»   » ಅರಗಿಣಿ ಜತೆ ಪುರಿ ಜಗನ್ನಾಥ್ ಚಕ್ಕಂದ (ವಿಡಿಯೋ)

ಅರಗಿಣಿ ಜತೆ ಪುರಿ ಜಗನ್ನಾಥ್ ಚಕ್ಕಂದ (ವಿಡಿಯೋ)

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಕನ್ನಡದಲ್ಲಿ 'ಯುವರಾಜ' ಹಾಗೂ 'ಅಪ್ಪು' ಚಿತ್ರಗಳನ್ನು ನಿರ್ದೇಶಿಸಿದ್ದ ಪುರಿ ಜಗನ್ನಾಥ್ ಟಾಲಿವುಡ್ ನಲ್ಲಿ ಬಲು ಬೇಡಿಕೆಯ ನಿರ್ದೇಶಕ. ಹಲವು ಯಶಸ್ವಿ ಚಿತ್ರಗಳ ಸರದಾರ. ಅರಗಿಣಿ ಜತೆ ಚಕ್ಕಂದ ಆಡುತ್ತಿರುವ ವಿಡಿಯೋ ಒಂದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ!

ಯಾವ ಅರಗಿಣಿ ಎಂದು ತಲೆಕೆಡಿಸಿಕೊಳ್ಳಬೇಡಿ. ಈ ವಿಡಿಯೋ ನೋಡಿದರೆ ನಿಮಗೇ ಅರ್ಥವಾಗುತ್ತದೆ, ಇದು ಹಚ್ಚ ಹಸಿರಿನ ಅರಗಿಣಿ ಎಂದು! ಅವರಿಬ್ಬರ ಆಟಪಾಟ ನೋಡಿದರೆ ನಮಗೂ ಒಮ್ಮೆ ಆ ಗಿಳಿ ಕೈಯಲ್ಲಿ ಆ ರೀತಿ ಆಟವಾಡಬೇಕು, ಕಚಗುಳಿ ಅನುಭವಿಸಬೇಕು ಅನ್ನಿಸುತ್ತದೆ.

Puri Jagannath

ಪುರಿ ಜಗನ್ನಾಥ್ ಅವರಿಗೆ ಬಹಳ ಹಿಂದಿನಿಂದಲೂ ಮೂಕ ಪ್ರಾಣಿಗಳನ್ನು ಸಾಕುವ, ಅವನ್ನು ಪೋಷಿಸುವಂತಹ ಹವ್ಯಾಸ ಇದೆ. ಇತ್ತೀಚೆಗೆ ಈ ಅರಗಿಣಿಯನ್ನು ಮನೆಗೆ ತಂದಿದ್ದಾರೆ. ಆ ಅರಗಿಣಿಗೂ ತನ್ನ ಯಜಮಾನ ಇಷ್ಟವಾಗಿದ್ದಾನೆ. ತುಟಿಗೆ ತುಟಿ ಬೆರಸುತ್ತಾ ಇಬ್ಬರೂ ಈ ರೀತಿ ಆಟವಾಡುತ್ತಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗಿನ 'ಪೋಕಿರಿ' ಚಿತ್ರ ಕನ್ನಡಕ್ಕೆ 'ಪೊರ್ಕಿ'ಯಾಗಿ ರೀಮೇಕ್ ಆಗಿತ್ತು. 'ಪೋಕಿರಿ' ಚಿತ್ರದ ಹಿಂದಿನ ಸೂತ್ರಧಾರ ಪುರಿ ಜಗನ್ನಾಥ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನಾಯಕ ನಟನನ್ನಾಗಿ ಪರಿಚಯಿಸಿದ 'ಅಪ್ಪು' ಚಿತ್ರದ ಬಳಿಕ ಅವರು ಮತ್ತೆ ಕನ್ನಡ ಚಿತ್ರರಂಗದತ್ತ ತಲೆಹಾಕಲಿಲ್ಲ.

Post by Puri Jagannadh.

English summary
Check out Tollywood director Puri Jagannath's little baby bird video. He posted the video on his Facebook. His fans liked, shared the video very much.
Please Wait while comments are loading...