For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ನಂತರ, ಮುಂದಿನ 'ಚೆಂಗುಮಣಿ' ಆಗ್ತಾರಾ ಮನೋರಂಜನ್.?

  By Suneetha
  |

  ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನವ ಪ್ರತಿಭೆಗಳು, ತಮ್ಮ ಚೊಚ್ಚಲ ಸಿನಿಮಾ ರಿಲೀಸ್ ಆಗೋ ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಅವಕಾಶ ಗಿಟ್ಟಿಸಿಕೊಳ್ಳೋದು ಬಹಳ ಕಡಿಮೆ. ಅದೃಷ್ಟ ನೆಟ್ಟಗಿದ್ದರೆ, ಅಪರೂಪಕ್ಕೆ ಮೇಲಿಂದ-ಮೇಲೆ ಅವಕಾಶಗಳು ಸಿಗುತ್ತವೆ.

  ಆದರೆ ಈ ವಿಚಾರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ಅವರು ಮಾತ್ರ ಕೊಂಚ ವಿಭಿನ್ನವಾಗಿದ್ದಾರೆ. 'ರಣಧೀರ' ಅವರ ಮುದ್ದಿನ ಮಗ ಮನೋರಂಜನ್ ಇದೀಗ ಸದ್ಯಕ್ಕೆ ಗಾಂಧಿನಗರದಲ್ಲಿ 'ಟಾಕ್ ಆಫ್ ದ ಟೌನ್' ಆಗಿದ್ದಾರೆ.

  ಮನೋರಂಜನ್ ಅವರ ಚೊಚ್ಚಲ ಸಿನಿಮಾ 'ಸಾಹೇಬ' ತೆರೆ ಕಾಣುವ ಮುನ್ನವೇ ಒಂದಲ್ಲಾ, ಎರಡು ಸಿನಿಮಾಗಳಲ್ಲಿ ನಟಿಸಲು ಆಫರ್ ಗಿಟ್ಟಿಸಿಕೊಂಡು, ಸ್ಯಾಂಡಲ್ ವುಡ್ ನ ಲಕ್ಕಿ ನಟ ಎಂದು ಕರೆಸಿಕೊಂಡಿದ್ದಾರೆ.

  ಅಂದಹಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕಾಲಿವುಡ್ ನ 'ವಿಐಪಿ' (ವೇಲೆಯಿಲ್ಲಾ ಪಟ್ಟದಾರಿ) ಚಿತ್ರದ ರೀಮೇಕ್ ಹಕ್ಕು ಖರೀದಿ ಮಾಡಿದ್ದು, ಗೊತ್ತೇ ಇದೆ. ಅದೇ ಚಿತ್ರಕ್ಕೆ ನಟ ಮನೋರಂಜನ್ ಅವರನ್ನು ಆಯ್ಕೆ ಮಾಡಿದ್ದಾರೆ ಅಂತ ಕೂಡ ನಾವು ಈ ಮೊದಲು ಇದೇ ಫಿಲ್ಮಿಬೀಟಲ್ಲಿ ತಿಳಿಸಿದ್ವಿ.[ರಾಕ್ ಲೈನ್ ಜೊತೆ 'ವಿಐಪಿ'ಗೆ ಕೈ ಜೋಡಿಸುತ್ತಾರಾ ಮನೋರಂಜನ್?]

  ಇದೀಗ ರಾಕ್ ಲೈನ್ ಅವರ 'ವಿಐಪಿ' ಜೊತೆಗೆ ಮತ್ತೊಂದು ಚಿತ್ರಕ್ಕೂ ಮನೋರಂಜನ್ ಅವರು ಬುಕ್ ಆಗಿದ್ದಾರೆ. ಯಾವ ಸಿನಿಮಾ?, ಏನ್ಕತೆ?, ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

  ಕಾದಂಬರಿ ಆಧಾರಿತ ಸಿನಿಮಾ

  ಕಾದಂಬರಿ ಆಧಾರಿತ ಸಿನಿಮಾ

  ಈ ಬಾರಿ ಕಾದಂಬರಿ ಆಧಾರಿತ ಚಿತ್ರವೊಂದರಲ್ಲಿ ನಟಿಸಲು ನಟ ಮನೋರಂಜನ್ ರವಿಚಂದ್ರನ್ ಅವರಿಗೆ ಬುಲಾವ್ ಬಂದಿದೆ.['ಸಾಹೇಬ' ಚಿತ್ರದ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಶಾನ್ವಿ ಶ್ರೀವಾತ್ಸವ]

  'ಚೆಂಗುಮಣಿ'ಯಾದ ಮನೋರಂಜನ್

  'ಚೆಂಗುಮಣಿ'ಯಾದ ಮನೋರಂಜನ್

  'ಭಾರತೀಸುತ ಅವರ ಕಾದಂಬರಿ ಆಧಾರಿತ 'ಚೆಂಗುಮಣಿ' ಚಿತ್ರದಲ್ಲಿ ನಟ ಮನೋರಂಜನ್ ಅವರು ಕಾಣಿಸಿಕೊಳ್ಳಲಿದ್ದಾರೆ. 18ನೇ ಶತಮಾನದಲ್ಲಿ ಕೂರ್ಗ್ ಪ್ರದೇಶದ ಮುಖ್ಯಸ್ಥನೊಬ್ಬನ ಕಥೆಯಾಧರಿತ ಈ ಚಿತ್ರಕ್ಕೆ 'ಗೋಲಿಸೋಡಾ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ 'ರಾಜಗುರು' ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಮೂಲಕ ರಾಜಗುರು ಅವರು ಸ್ವತಂತ್ರ ನಿರ್ದೇಶಕರಾಗಲಿದ್ದಾರೆ.[ಕುದುರೆ ಸವಾರಿಗೆ ತರಬೇತಿ ಪಡೆಯುತ್ತಿದ್ದಾರೆ 'ಕ್ರೇಜಿಸ್ಟಾರ್' ಪುತ್ರ]

  'ವಿಐಪಿ'ಗೆ ನಂದಕಿಶೋರ್ ಸಾರಥ್ಯ

  'ವಿಐಪಿ'ಗೆ ನಂದಕಿಶೋರ್ ಸಾರಥ್ಯ

  ತಮಿಳಿನ 'ವಿಐಪಿ' ಚಿತ್ರದ ರೀಮೇಕ್ ಗೆ ನಂದಕಿಶೋರ್ ಅವರು ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ನಂದಕಿಶೋರ್ ಅವರು 'ಮುಕುಂದ ಮುರಾರಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ಪ್ರದೀಪ್ ನಟನೆಯ 'ಟೈಗರ್' ಮುಗಿಸಬೇಕಾಗಿದೆ.

  ಮೊದಲ ಕಮರ್ಷಿಯಲ್ ಸಿನಿಮಾ

  ಮೊದಲ ಕಮರ್ಷಿಯಲ್ ಸಿನಿಮಾ

  1979ರಲ್ಲಿ ತೆರೆಕಂಡ 'ಹುಲಿಯ ಹಾಲಿನ ಮೇವು' ಚಿತ್ರದಲ್ಲಿ ವರನಟ ಡಾ.ರಾಜ್ ಅವರು 'ಚೆಂಗುಮಣಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮನೋರಂಜನ್ ಸರದಿ, ಈ ಚಿತ್ರ ಮನೋರಂಜನ್ ಅಭಿನಯದ ಮೊದಲ ಕಮರ್ಷಿಯಲ್ ಸಿನಿಮಾ.

  ಮನೋರಂಜನ್ ಗೆ ಮೇಲಿಂದ ಮೇಲೆ ಅವಕಾಶ

  ಮನೋರಂಜನ್ ಗೆ ಮೇಲಿಂದ ಮೇಲೆ ಅವಕಾಶ

  ಒಟ್ನಲ್ಲಿ ಚೊಚ್ಚಲ ಸಿನಿಮಾ ತೆರೆ ಕಾಣುವ ಮುನ್ನವೇ ಮನೋರಂಜನ್ ಅವರಿಗೆ ಅವಕಾಶಗಳ ಸುರಿಮಳೆ ಸುರಿಯುತ್ತಿದೆ. ಈ ಎರಡೂ ಸಿನಿಮಾಗಳು ಮಾತ್ರವಲ್ಲದೇ, ಇನ್ನೊಂದು ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಲು ಮನೋರಂಜನ್ ಅವರಿಗೆ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ.

  English summary
  Kannada Actor Manoranjan seems to have won many hearts in the industry even before he makes his screen debut. His first film 'Saheba', directed by Bharath, is yet to be released and Manoranjan has already been offered three other movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X