»   » ಸ್ಯಾಂಡಲ್ ವುಡ್ ನಲ್ಲಿ ಅನೂಪ್ ನಿಂತ: ಗಲ್ಲಾಪೆಟ್ಟಿಗೆಯಲ್ಲಿ 'ಲಕ್ಷ್ಮಣ' ಗೆದ್ದ

ಸ್ಯಾಂಡಲ್ ವುಡ್ ನಲ್ಲಿ ಅನೂಪ್ ನಿಂತ: ಗಲ್ಲಾಪೆಟ್ಟಿಗೆಯಲ್ಲಿ 'ಲಕ್ಷ್ಮಣ' ಗೆದ್ದ

By: Sony
Subscribe to Filmibeat Kannada

ನಿರ್ದೇಶಕ ಆರ್.ಚಂದ್ರು ಯಶಸ್ಸಿನ ಯಾತ್ರೆ 'ಲಕ್ಷ್ಮಣ' ಮೂಲಕ ಮುಂದುವರೆದಿದೆ. ನಿನ್ನೆಯಷ್ಟೇ ಆರ್.ಚಂದ್ರು ನಿರ್ದೇಶನದ 'ಲಕ್ಷ್ಮಣ' ಚಿತ್ರ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ.

ಹೊಸ ಹುಡುಗ ಅನೂಪ್ ರೇವಣ್ಣ ಹವಾ ಗಾಂಧಿನಗರದಲ್ಲಿ ಜೋರಾಗಿರುವಾಗಲೇ 'ಲಕ್ಷ್ಮಣ' ಚಿತ್ರದ ಫಸ್ಟ್ ಡೇ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ.['ಲಕ್ಷ್ಮಣ' ವಿಮರ್ಶೆ: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ 'ಆಕ್ಷನ್ ಹೀರೋ']


Lakshmana First Day Box Office prediction Rs.2 Crore

ಹೇಳಿಕೇಳಿ, ನಿನ್ನೆ 'ಲಕ್ಷ್ಮಣ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಫಸ್ಟ್ ಶೋ ಕೂಡ ಹೌಸ್ ಫುಲ್ ಆಗಿತ್ತು. ಹೀಗಾಗಿ, ಗಾಂಧಿನಗರದ ಗಲ್ಲಾಪೆಟ್ಟಿಗೆ ಪಂಟರು ಅಂದಾಜಿಸಿರುವ ಪ್ರಕಾರ, 'ಲಕ್ಷ್ಮಣ' ಚಿತ್ರದ ಫಸ್ಟ್ ಡೇ ಕಲೆಕ್ಷನ್ ಸುಮಾರು ಎರಡು ಕೋಟಿ ದಾಟಿದೆ.!


ಸ್ಟಾರ್ ಸಿನಿಮಾಗಳು ಕೋಟಿ-ಕೋಟಿ ಕಲೆಕ್ಷನ್ ಮಾಡುವುದನ್ನ ನೋಡಿದ್ರಿ, ಕೇಳಿದ್ರಿ. ಅಂಥದ್ರಲ್ಲಿ ನವ ಪ್ರತಿಭೆ ಅನೂಪ್ ರೇವಣ್ಣ ತಮ್ಮ ಚೊಚ್ಚಲ ಚಿತ್ರದಲ್ಲೇ 'ಕೋಟಿ ಹೀರೋ' ಆಗಿದ್ದಾರೆ ಅಂದ್ರೆ ಮೆಚ್ಚಲೇಬೇಕು.[ಯಶಸ್ಸು ಅಂದ್ರೆ 6 ತಿಂಗಳಿಗೊಂದು ಸಿನಿಮಾ ಮಾಡೋದಲ್ಲ: ಮೇಘನಾ]


Lakshmana First Day Box Office prediction Rs.2 Crore

ಅಂದ್ಹಾಗೆ, 'ಲಕ್ಷ್ಮಣ' ಔಟ್ ಅಂಡ್ ಔಟ್ ಆಕ್ಷನ್ ಮತ್ತು ಸೆಂಟಿಮೆಂಟ್ ತುಂಬಿರುವ ಸಿನಿಮಾ. ಅನೂಪ್ ರೇವಣ್ಣಗೆ ಮೇಘನಾ ರಾಜ್ ಜೋಡಿಯಾಗಿದ್ದಾರೆ. ನೀವಿನ್ನೂ 'ಲಕ್ಷ್ಮಣ' ಚಿತ್ರ ನೋಡಿಲ್ಲ ಅಂದ್ರೆ, ಈ ವೀಕೆಂಡ್ ನಲ್ಲಿ ನೋಡ್ಕೊಂಡ್ ಬನ್ನಿ....

English summary
According to the Trade Experts in Sandalwood, Anup Revanna starrer R.Chandru directorial 'Lakshmana' First Day Collection is predicted around Rs.2 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada