For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಜೊತೆಗೆ ಮತ್ತೊಂದು ದಾಖಲೆ ಮಾಡಲು ಸಜ್ಜಾದ ಕಿಚ್ಚ

  By Suneetha
  |

  ಕಿಚ್ಚ ಸುದೀಪ್ ಅವರು ಬರೀ ಹಿರಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲೂ ಭಾರಿ ಫೇಮಸ್ಸು. ಮೈಕ್ ಹಿಡಿದು ಸ್ಟೇಜ್ ಗೆ ಸುದೀಪ್ ಅವರು ಎಂಟ್ರಿ ಕೊಟ್ರು ಅಂದ್ರೆ ಒಂದರೆಕ್ಷಣ ವೇದಿಕೆ ಕೂಡ ಸೈಲೆಂಟ್ ಆಗಿ ಬಿಡುತ್ತೆ.

  ಬರೀ ನಟನೆಯಲ್ಲಿ ಮಾತ್ರವಲ್ಲದೇ, ತಮ್ಮ ವಾಕ್ ಚಾತುರ್ಯದಿಂದ ಕೂಡ ಸುದೀಪ್ ಅವರು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಮೊದಲ ಬಾರಿಗೆ 'ಪ್ರೇಮದ ಕಾದಂಬರಿ' ಎಂಬ ಧಾರಾವಾಹಿ, ನಂತರ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು'ನಲ್ಲಿ ನಿರೂಪಕರಾಗಿ, ತದನಂತರ 'ಬಿಗ್ ಬಾಸ್' ಮೂಲಕ ಸುದೀಪ್ ಅವರು ಕಿರುತೆರೆಗೆ ಎಂಟ್ರಿ ಕೊಟ್ಟು ಖ್ಯಾತಿ ಗಳಿಸಿದರು.['ಬಿಗ್ ಬಾಸ್' ಬಗ್ಗೆ ಕಿಚ್ಚ ಸುದೀಪ್ ಬಿಚ್ಚಿಟ್ಟ ಮನದಾಳ]

  ಇದೀಗ ಮತ್ತೆ ಇನ್ನೊಂದು ಅವತಾರದಲ್ಲಿ ಕಿರುತೆರೆಯತ್ತ ಕಿಚ್ಚ ಮುಖ ಮಾಡಿದ್ದಾರೆ. ಆದರೆ ಈ ಬಾರಿ ಯಾವುದೋ ಕಾರ್ಯಕ್ರಮದ ನಿರೂಪಕರಾಗಿ ಅಲ್ಲ. ಬದ್ಲಾಗಿ ನಿರ್ಮಾಪಕರಾಗಿ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ.

  ಅಂದಹಾಗೆ ಸುದೀಪ್ ಯಾವುದಕ್ಕೆ ಬಂಡವಾಳ ಹಾಕುತ್ತಿದ್ದಾರೆ.?, ಧಾರಾವಾಹಿ, ರಿಯಾಲಿಟಿ ಶೋ, ಅಥವಾ ಕಾಮಿಡಿ ಶೋನಾ.?. ತಿಳಿಯಲು ಮುಂದೆ ಓದಿ....

  ನಿರ್ಮಾಪಕರಾದ ಸುದೀಪ್

  ನಿರ್ಮಾಪಕರಾದ ಸುದೀಪ್

  ಕಿರುತೆರೆಯಲ್ಲಿ ನಿರೂಪಕರಾಗಿದ್ದ ಸುದೀಪ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಇಷ್ಟು ದಿನ ಬಿಗ್ ಸ್ಕ್ರೀನ್ ಗಳಲ್ಲಿ ನಟನೆಯ ಜೊತೆಗೆ ನಿರ್ಮಾಪಕ ಕಮ್ ನಿರ್ದೇಶಕರಾಗಿದ್ದ ಸುದೀಪ್ ಅವರು ಮೊದಲ ಬಾರಿಗೆ ಕಿರುತೆರೆಯಲ್ಲೂ ನಿರ್ಮಾಪಕರ ಜವಾಬ್ದಾರಿ ಹೊತ್ತಿದ್ದಾರೆ.

  ಧಾರಾವಾಹಿಗೆ ಸುದೀಪ್ ನಿರ್ಮಾಪಕ

  ಧಾರಾವಾಹಿಗೆ ಸುದೀಪ್ ನಿರ್ಮಾಪಕ

  ಇದೇ ಮೊದಲ ಬಾರಿಗೆ ಸುದೀಪ್ ಅವರು ಧಾರಾವಾಹಿ ಒಂದಕ್ಕೆ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಬಿಗ್ ಸ್ಕ್ರೀನ್ ಗಳಲ್ಲಿ ಸಾಕಷ್ಟು ಬಿಜಿಯಾಗಿರುವ ಸುದೀಪ್ ಅವರು ಕಿರುತೆರೆಯ ಕೆಲಸಗಳತ್ತ ಕೂಡ ಮುಖ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ 'ಬಿಗ್ ಬಾಸ್' ಕೂಡ ಆರಂಭವಾಗಲಿದ್ದು, ಕಿರುತೆರೆಯ ಎರಡು ಕೆಲಸಗಳನ್ನು ಒಟ್ಟಿಗೆ ನಿಭಾಯಿಸಲಿದ್ದಾರೆ.

  ಯಾವ ಧಾರಾವಾಹಿ.?

  ಯಾವ ಧಾರಾವಾಹಿ.?

  ಜೀ ಕನ್ನಡ ವಾಹಿನಿಯಲ್ಲಿ ಮುಂದಿನ ತಿಂಗಳಿನಿಂದ ಪ್ರಸಾರವಾಗಲಿರುವ 'ವಾರಸ್ದಾರ' (ತಾತ್ಕಾಲಿಕ ಟೈಟಲ್) ಎಂಬ ಕೌಟುಂಬಿಕ ಧಾರಾವಾಹಿಗೆ, ಸುದೀಪ್ ಅವರು ಬಂಡವಾಳ ಹಾಕುತ್ತಿದ್ದಾರೆ. ಸದ್ಯಕ್ಕೆ 'ವಾರಸ್ದಾರ' ಅಂತ ಹೆಸರಿಟ್ಟಿದ್ದಾರೆ. ಇನ್ನು ಇವರಿಬ್ಬರ ಲಿಸ್ಟ್ ನಲ್ಲಿ 'ಯಜಮಾನ', 'ಮಾಣಿಕ್ಯ' ಮತ್ತು 'ರಾಜಕುಮಾರ' ಮುಂತಾದ ಹೆಸರುಗಳಿವೆ. ಯಾವುದು ಆಯ್ಕೆ ಆಗುತ್ತೆ ಅಂತ ಮುಂದಿನ ದಿನದಲ್ಲಿ ಕಾದು ನೋಡಬೇಕು.

  ನಿರ್ದೇಶಕರು ಯಾರು.?

  ನಿರ್ದೇಶಕರು ಯಾರು.?

  ಕನ್ನಡ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದಿರುವ ನಿರ್ದೇಶಕ ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿದ ನಟ ಕಮ್ ನಿರ್ದೇಶಕ ಗಡ್ಡಾ ವಿಜಿ ಅವರು, ಈ ಧಾರಾವಾಹಿಯ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಮೊದಲು ಗಡ್ಡಾ ವಿಜಿ ಅವರು 'ದ್ಯಾವ್ರೆ' ಮತ್ತು 'ಪ್ಲಸ್' ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಜೊತೆಗೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲೂ ಸಣ್ಣ ಪಾತ್ರ ವಹಿಸಿದ್ದರು.['ಅನಂತ್ ನಾಗ್ ಗೆ ಡಿಫರೆಂಟ್ ಲುಕ್ ಕೊಟ್ಟ ಹೆಗ್ಗಳಿಕೆ ನನ್ನದು']

  'ವಾಜಿ' ಬದಲು 'ವಾರಸ್ದಾರ'

  'ವಾಜಿ' ಬದಲು 'ವಾರಸ್ದಾರ'

  ನಿರ್ದೇಶಕ ಗಡ್ಡಾ ವಿಜಿ ಅವರು 'ವಾಜಿ' ಅನ್ನೋ ವಿಭಿನ್ನ ಸಿನಿಮಾ ಮಾಡಲಿದ್ದಾರೆ ಅಂತ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರ ವಹಿಸಲಿದೆ ಅಂತಲೂ ಹೇಳಿದ್ವಿ. ಇದೀಗ 'ವಾಜಿ'ಯನ್ನು ಮುಂದಕ್ಕೆ ಹಾಕಿದ ಗಡ್ಡಾ ವಿಜಿ ಅವರು, 'ವಾರಸ್ದಾರ' ಧಾರಾವಾಹಿ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

  ಯಾವಾಗ ಪ್ರಸಾರ.?

  ಯಾವಾಗ ಪ್ರಸಾರ.?

  ಮುಂದಿನ ತಿಂಗಳಿನಿಂದ ಧಾರಾವಾಹಿಯ ಚಿತ್ರೀಕರಣ ಆರಂಭವಾಗಲಿದ್ದು, ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ 'ವಾರಸ್ದಾರ' ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿದೆ.

  ಕಥೆ ಏನು.?

  ಕಥೆ ಏನು.?

  ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರಲಿರುವ 'ವಾರಸ್ದಾರ' ಧಾರಾವಾಹಿ ನಾಯಕಿ ಪ್ರಧಾನ ಕಥೆಯಾಗಿದೆ. ಎರಡು ಮನೆತನಗಳ ನಡುವೆ 'ವಾರಸ್ದಾರ' ಧಾರಾವಾಹಿ ಕಥೆ ಸಾಗಲಿದೆ. ಈಗಾಗಲೇ ಕಲಾವಿದರ ಆಯ್ಕೆ ಪ್ರಕ್ರಿಯೆ ಕೂಡ ನಡೆಯುತ್ತಿದೆ.

  English summary
  Kannada Actor Sudeep's Kichcha Creations, which has earlier produced several films, is now taking a plunge into the small screen. Dyavre fame Film director Gadda Viji is all set to direct a mega serial for the actor's home banner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X