For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ಜೊತೆ 'ಪಟಾಕ ಪೋರಿ' ನಭಾ ನಟೇಶ್ ನಟನೆ?

  |

  ಸೌತ್ ಇಂಡಸ್ಟ್ರಿಯಲ್ಲಿ ಮಿರ ಮಿರ ಮಿಂಚುತ್ತಿರುವ ನಭಾ ನಟೇಶ್ ಈಗ ಬಾಲಿವುಡ್‌ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಬಿಟೌನ್ ನಟ ಹೃತಿಕ್ ರೋಷನ್ ನಟಿಸಲಿರುವ ಚಿತ್ರದಲ್ಲಿ ನಭಾ ನಟೇಶ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

  ಒಂದು ವೇಳೆ ಈ ಸುದ್ದಿ ನಿಜವೇ ಆದರೆ ನಭಾ ನಟೇಶ್ ಮುಂಬೈ ವಿಮಾನ ಹತ್ತುವ ಮೂಲಕ ಬಿಗ್ ಇಂಡಸ್ಟ್ರಿ ಎಂಟ್ರಿ ಪಡೆಯಲಿದ್ದಾರೆ. ಸದ್ಯ ಟಾಲಿವುಡ್ ಪಾಲಿಗೆ ಡಾರ್ಲಿಂಗ್ ಎನಿಸಿಕೊಂಡಿರುವ ಕನ್ನಡದ ಹುಡುಗಿ ಒಂದರ ಹಿಂದೆ ಒಂದರಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ತಮ್ಮ ಕುರಿತ ಈ ಸುದ್ದಿ ಸತ್ಯವಲ್ಲ ಎಂದ 'ಪಟಾಕಾ' ನಭಾ ನಟೇಶ್ತಮ್ಮ ಕುರಿತ ಈ ಸುದ್ದಿ ಸತ್ಯವಲ್ಲ ಎಂದ 'ಪಟಾಕಾ' ನಭಾ ನಟೇಶ್

  ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜಾ, ಸೋಲೋ ಬ್ರಾತುಕೆ ಸೋ ಬೆಟರ್', ಅಂತಹ ಚಿತ್ರಗಳಲ್ಲಿ ಮಿಂಚಿರುವ ನಭಾ ಮೇಲೆ ಬಾಲಿವುಡ್ ಮಂದಿಯ ಕಣ್ಣು ಬಿದ್ದಿದೆ. ಅದರಲ್ಲೂ ಹೃತಿಕ್ ರೋಷನ್ ಅಂತಹ ಸೂಪರ್ ಸ್ಟಾರ್ ಜೊತೆ ಚೊಚ್ಚಲ ಸಿನಿಮಾ ಮಾಡಿದ್ದೆ ಆದರೆ ಇದಕ್ಕಿಂತ ಉತ್ತಮ ಡೆಬ್ಯೂ ನಭಾಗೆ ಸಿಗುವುದು ಅನುಮಾನ.

  ಅಂದ್ಹಾಗೆ, ಹೃತಿಕ್ ರೋಷನ್ ಮತ್ತು ನಭಾ ನಟೇಶ್ ನಟಿಸಬೇಕಾಗಿರುವುದು ರೆಗ್ಯೂಲರ್ ಸಿನಿಮಾ ಅಲ್ಲ. ಇದು ವೆಬ್ ಸಿರೀಸ್. ಜಾನ್ ಲೆ ಕ್ಯಾರಿ ಅವರ 'ದಿ ನೈಟ್ ಮ್ಯಾನೇಜರ್' ವೆಬ್ ಸರಣಿಯನ್ನು ಹಿಂದಿಗೆ ತರಲು ನಿರ್ಧರಿಸಿದ್ದು, ಇದರಲ್ಲಿ ಹೃತಿಕ್ ರೋಷನ್ ಮುಖ್ಯ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ. ಹೃತಿಕ್ ಜೊತೆಗೆ ನಭಾ ನಟೇಶ್ ಸಹ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ಈ ಮೂಲಕ ಅಭಿಷೇಕ್ ಬಚ್ಚನ್, ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್ ಅಂತಹ ಸ್ಟಾರ್ ನಟರ ಬಳಿಕ ಬಾಲಿವುಡ್ 'ಗ್ರೀಕ್ ಗಾಡ್' ಎಂದೇ ಗುರುತಿಸಿಕೊಂಡಿರುವ ಹೃತಿಕ್ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

  Nabha Natesh Likely to Star Opposite Hrithik Roshan in His Debut Web Series

  ನಭಾ ನಟೇಶ್ ಕುರಿತು

  2015ರಲ್ಲಿ ಶಿವರಾಜ್ ಕುಮಾರ್ ನಟನೆಯ 'ವಜ್ರಕಾಯ' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ಇದು ನಭಾ ನಟಿಸಿದ ಮೊದಲ ಕನ್ನಡ ಸಿನಿಮಾ. ಈ ಚಿತ್ರದ ನಂತರ ಸುಮಂತ್ ಜೊತೆ 'ಲೀ' ಚಿತ್ರದಲ್ಲಿ ನಟಿಸಿದರು. ಮನೋರಂಜನ್ ನಟನೆಯ 'ಸಾಹೇಬ' ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದರು.

  ನಭಾ ನಟೇಶ್ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್: 'ಪಟಾಕ' ಬಗ್ಗೆ ಟಾಲಿವುಡ್ ನಲ್ಲಿ ಟೀಕೆ.!ನಭಾ ನಟೇಶ್ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್: 'ಪಟಾಕ' ಬಗ್ಗೆ ಟಾಲಿವುಡ್ ನಲ್ಲಿ ಟೀಕೆ.!

  2018ರಲ್ಲಿ ಸುಧೀರ್ ಬಾಬು ನಟನೆಯ 'ನನ್ನು ದೋಚುಕುಂಡುವಟೆ' ಚಿತ್ರದೊಂದಿಗೆ ತೆಲುಗು ಪ್ರವೇಶಿಸಿದರು. ನಂತರ 'ಅದುಗೋ' ಸಿನಿಮಾ ಮಾಡಿದರು. ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಚಿತ್ರದಲ್ಲಿ ಕಾಣಿಸಿಕೊಂಡರು. ಬಳಿಕ ರವಿತೇಜ ನಟನೆಯ 'ಡಿಸ್ಕೋ ರಾಜ', 'ಸೋಲೋ ಬ್ರಾತುಕೆ ಸೋ ಬೆಟರ್', ಅಲ್ಲುಡು ಅದುರ್ಸ್ ಚಿತ್ರಗಳಲ್ಲಿ ನಟಿಸಿದರು. ಈಗ ನಿತೀನ್ ಅಭಿನಯದ ಮಾಸ್ಟ್ರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ.

  'ಫೈಟರ್' ಚಿತ್ರದಲ್ಲಿ ಹೃತಿಕ್ ರೋಷನ್

  ಸದ್ಯ ಹೃತಿಕ್ ರೋಷನ್ ಫೈಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಹೃತಿಕ್ ಜೊತೆ ಇದು ಮೊದಲ ಚಿತ್ರ. ಸಿದ್ಧಾರ್ಥ್ ಆನಂದ್ ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದು, ಇತ್ತೀಚಿಗಷ್ಟೆ ಫೋಟೋ ಸಹ ಹಂಚಿಕೊಂಡಿದ್ದರು.

  ಇನ್ನು ಕೊನೆಯದಾಗಿ ಟೈಗರ್ ಶ್ರಾಫ್ ಜೊತೆ ವಾರ್ ಚಿತ್ರದಲ್ಲಿ ಹೃತಿಕ್ ನಟಿಸಿದ್ದರು. ಸೈಫ್ ಅಲಿ ಖಾನ್ ಮತ್ತು ಹೃತಿಕ್ ಕಾಂಬಿನೇಷನ್‌ನಲ್ಲಿ ವಿಕ್ರಂವೇದ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

  ಕರ್ನಾಟಕ ಹಾಗೂ ಕನ್ನಡ ಸಿನಿಮಾಗಳಿಂದ ಸಿನಿ ಜರ್ನಿ ಆರಂಭಿಸಿದ ಹಲವು ನಟಿಯರು ಇಂದು ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ನಟಿಯರು ಎನಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ, ರಕುಲ್ ಪ್ರೀತ್ ಸಿಂಗ್, ಪೂಜಾ ಹೆಗಡೆ, ಶಾಲಿನಿ ಪಾಂಡೆ ಸೇರಿದಂತೆ ಇನ್ನು ಹಲವರು ಕನ್ನಡದವರು ಎನ್ನುವುದು ಖುಷಿಯ ಸಂಗತಿ. ಈ ಸಾಲಿನಲ್ಲಿ ನಭಾ ನಟೇಶ್ ಸಹ ಇದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ.

  English summary
  South actress Nabha Natesh Likely to Star Opposite Hrithik Roshan in His Debut Web Series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X