»   » ಪ್ರಿಯಕರನ ಜೊತೆ ತಾರೆ ಮೀರಾ ಜಾಸ್ಮಿನ್ ಲವ್ವಿ ಡವ್ವಿ

ಪ್ರಿಯಕರನ ಜೊತೆ ತಾರೆ ಮೀರಾ ಜಾಸ್ಮಿನ್ ಲವ್ವಿ ಡವ್ವಿ

Posted By:
Subscribe to Filmibeat Kannada
ನಟಿ ರಾಧಿಕಾ ಅವರ ಅನುಪಸ್ಥಿತಿಯಲ್ಲಿ ಬರಿದಾಗಿದ್ದ ತಂಗಿ ಪಾತ್ರವನ್ನು ಭರ್ತಿ ಮಾಡಿದ ಖ್ಯಾತಿ ಮೀರಾ ಜಾಸ್ಮಿನ್ ಅವರಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ತಂಗಿ ಎನ್ನಬಹುದು. 'ದೇವರು ಕೊಟ್ಟ ತಂಗಿ' ಮೀರಾ ಜಾಸ್ಮಿನ್ ಪ್ರೇಮ ಪುರಾಣ ಈಗ ಹೊಸ ತಿರುವು ಪಡೆದುಕೊಂಡಿದೆ. ಬಾಯ್ ಫ್ರೆಂಡ್ ಹಾಗೂ ಮಾಂಡೋಲಿನ್ ಲೋಲ ರಾಜೇಶ್ ಜೊತೆಗಿನ ಲವ್ವಿ ಡವ್ವಿಯನ್ನು ಒಪ್ಪಿಕೊಂಡಿದ್ದಾರೆ.

ತನ್ನ ಬಾಯ್ ಫ್ರೆಂಡ್ ಜೊತೆಗೆ ಲಿವ್ ಇನ್ (ಸಹಜೀವನ) ಸಂಬಂಧ ಇಟ್ಟುಕೊಂಡಿದ್ದೇನೆ ಎಂದಿದ್ದರು ಜಾಸ್ಮಿನ್. ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಹೌದು ನಾನು ರಾಜೇಶ್ ನನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದೇನೆ. ಆತನನ್ನು ಮದುವೆಯಾಗಬೇಕು ಎಂದೂ ಬಯಸಿದ್ದೇನೆ ಎಂದು ಹೇಳುವ ಮೂಲಕ ಸಭಿಕರನ್ನು ಗಲಿಬಿಲಿಗೊಳಿಸಿದ್ದರು.

ಆದರೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಇವರಿಬ್ಬರೂ ತಿರುಪತಿಯಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಬಿತ್ತರವಾಗಿತ್ತು. ಇದು ಮಾತ್ರ ಅಪ್ಪಟ ಸುಳ್ಳು ಎಂದಿರುವ ಮೀರಾ, ಮದುವೆ ಯಾವಾಗ ಆಗಬೇಕು ಎಂದು ನಾವಿಬ್ಬರೂ ಇನ್ನೂ ತೀರ್ಮಾನಿಸಿಲ್ಲ ಎಂದು ಹಳೆ ಡೈಲಾಗ್ ಹೊಡೆದಿದ್ದಾರೆ. ನಿರ್ಧರಿಸಿದ ಬಳಿಕ ಇಡೀ ಜಗತ್ತಿಗೇ ತಿಳಿಸಿ ಹಸೆಮಣೆ ಏರುತ್ತೇನೆ ಎಂದಿದ್ದಾರೆ.

ಮೀರಾ ಮತ್ತು ನಾನು ಒಬ್ಬರನ್ನು ಪ್ರೀತಿಸಿಕೊಳ್ಳುತ್ತಿರುವುದು ನಿಜ. ಆದರೆ ಮದುವೆಯಂತೂ ಸದ್ಯಕ್ಕಿಲ್ಲ. ನಿಧಾನಕ್ಕೆ ಇಬ್ಬರೂ ಸಪ್ತಪದಿ ತುಳಿಯುತ್ತೇವೆ ಎಂದಿದ್ದಾರೆ ರಾಜೇಶ್. ಇವರಿಬ್ಬರ ನಡುವೆ ಹೊಗೆಯಾಡುತ್ತಿದ್ದ ಪ್ರೀತಿ ಪ್ರೇಮ ಪ್ರಣಯ ಈಗ ಬೆಂಕಿಯ ರೂಪ ಪಡೆಯುತ್ತಿದೆ.

ಮೀರಾ ಮತ್ತು ಮ್ಯಾಂಡಲಿನ್ ಲೋಲ ರಾಜೇಶ್ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಸ್ವತಃ ಮೀರಾ ಜಾಸ್ಮಿನ್ ಅವರೆ ಸಭೆ ಸಮಾರಂಭಗಳಲ್ಲಿ ಆಗಾಗ ಬಾಯ್ಬಿಡುತ್ತಲೇ ಬಂದಿದ್ದಾರೆ. ಆದರೆ ಮದುವೆ ವಿಷಯಕ್ಕೆ ಬಂದಾಗ ಮಾತ್ರ ಇನ್ನೂ ನಿರ್ಧರಿಸಿಲ್ಲ ಎಂದು ಕಳೆದ ಒಂದು ವರ್ಷದಿಂದ ಅದೇ ರಾಗ ಅದೇ ತಾಳ. ಅಂದಹಾಗೆ ರಾಜೇಶ್ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯವರು. ಮೀರಾ ಅವರದು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದವರು. (ಏಜೆನ್ಸೀಸ್)

English summary
Actress Meera Jasmine says that she is in deep love with Mandolin Rajesh, but yet to decided on Marriage. When we do, I will let the whole world know about it — I won’t marry secretly said the actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada