»   » ಬೇಡ ಬೇಡ ಅಂದ್ರೂ ದೀಪಿಕಾಗೆ ಬಲವಂತ ಚುಂಬನ

ಬೇಡ ಬೇಡ ಅಂದ್ರೂ ದೀಪಿಕಾಗೆ ಬಲವಂತ ಚುಂಬನ

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಗುಳಿಕೆನ್ನೆಗೆ ಪಪ್ಪಿ ಕೊಡಬೇಕು ಎಂದು ಬಹಳಷ್ಟು ಮಂದಿ ಕನಸು ಕಾಣುತ್ತಿರುತ್ತಾರೆ. ಆದರೆ ಆ ಭಾಗ್ಯ ಎಲ್ಲರಿಗೂ ಅಷ್ಟು ಸುಲಭವಾಗಿ ಸಿಗಲ್ಲ ಬಿಡಿ. ಕೆಲವರು ಬಲವಂತದಿಂದ ತಮ್ಮ ಆಸೆ ಪೂರೈಸಿಕೊಳ್ಳುತ್ತಾರೆ.

ಇಷ್ಟ ಇರಲಿ ಬಿಡಲಿ ಪಪ್ಪಿ ಕೊಡಲು ಅವರೇನು ಚಿಕ್ಕಮಗುವೇ? ಕೆಲವೊಮ್ಮೆ ಕಸಿವಿಸಿ ಅನ್ನಿಸಿದರೂ ಸಿನಿಮಾ ತಾರೆಗಳು ಸಹಿಸಿಕೊಳ್ಳಬೇಕಾಗುತ್ತದೆ. ಅಂತಹದ್ದೇ ಮುಜುಗರ ಪ್ರಸಂಗ ದೀಪಿಕಾ ಪಡುಕೋಣೆ ಅವರಿಗೂ ಎದುರಾಯಿತು. ಬಾಲಿವುಡ್ ನ 'ಫೈಂಡಿಂಗ್ ಫ್ಯಾನಿ ಫೆರ್ನಾಂಡೀಸ್' ಚಿತ್ರದ ನಿರ್ದೇಶಕ ಆದಜಾನಿಯಾ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ದೀಪಿಕಾರನ್ನು ಮುದ್ದಾಡಿದರು.


ಕಾರ್ಯಕ್ರಮದಲ್ಲಿ ಬೇಡ ಬೇಡ ಎನ್ನುತ್ತಿದ್ದರೂ ಬಿಡದೆ ಈ ನಿರ್ದೇಶಕ ಮಹಾಶಯ ದೀಪಿಕಾರನ್ನು ಬರಸೆಳೆದು ತಮ್ಮ ತುಟಿಯನ್ನು ಕೆನ್ನೆಗೆ ಒತ್ತಿಯೇ ಬಿಟ್ಟ. ಆದರೆ ಈ ಘಟನೆಯನ್ನು ದೀಪಿಕಾ ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ ಬಿಡಿ. ಇಲ್ಲದಿದ್ದರೆ ದೊಡ್ಡ ರಾದ್ಧಾಂತವಾಗುತ್ತಿತ್ತು. ಪಾರ್ಟಿಯಲ್ಲಿ ಎಲ್ಲರೊಂದಿಗೂ ಕಳೆದು ಎಂಜಾಯ್ ಮಾಡಿದರು. [ದೀಪಿಕಾ ಇನ್ನೊಂದು ಚುಂಬನ ಪ್ರಸಂಗ]

ಆದರೆ ಅಲ್ಲಿದ್ದ ಮಾಧ್ಯಮ ಮಿತ್ರರು ದೀಪಿಕಾಗೆ ಆದ ಕಸಿವಿಸಿ ಪ್ರಸಂಗವನ್ನು ಗಮನಿಸಿದರು. ಅವರ ಮುಖದಲ್ಲಾದ ಬದಲಾವಣೆ, ಅವರ ಹಾವಭಾವದಲ್ಲಾದ ವ್ಯತ್ಯಾಸ ಅವರ ಗಮನಕ್ಕೆ ಬಂದೇ ಬಂತು. ಆದರೆ ಕಾರ್ಯಕ್ರಮಕ್ಕೆ ದೀಪಿಕಾ ಹಾಲಿ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಲೇಟಾಗಿ ಬಂದರು.

ಒಂದು ವೇಳೆ ಆತ ಬಂದ ಮೇಲೆ ಈ ಚುಂಬನ ಪ್ರಸಂಗ ನಡೆದಿದ್ದರೆ ಕಥೆ ಬೇರೆ ಇರುತ್ತಿತ್ತು ಎಂಬುದು ಪ್ರತ್ಯಕ್ಷ ಕಂಡವರ ಅನಿಸಿಕೆ. ಈ ಕಾರ್ಯಕ್ರಮ ತಡರಾತ್ರಿವರೆಗೂ ನಡೆದಿದೆ. ಬಳಿಕ ದೀಪಿಕಾ, ರಣವೀರ್ ಎಲ್ಲರೂ ಯಾರಿಗೂ ಅನುಮಾನ ಬರದಂತೆ ತಮ್ಮ ತಮ್ಮ ಕಾರುಗಳಲ್ಲಿ ಮನೆಗೆ ಸೇಫ್ ಆಗಿ ಹೋಗಿದ್ದಾರೆ. ಆದರೆ ಚುಂಬನ ಚಿತ್ರಗಳು ಮಾತ್ರ ಎಲ್ಲಡೆ ಟಾಂ ಟಾಂ ಆಗಿವೆ.

English summary
Deepika Padukone, who is riding high with the recent success of her film Ram Leela and Chennai Express had to apparently face a 'not so comfortable' situation when Homi Adajania, director of Finding Fanny kept kissing Deepika against her wishes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada