For Quick Alerts
  ALLOW NOTIFICATIONS  
  For Daily Alerts

  ನಟಿ ಟಬು ಜೊತೆ ಸಂಬಂಧ ಇದೆ ಎಂದ ನಿರ್ದೇಶಕ

  By ಉದಯರವಿ
  |
  ಬಣ್ಣದ ದುನಿಯಾದಲ್ಲಿ ಇದೇನು ಹೊಸದಲ್ಲ ಬಿಡಿ. ಆ ನಟಿಯ ಜೊತೆ ಈ ನಟ, ಇನ್ಯಾರೋ ನಟಿಯ ಜೊತೆ ನಿರ್ಮಾಪಕನ ಡಿಂಗ್ ಡಾಂಗ್, ನಿರ್ದೇಶಕನ ಕಣ್ಣಾಮುಚ್ಚಾಲೆಯಂತಹ ಸುದ್ದಿಗಳು ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ ಇಲ್ಲಿ ನಿರ್ದೇಶಕರೊಬ್ಬರು ತಮ್ಮ ಸಂಬಂಧವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ.

  ಬಾಲಿವುಡ್ ನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ವಿಶೇಷ ಸ್ಥಾನಮಾನ ಪಡೆದಿರುವ ನಿರ್ದೇಶಕ ಮಧುರ್ ಭಂಡಾರ್ಕರ್. ಇವರು ಹೆಚ್ಚಾಗಿ ನಿರ್ದೇಶಿಸಿದ್ದು ಹೀರೋಯಿನ್ ಓರಿಯಂಟೆಡ್ ಸಿನಿಮಾಗಳನ್ನು. ಬಾಲಿವುಡ್ ನ ಟಾಪ್ ಹೀರೋಯಿನ್ ಗಳ ಜೊತೆ ಸಿನಿಮಾ ಮಾಡಿ ಸಕ್ಸಸ್ ಫುಲ್ ನಿರ್ದೇಶಕ ಎನ್ನಿಸಿಕೊಂಡವರು.

  ಭಂಡಾರ್ಕರ್ ಅವರಿಗೆ ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಒಳ್ಳೆಯ ಬ್ರೇಕ್ ಕೊಟ್ಟರು. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಭಂಡಾರ್ಕರ್ ಹೊರಹಾಕಿದರು.

  ಒಂದು ಕಾಲಘಟ್ಟದಲ್ಲಿ ಹಾಟ್ ಹೀರೋಯಿನ್ ಎಂದು ಗುರುತಿಸಿಕೊಂಡಿದ್ದ ಟಬು ಅವರೊಂದಿಗಿನ ತನ್ನ ಸಂಬಂಧ ಭಿನ್ನವಾದದ್ದು ಎಂದಿದ್ದಾರೆ. ಆಕೆ ನನ್ನ ಫೇವರಿಟ್ ಹೀರೋಯಿನ್. ಅವರಂತಹ ಪ್ರತಿಭಾವಂತರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದೂ ಹೇಳಿದ್ದಾರೆ.

  ಮಧುರ್ ಭಂಡಾರ್ಕರ್ ನಿರ್ದೇಶನದ 'ಚಾಂದಿನಿ ಬಾರ್' ಚಿತ್ರದಲ್ಲಿ ಟಬು ಅಭಿನಯಿಸಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಟಬು ರಾಷ್ಟ್ರ ಪ್ರಶಸ್ತಿಗೂ ಪಾತ್ರರಾಗಿದ್ದರು. "ನನ್ನೊಂದಿಗೆ ಕೆಲಸ ಮಾಡಿದ ನಟಿಮಣಿಯರೆಲ್ಲಾ ಗ್ರೇಟ್. ಆದರೆ ಟಬು ಮಾತ್ರ ಎಲ್ಲರಿಗಿಂತ ಭಿನ್ನ. ಆಕೆಯೊಂದಿಗೆ ನನ್ನ ಸಂಬಂಧ ಸ್ವಲ್ಪ ಎಮೋಷನಲ್ ಆಗಿದೆ" ಎಂದು ಭಂಡಾರ್ಕರ್ ಹೇಳಿಕೊಂಡಿದ್ದಾರೆ.

  'ಚಾಂದಿನಿ ಬಾರ್' ಚಿತ್ರಕ್ಕೂ ಮುನ್ನ ಸಾಕಷ್ಟು ರೀಚರ್ಚ್ ಮಾಡಿದೆ. ಸರಿಸುಮಾರು 60 ಬಾರ್ ಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಟಬು ಅವರು ನಾನು ಹೇಳಿದ ಸ್ಕ್ರಿಪ್ಟನ್ನು ಕೇಳಿ ಅದೆಷ್ಟೂ ಸಂಭ್ರಮದಿಂದ ಆ ಪಾತ್ರನ್ನು ಪೋಷಿಸಿದರು ಎಂದಿದ್ದಾರೆ ಭಂಡಾರ್ಕರ್.

  English summary
  Bollywood's renowned filmmaker Madhur Bhandarkar has worked with a few top-notch actresses in his films. From Priyanka Chopra to Kareena Kapoor, Bhandarkar is said to have given the real big break to several stars. But, guess what? Madhur has recently confessed his emotional connection with actress Tabu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X