For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಸಿಗ್ನಲ್ ಕೊಟ್ಟ ಹೊಂಬಾಳೆ ಫಿಲ್ಮ್ಸ್? ಯಾವ ಚಿತ್ರದಲ್ಲಿ ಯಾರಿಗೆ ನಾಯಕಿ ಆಗುತ್ತಾರೆ ಕೀರ್ತಿ ಸುರೇಶ್?

  |

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಹುಭಾಷಾ ನಟಿಗೆ ಅಭಿಮಾನಿಗಳಿಂಗ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೇರಳ ಕುಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದೆ. ಇದನ್ನು ನೋಡಿ ಸಂಸ್ಥೆಯ ಮುಂದಿನ ಸಿನಿಮಾದಲ್ಲಿ ಕೀರ್ತಿ ನಟಿಸೋದು ಪಕ್ಕಾ ಎನ್ನುವ ಚರ್ಚೆ ಶುರುವಾಗಿದೆ.

  KGF ಸರಣಿ ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಭಾರತೀಯ ಚಿತ್ರರಂಗದಲ್ಲೇ ಅತಿದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿದೆ. 'ಕಾಂತಾರ' ಸೆನ್ಸೇಷನಲ್‌ ಹಿಟ್‌ ಆಗಿ ಮತ್ತೆ ಸದ್ದು ಮಾಡ್ತಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ನಿರ್ಮಿಸ್ತಿದೆ. ಪ್ರಭಾಸ್, ಪೃಥ್ವಿರಾಜ್‌ ಸುಕುಮಾರನ್, ರಕ್ಷಿತ್ ಶೆಟ್ಟಿ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದೆ. KGF ಸರಣಿಯ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಸಂಸ್ಥೆ ಸುಳಿವು ನೀಡಿದೆ. ಯುವರಾಜ್‌ಕುಮಾರ್ ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

  ಕೀರ್ತಿ ಸುರೇಶ್ ಸಂಭಾವನೆ ಕೇಳಿ ರಶ್ಮಿಕಾ, ತಮನ್ನಾ, ಸಮಂತಾ ಶಾಕ್!ಕೀರ್ತಿ ಸುರೇಶ್ ಸಂಭಾವನೆ ಕೇಳಿ ರಶ್ಮಿಕಾ, ತಮನ್ನಾ, ಸಮಂತಾ ಶಾಕ್!

  ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಪ್ರಾಜೆಕ್ಟ್‌ನಲ್ಲಿ ಕೀರ್ತಿ ಸುರೇಶ್ ಕೆಲಸ ಮಾಡುತ್ತಾರೆ ಎನ್ನುವಯ ಗುಸುಗುಸು ಶುರುವಾಗಿದೆ. ಅದೇ ಕಾರಣಕ್ಕೆ ಸಂಸ್ಥೆ ಹುಟ್ಟುಹಬ್ಬದ ಶುಭಾಶಯ ಕೋರಿದೆ ಎನ್ನಲಾಗ್ತಿದೆ. ಆದರೆ ಯಾವ ಸಿನಿಮಾ ಎನ್ನುವುದು ಈಗ ದೊಡ್ಡ ಚರ್ಚೆ ಹುಟ್ಟಾಕ್ಕಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಸಾಕಷ್ಟು ಗೆಸ್‌ ಮಾಡಿ ಕಾಮೆಂಟ್ ಮಾಡ್ತಿದ್ದಾರೆ.

  ಸುಧಾ ಕೊಂಗರ ಚಿತ್ರದಲ್ಲಿ ಕೀರ್ತಿ?

  ಸುಧಾ ಕೊಂಗರ ಚಿತ್ರದಲ್ಲಿ ಕೀರ್ತಿ?

  ಬಹಳ ಹಿಂದೆಯೇ ತಮಿಳು ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದಲ್ಲಿ ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದೆ. ಆದರೆ ಆ ಚಿತ್ರದ ನಾಯಕ, ನಾಯಕಿ ಯಾರು ಎನ್ನುವುದು ಇನ್ನು ಕನ್ಫರ್ಮ್‌ ಆಗಿಲ್ಲ. ಈ ಹಿಂದೆ ಹೀರೊ ಆಗಿ ತಮಿಳು ನಟ ಸೂರ್ಯ ಹೆಸರು ಕೇಳಿಬಂದಿತ್ತು. ನಂತರ ಸಿಂಬು ಹೆಸರು ಚಾಲ್ತಿಗೆ ಬಂದಿದೆ. ಇದೇ ಚಿತ್ರದಲ್ಲಿ ಸಿಂಬು ಜೋಡಿಯಾಗಿ ಕೀರ್ತಿ ಸುರೇಶ್ ನಟಿಸಬಹುದು ಎನ್ನುವುದು ಕೆಲವರ ಲೆಕ್ಕಾಚಾರ.

  ಸುದೀಪ್ ಜೋಡಿಯಾಗಿ ಮಹಾನಟಿ?

  ಸುದೀಪ್ ಜೋಡಿಯಾಗಿ ಮಹಾನಟಿ?

  ಇತ್ತೀಚೆಗೆ ಕಿಚ್ಚ ಸುದೀಪ್ ಹಾಗೂ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಮಾತುಗಳು ಕೇಳಿಬಂದಿತ್ತು. ಕಿಚ್ಚನ ಜೊತೆ ನಿರ್ಮಾಪಕರಾದ ಕಾರ್ತಿಕ್ ಗೌಡ ಫೋಟೊ ಕ್ಲಿಕ್ಕಿಸಿಕೊಂಡು ಮಾಡಿದ್ದ ಪೋಸ್ಟ್ ಇಂತಾದೊಂದು ಅನುಮಾನಕ್ಕೆ ಕಾರಣವಾಗಿತ್ತು. ಇದೇ ಚಿತ್ರಕ್ಕೆ ಮಹಾನಟಿ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆ ಆಗಬಹುದು ಎನ್ನುವುದು ಸುದೀಪ್ ಅಭಿಮಾನಿಗಳ ಊಹೆಯಾಗಿದೆ. ಸುಧಾ ಕೊಂಗರ ನಿರ್ದೇಶನದಲ್ಲಿ ಸುದೀಪ್- ಕೀರ್ತಿ ನಟಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನುವುದು ಕೆಲವರ ವಾದ.

  ಯುವ ಅಥವಾ ರಕ್ಷಿತ್ ಚಿತ್ರಕ್ಕೆ ಕೀರ್ತಿ?

  ಯುವ ಅಥವಾ ರಕ್ಷಿತ್ ಚಿತ್ರಕ್ಕೆ ಕೀರ್ತಿ?

  ಹೊಂಬಾಳೆ ಸಂಸ್ಥೆ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸುವ 'ರಿಚರ್ಡ್ ಆಂಟನಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇನ್ನು ಸಂತೋಷ್ ಆನಂದ್‌ರಾಮ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಿಸಿದೆ. ಈ ಎರಡರಲ್ಲಿ ಒಂದು ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ ಆಗಬಹುದು, ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಡ್ತಾರೆ ಎನ್ನುವುದು ಕೆಲವರ ಲೆಕ್ಕಾಚಾರ. ಒಟ್ನಲ್ಲಿ ಹೊಂಬಾಳೆ ಸಂಸ್ಥೆಯ ಯಾವ ಚಿತ್ರದಲ್ಲಿ ಮಹಾನಟಿ ನಟಿಸ್ತಾರೋ ಕಾದು ನೋಡಬೇಕು.

  ತಮಿಳು, ತೆಲುಗು ಚಿತ್ರಗಳಲ್ಲಿ ಕೀರ್ತಿ ಬ್ಯುಸಿ

  ತಮಿಳು, ತೆಲುಗು ಚಿತ್ರಗಳಲ್ಲಿ ಕೀರ್ತಿ ಬ್ಯುಸಿ

  'ಮಹಾನಟಿ' ಆಗಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಚೆಲುವೆ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ತಮಿಳಿನ 'ಮಾಮನನ್' ಹಾಗೂ 'ಸಿರೆನ್' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಭೋಳಾ ಶಂಕರ' ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ನಟಿಸ್ತಿರೋ ಮಲಯಾಳಿ ಚೆಲುವೆ 'ದಸರಾ' ಚಿತ್ರದಲ್ಲಿ ನಾನಿಗೆ ಜೋಡಿಯಾಗಿದ್ದಾರೆ. ನಿಧಾನವಾಗಿ ಗ್ಲಾಮರಸ್ ರೋಲ್‌ಗಳಿಗೂ ಸೈ ಎನ್ನುತ್ತಿದ್ದಾರೆ.

  ಸೋನು ಗೌಡ ಆಪ್ತ ಗೆಳತಿ ಕೀರ್ತಿ ಸುರೇಶ್: ಕೀರ್ತಿಯನ್ನು ಏನಂತ ಕರೀತಾರೆ ಸೋನು?ಸೋನು ಗೌಡ ಆಪ್ತ ಗೆಳತಿ ಕೀರ್ತಿ ಸುರೇಶ್: ಕೀರ್ತಿಯನ್ನು ಏನಂತ ಕರೀತಾರೆ ಸೋನು?

  English summary
  Hombale Films and Keerthy Suresh likely to collaborate for upcoming movie. Know More.
  Monday, October 17, 2022, 14:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X