»   » ಇಳಯರಾಜ ಲಂಡನ್ ಸಂಗೀತ ಮಾಹಿತಿ ಲೀಕ್

ಇಳಯರಾಜ ಲಂಡನ್ ಸಂಗೀತ ಮಾಹಿತಿ ಲೀಕ್

Posted By:
Subscribe to Filmibeat Kannada
Music Maestro Ilaiyaraaja
ಸಂಗೀತ ಮಾಂತ್ರಿಕ ಇಳಯರಾಜ ಕುರಿತಾದ ಮಾಹಿತಿಯೊಂದು ಲಂಡನ್ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ. ಅವರು ಲಂಡನ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಗಾನಸುಧೆಯನ್ನು ಹರಿಸಲಿದ್ದಾರೆ ಎಂಬ ಮಹತ್ವದ ಮಾಹಿತಿ ಸ್ಫೋಟಗೊಂಡಿದೆ.

ಒಲಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ತೇಲಿ ಬರಲಿರುವ ಹಾಡುಗಳ ಪಟ್ಟಿಯಲ್ಲಿ ಇಳಯರಾಜ ಅವರ ಹೆಸರು ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಒಟ್ಟು 86 ಗೀತೆಗಳಲ್ಲಿ ಇಳಯರಾಜ ಅವರ ತಮಿಳು ಗೀತೆಯೂ ಒಂದು ಎನ್ನುತ್ತವೆ ಮೂಲಗಳು.

ಕಮಲ್ ಹಾಸನ್ ಹಾಗೂ ಶ್ರೀಪ್ರಿಯಾ ಅಭಿನಯದ 1981ರಲ್ಲಿ ತೆರೆಕಂಡ 'ರಾಮ್ ಲಕ್ಷ್ಮಣ್' ಎಂಬ ಚಿತ್ರದ "ನಾಂಧಾನ್ ಉಂಗಪ್ಪಂಡ..." ಎಂಬ ಗೀತೆ ಲಂಡನ್ ಒಲಂಪಿಕ್ಸ್‌ನಲ್ಲಿ ತೇಲಿಬರಲಿದೆಯಂತೆ. ಪಟ್ಟಿಯಲ್ಲಿ ಮೈಕೇಲ್ ಜಾಕ್ಸನ್ ಸೇರಿದಂತೆ ಹಲವಾರು ಪಾಪ್ ತಾರೆಗಳ ಟ್ರಾಕ್ಸ್ ಕೂಡ ಇವೆ ಎನ್ನಲಾಗಿದೆ.

ಈ ಬಗ್ಗೆ ಇಳಯರಾಜ ವಕ್ತಾರ ಮಾತನಾಡುತ್ತಾ, ಒಲಂಪಿಕ್ಸ್ ಕ್ರೀಡಾ ನಿರ್ವಾಹಕರಿಂದ ತಮಗೆ ಇದುವರೆಗೂ ಯಾವುದೇ ತೆರನಾದ ಮಾಹಿತಿ ಬಂದಿಲ್ಲ. ಆದರೆ ಇಳಯರಾಜ ಅವರ ಹಿತೈಷಿಗಳು ಮಾತ್ರ ಅವರಿಗೆ ಕರೆ ಮಾಡಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. "ಇದು ಕೇವಲ ವದಂತಿಯೋ ಅಥವಾ ನಿಜವಾಗಿಯೂ ಅವರು ಆಯ್ಕೆಯಾಗಿದ್ದಾರೋ ಎಂಬ ಗೊಂದಲ ನಮಗೂ ಇದೆ" ಎಂದಿದ್ದಾರೆ.

ಕನ್ನಡ ಚಿತ್ರರಂಗದೊಂದಿಗೆ ಇಳಯರಾಜ ಅವರ ಒಡನಾಟ ಮೂರು ದಶಕಗಳಿಗೂ ಹಳೆಯದು. ಅವರ ಸಂಗೀತ ಸಂಯೋಜಿಸಿದ ಹಲವಾರು ಕನ್ನಡ ಚಿತ್ರಗೀತೆಗಳು ಇಂದಿಗೂ ಹೊಸದಾಗಿ ಕೇಳಿಸುತ್ತವೆ. ನೀನನ್ನ ಗೆಲ್ಲಲಾರೆ, ಗೀತಾ, ಪಲ್ಲವಿ ಅನುಪಲ್ಲವಿ, ಜನ್ಮಜನ್ಮ ದ ಅನುಬಂಧ ಚಿತ್ರದ ಹಾಡುಗಳು ಇಂದಿಗೂ ಅಜರಾಮರ.

ನಂತರದ ದಿನಗಳಲ್ಲಿ ಬಂದ ನಮ್ಮೂರ ಮಂದಾರ ಹೂವೆ, ಶಿವಸೈನ್ಯ ,ನಮ್ಮ ಪ್ರೀತಿಯ ರಾಮು, ಹೂಮಳೆ ಚಿತ್ರದ ಹಾಡುಗಳು ಪ್ರೇಕ್ಷಕರು ಮತ್ತೆ ಮತ್ತೆ ಗುನುಗುವಂತೆ ಮಾಡಿದ್ದವು. ಒಲಂಪಿಕ್ಸ್‌ಗೆ ಅವರು ಯಾವುದಾದರೂ ಹಳೆಯ ಕನ್ನಡದ ಗೀತೆ ಆಯ್ಕೆಯಾಗಿದ್ದಿದ್ದರೆ ಅದರ ಕತೇನೇ ಬೇರೆಯಾಗಿರುತ್ತಿತ್ತು ಅಲ್ಲವೆ? (ಏಜೆನ್ಸೀಸ್)

English summary
The hottest buzz these days is that one of maestro Ilaiyaraaja’s songs features in the song list for the opening ceremony of the upcoming Olympics Games to be held in London. The song Naandhaan Ungappanda… from the 1981 film Ram Lakshman, starring Kamal Haasan and Sripriya, features among the list of 86 songs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada