»   » ಯೋಗರಾಜ್ ಭಟ್ರ ಸಾಲುಗಳೇ ರಿಜೆಕ್ಟ್ ಆದಾಗ.!

ಯೋಗರಾಜ್ ಭಟ್ರ ಸಾಲುಗಳೇ ರಿಜೆಕ್ಟ್ ಆದಾಗ.!

Posted By:
Subscribe to Filmibeat Kannada

ನಿರ್ದೇಶನಕ್ಕಿಂತ ಗೀತ ಸಾಹಿತ್ಯದಲ್ಲೇ ಯೋಗರಾಜ್ ಭಟ್ ಫೇಮಸ್. 'ಕತ್ತಲಲ್ಲಿ ಕರಡಿಗೆ ಜಾಮೂನು' ತಿನ್ನಿಸುವ ಭಟ್ರು 'ಹಳೆ ಪಾತ್ರೆ, ಹಳೆ ಕಬ್ಣ'ದಂತಹ 'ಎಬಡ ತಬಡ' ಲಿರಿಕ್ಸ್ ಬರೆಯೋದ್ರಲ್ಲಿ ಎತ್ತಿದ ಕೈ.

ಈ ಕಾರಣಕ್ಕೆ ಭಟ್ರ ಪೆನ್ನಿಗೆ ಡಿಮ್ಯಾಂಡ್ ಜಾಸ್ತಿ. ಸಿನಿಮಾದಲ್ಲಿ ಒಂದು ಹಾಡನ್ನಾದರೂ ಭಟ್ರ ಕೈಲಿ ಬರೆಯಿಸಲೇಬೇಕು ಅಂತ ಎಷ್ಟೋ ನಿರ್ಮಾಪಕರು ಮತ್ತು ನಿರ್ದೇಶಕರು ಯೋಗರಾಜ್ ಭಟ್ ಬೆನ್ನ ಹಿಂದೆ ಬಿದ್ದಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬರು ಭಟ್ರ ಹಾಡನ್ನೇ ರಿಜೆಕ್ಟ್ ಮಾಡಿದ್ದಾರೆ.!


Director Yogaraj Bhat lyrics rejected in 'RX Soori'

ಯೆಸ್...ದುನಿಯಾ ವಿಜಿ ಅಭಿನಯಿಸುತ್ತಿರುವ 'RX ಸೂರಿ' ಚಿತ್ರದಲ್ಲಿ ಯೋಗರಾಜ್ ಭಟ್ ಬರೆದ ಸಾಹಿತ್ಯ ತಿರಸ್ಕೃತವಾಗಿದೆ. 'RX ಸೂರಿ' ಚಿತ್ರದ ಟೈಟಲ್ ಸಾಂಗ್ ನ ಭಟ್ರು ಕೊಂಚ ಡಿಫರೆಂಟ್ ಆಗಿ ಬರೆದಿದ್ದರು. [ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ!]


ಅಷ್ಟು ಡಿಫರೆಂಟ್ ಆಗಿರುವ ಸಾಹಿತ್ಯ ನಿರ್ದೇಶಕ ಶ್ರೀ ಜೈಗೆ ಹಿಡಿಸಲಿಲ್ಲವೇನೋ. ಅದಕ್ಕೆ ಆ ಹಾಡನ್ನ ರಿಜೆಕ್ಟ್ ಮಾಡಿ ವಿ.ನಾಗೇಂದ್ರ ಪ್ರಸಾದ್ ಅವರ ಕೈಲಿ ಹೊಸ ಹಾಡು ಬರೆಸಿದರಂತೆ.


Director Yogaraj Bhat lyrics rejected in 'RX Soori'

ಎಲ್ಲೆಲ್ಲೂ ಭಟ್ಟರ ಪದಗಳೇ ಮೊಳಗುತ್ತಿರುವ ಈಗಿನ ಕಾಲದಲ್ಲಿ ಭಟ್ಟರ ಸಾಲು ಬೇಡ ಅಂದವರಲ್ಲಿ ಬಹುಶಃ ಮೊದಲಿಗರು ಇವರೇ ಇರಬೇಕು.!! ಭಟ್ರ ಪದಪುಂಜ ಇಲ್ಲದೆ 'RX ಸೂರಿ' ಆಡಿಯೋ ಕ್ಲಿಕ್ ಆದ್ರೆ, ಟ್ರೆಂಡ್ ಚೇಂಜ್ ಆಗಬಹುದಾ..??

English summary
Kannada Director Yogaraj Bhat lyrics for Duniya Vijay starrer 'RX Soori' title song is rejected. According to the sources, Director Shri Jai was dissatisfied with the song and made V.Nagendra Prasad to pen a new song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada