»   » ಸಿಂಬು ಜತೆ ತುಟಿಗೆ ತುಟಿ ಬೆರೆಸಿದ್ದು ಕನ್ನಡ ನಟಿನಾ?

ಸಿಂಬು ಜತೆ ತುಟಿಗೆ ತುಟಿ ಬೆರೆಸಿದ್ದು ಕನ್ನಡ ನಟಿನಾ?

Posted By: ಉದಯರವಿ
Subscribe to Filmibeat Kannada

ಈ ರೀತಿಯ ಸುದ್ದಿಗಳು ಬಣ್ಣದ ಜಗತ್ತಿನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕೋಲಾಹಲ ಉಂಟು ಮಾಡಿದೆ. ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಲಿಪ್ ಲಾಕ್ ಪ್ರಕರಣ ನಡೆದಿದೆ ಎನ್ನಲಾಗಿದೆ.

ಮಲೇಷ್ಯಾದ ಹೋಟೆಲ್ ಒಂದರಲ್ಲಿ ಕುಡಿದ ಅಮಲಿನಲ್ಲಿ ಸಿಂಬು ನಟಿಯೊಬ್ಬಳನ್ನು ಅಪ್ಪಿ ಮುದ್ದಾಡುತ್ತಾ ತುಟಿಗೆ ತುಟಿ ಬೆರೆಸುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದೀಗ ಈ ವಿಡಿಯೋ ಕ್ಲಿಪ್ಪಿಂಗ್ ಯೂಟ್ಯೂಬ್ ನಲ್ಲಿ ಭಾರಿ ಗದ್ದಲ ಎಬ್ಬಿಸಿದೆ.

kissing video controversy, Simbu claims it fake

ಈ ವಿಡಿಯೋದಲ್ಲಿರುವುದು ನಟಿ ಹರ್ಷಿಕಾ ಪೂಣಚ್ಚ ಎಂದು ಕೆಲವು ಮಾಧ್ಯಮಗಳಲ್ಲಿ ಹೇಳಲಾಗಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಹರ್ಷಿಕಾ ಅವರು, "ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಿಂಬು ಪರಿಚಯವಾಗಿತ್ತು. ಅವರ ನಟನೆ, ಡಾನ್ಸಿಂಗ್ ನೋಡಿ ತುಂಬಾ ಖುಷಿಪಟ್ಟಿದ್ದೆ. ಅವರ ಜೊತೆಗೆ ಒಂದು ಫೋಟೋವನ್ನೂ ತೆಗೆಸಿಕೊಂಡಿದ್ದೆ. ಇದು ಬಿಟ್ಟರೆ ಇನ್ಯಾವ ಘಟನೆಯೂ ನಮ್ಮಿಬ್ಬರ ನಡುವೆ ನಡೆದಿಲ್ಲ" ಎಂದಿದ್ದಾರೆ.

ಹರ್ಷಿಕಾ ಪೂಣಚ್ಚ ಅವರು ಆ ವಿಡಿಯೋ ಕ್ಲಿಪ್ಪಿಂಗ್ ನಲ್ಲಿರುವುದು ನಾನಲ್ಲ ಎನ್ನುತ್ತಿದ್ದರೆ ಸಿಂಬು ಸಹ ನಾನಲ್ಲ ಎನ್ನುತ್ತಿದ್ದಾರೆ. ಮಸುಕು ಮಸುಕಾಗಿರುವ ಈ ವಿಡಿಯೋದಲ್ಲಿರುವುದು ಯಾರೆಂಬುದು ಸದ್ಯಕ್ಕೆ ಬಗೆಹರೆಯದ ಪ್ರಶ್ನೆಯಾಗಿ ಉಳಿದಿದೆ.

English summary
A kissing video of two youngsters is out in social networking sites and people started spreading the link by saying that the youngsters are Tamil actor Simbu and Kannada actress Harshika. Both the actors has said that the video is fake and he is not the one who is seen in the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada