»   » ನಿಂಬೆಹುಳಿ ಹಿಂದಿಯಲ್ಲಿ ಪಾನಕವಾಗಲ್ಲ : ಹೇಮಂತ್ ಹೆಗ್ಡೆ

ನಿಂಬೆಹುಳಿ ಹಿಂದಿಯಲ್ಲಿ ಪಾನಕವಾಗಲ್ಲ : ಹೇಮಂತ್ ಹೆಗ್ಡೆ

Posted By: ಸೋನು ಗೌಡ
Subscribe to Filmibeat Kannada

ಕನ್ನಡದ ನಟ ಕಮ್ ನಿರ್ದೆಶಕ ಹೇಮಂತ್ ಹೆಗ್ಡೆ ಅವರು ನಿರ್ದೇಶಿಸಿ, ನಟಿಸಿದ್ದ 'ನಿಂಬೆಹುಳಿ' ಚಿತ್ರ ಕಳೆದ ವರ್ಷ ಸ್ವಲ್ಪ ಸಮಯ ಗಾಂಧಿನಗರದಲ್ಲಿ ಭಾರಿ ಸೌಂಡ್ ಮಾಡಿತ್ತು. ಇದೀಗ ಹೇಮಂತ್ ಹೆಗ್ಡೆ ಅವರು ನನ್ನ 'ನಿಂಬೆಹುಳಿ' ಚಿತ್ರವನ್ನು ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.

ಅಂದಹಾಗೆ ಹೇಮಂತ್ 'ನಿಂಬೆಹುಳಿ' ಯಾರಿಗೆ ಅಷ್ಟೊಂದು ಹುಳಿಯಾಗಿದೆ ಅಂತ ನೀವು ಯೋಚ್ನೆ ಮಾಡುತ್ತಿದ್ದೀರಾ, ಬೇರಾರಿಗೂ ಅಲ್ಲ ಅದು ನಮ್ಮ ಹಿಂದಿ ನಟ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ರಿಯಾಲಿಟಿ ಶೋ ಖ್ಯಾತಿಯ ಕಪಿಲ್ ಶರ್ಮಾರಿಗೆ ನಿಂಬೆಹುಳಿ ರುಚಿಸಿದೆ ಅಂತ ಹೇಮಂತ್ ಕಂಪ್ಲೈಂಟ್.

Hemanth Hegde on Nimbehuli remake right Controversy

ಕಪಿಲ್ ಶರ್ಮಾ ಅವರ ಹೊಸ 'ಕಿಸ್ ಕಿಸ್ಕೊ ಪ್ಯಾರ್ ಕರು' ಚಿತ್ರ ನಮ್ಮ ಹೇಮಂತ್ ಅವರ 'ನಿಂಬೆಹುಳಿ' ಚಿತ್ರದ ರಿಮೇಕ್ ಅಂತೆ. ಜೊತೆಗೆ ಕಪಿಲ್ ಶರ್ಮಾ ಅವರು ಈ ಚಿತ್ರದ ರಿಮೇಕ್ ಹಕ್ಕು ನನ್ನಿಂದ ಪಡೆದಿಲ್ಲ ಅಂತ ಹೇಮಂತ್ ಅವರು ಗೋಳೋ ಅಂತ ಅಳುತ್ತಿದ್ದಾರೆ.

ನಿರ್ದೇಶಕ ಕಮ್ ನಟ ಹೇಮಂತ್ ಹೇಳುವ ಪ್ರಕಾರ ಅವರು ತಮಿಳು ನಿರ್ದೇಶಕ ಕೆ.ಮಾದೇಶ್ ಅವರಿಗೆ ಮಾತ್ರ ತಮ್ಮ 'ನಿಂಬೆಹುಳಿ' ರಿಮೇಕ್ ಹಕ್ಕು ನೀಡಿದ್ದು ಬಿಟ್ಟರೆ ಬೇರೆ ಯಾರಿಗೂ ನಾನು ನೀಡಿಲ್ಲ ಅನ್ನುತ್ತಿದ್ದಾರೆ.

ಆದರೆ ಕಪಿಲ್ ಯಾರನ್ನು ಕೇಳಿ ನನ್ನ 'ನಿಂಬೆಹುಳಿ' ಚಿತ್ರವನ್ನು ಅವರು ಯಾಕೆ 'ಕಿಸ್ ಕಿಸ್ಕೊ ಪ್ಯಾರ್ ಕರು' ಅಂತ ಮಾಡಿಕೊಂಡಿದ್ದಾರೆ ಅಂತ ಹೇಮಂತ್ ಹೆಗ್ಡೆಯವರು ಬಾಯಿ ಬಾಯಿ ಬಡ್ಕೋತಾ ಇದ್ದಾರೆ.

Hemanth Hegde on Nimbehuli remake right Controversy

ಆದರೆ ಮೂಲಗಳ ಪ್ರಕಾರ ಆ ಥರ ಏನೂ ಇಲ್ಲ ಹೇಮಂತ್ ಸುಖಾ-ಸುಮ್ಮನೆ ಸುದ್ದಿ ಮಾಡುತ್ತಿದ್ದಾರೆ ಅಂತ ಕೆಲವಾರು ಬಲ್ಲವರು ಮಾತನಾಡುತ್ತಿದ್ದಾರೆ.

ಈ ಮೊದಲು ಪಕ್ಕಾ ಕಾಮಿಡಿ ಚಿತ್ರವಾದ 'ನಿಂಬೆಹುಳಿ' ಚಿತ್ರದ ಬಿಡುಗಡೆಗೂ ಮೊದಲು ಚಿತ್ರದ ಪೋಸ್ಟರ್ ಮೂಲಕ ನಟ ಹೇಮಂತ್ ಹೆಗ್ಡೆ ಅವರು ಭಾರಿ ಸುದ್ದಿಯಾಗಿದ್ದರು. ಇದೀಗ 'ನಿಂಬೆಹುಳಿ' ಕದ್ದಿದ್ದಾರೆ ಅಂತ ಸುದ್ದಿ ಮಾಡುತ್ತಿದ್ದಾರೆ. [ಚಾಪ್ಲಿನ್ ಚಿತ್ರಗಳ ಸಾಲಿನಲ್ಲಿ ಹೇಮಂತ್ 'ನಿಂಬೆಹುಳಿ']

ಅದೇನೇ ಇರಲಿ 'ನಿಂಬೆಹುಳಿ' ನಂತರ ಗಾಂಧಿನಗರದಲ್ಲಿ ಪತ್ತೆ ಇಲ್ಲದ ಹೇಮಂತ್ ಈ ಮೂಲಕನಾದ್ರೂ ಸುದ್ದಿಯಾಗಿ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರಲ್ಲ ಅಂತ ಅಲ್ಲಲ್ಲಿ ಕೆಲವು ಮಾತುಗಳು ಕೇಳಿ ಬರುತ್ತಿವೆ.

English summary
Kannada director and actor Hemanth Hegde is claiming, Kapil Sharma's debut movie 'Kis Kisko Pyar Karoon' is a remake of last year's hit Kannada film 'Nimbe Huli'. Nimbe Huli is a fun film starring Actor Hemanth Hegde, Actress Komal Jha, Madhurima. The movie is directed by Hemanth Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada