್ಲ.

ಇನ್ನೂ ಹಿಂದಕ್ಕೆ ಸರಿದರೆ ಬಾಲಿವುಡ್ ತಾರೆ ಶಮಿತಾ ಶೆಟ್ಟಿ ಸಹ ಹೀಗೆ ಚಲ್ಲಣ ಮರೆತು ಬಂದಿದ್ದರು. ಆಗಲೂ ಅಷ್ಟೇ ಸಖತ್ ಸುದ್ದಿ ಮಾಡಿದ್ದರು. ಒಟ್ಟಿನಲ್ಲಿ ಮಾನ ಮುಚ್ಚಿಕೊಳ್ಳಲು ಕೆಲವರಿಗೆ ಬಟ್ಟೆ ಇಲ್ಲ ಪೂರ್ತಿ ಮೈ ಮುಚ್ಚಲು ಕೆಲವರಿಗೆ ಮನಸಿಲ್ಲ ಅಷ್ಟೇ. (ಒನ್ಇಂಡಿಯಾ ಕನ್ನಡ)

English summary
I am She organisation founder and former Miss universe Sushmita Sen had sort of a wardrobe malfunction during a press conference to welcome the newly crowned Miss Asia Pacific Himangini Singh Yadu. Himangini was sent to the beauty pageant by I am She.
Please Wait while comments are loading...