»   » ಶಾರುಖ್ ಚಿತ್ರಕ್ಕೆ ನಯನತಾರಾ ದೊಡ್ಡ ನಮಸ್ಕಾರ

ಶಾರುಖ್ ಚಿತ್ರಕ್ಕೆ ನಯನತಾರಾ ದೊಡ್ಡ ನಮಸ್ಕಾರ

Posted By:
Subscribe to Filmibeat Kannada

ಇಷ್ಟು ದಿನ ನಾಪತ್ತೆಯಾಗಿದ್ದ ನಟಿ ನಯನತಾರಾ ಈಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹಳೆಯ ನೆನಪುಗಳನ್ನೆಲ್ಲಾ ಮರೆತು ಹೊಸ ಚಿತ್ರಗಳಿಗೆ ಸಹಿಹಾಕುತ್ತಿದ್ದಾರೆ. ಇತ್ತೀಚೆಗೆ ಆಕೆಗೆ ಒಂದು ಆಫರ್ ಬಂದಿದೆ. ಅದೇನೆಂದರೆ ಐಟಂ ಡಾನ್ಸ್ ಆಫರ್.

ಎಲ್ಲೋ ಕಾಂಚಿಪಿಂಜಿ ಚಿತ್ರವಾಗಿದ್ದರೆ ನೋ ಎನ್ನಬಹುದಿತ್ತು. ಆದರೆ ನಯನಿಗೆ ಬಂದಿದ್ದದ್ದು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಚಿತ್ರದಲ್ಲಿ ಕುಣಿಯಲು. ಆದರೆ ನಯನತಾರಾ ಮಾತ್ರ ಒಲ್ಲೆ ಎಂದಿದ್ದಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಮಾಡಿದ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿದೆ.


ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಕುಣಿಯುವಂತೆ ನಯನತಾರಾಗೆ ಆಫರ್ ನೀಡಲಾಗಿತ್ತು. ಆದರೆ ನಯನತಾರಾ ಮಾತ್ರ ಅದ್ಯಾಕೋ ಏನೋ ಕುಣಿಯಲ್ಲ ಎಂದಿದ್ದಾರೆ.

ಮುಂಬೈನಿಂದ ರಾಮೇಶ್ವರಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಕಥೆಯ ಚೌಕಟ್ಟು. ಚಿತ್ರದಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಸಂಪ್ರದಾಯಕ್ಕೂ ಒತ್ತು ನೀಡಲಾಗಿದೆಯಂತೆ. ಹಾಗಾಗಿಯೇ ದಕ್ಷಿಣದ ಸುಂದರಿ ನಯನತಾರಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಆರಂಭದಲ್ಲೇ ನಯನತಾರಾ ನೋ ಎಂದಿದ್ದಾರೆ.

ಒಂದು ವೇಳೆ ಈ ಐಟಂ ಡಾನ್ಸ್ ಒಪ್ಪಿಕೊಂಡಿದ್ದರೆ ಬಾಲಿವುಡ್ ನಲ್ಲಿ ಮತ್ತೊಬ್ಬ ರಸಿಕರ ರಾಣಿಯಾಗಿ ನಯನತಾರಾ ಮಿಂಚಬಹುದಿತ್ತು. ಆದರೆ ಆಕೆಯ ಮಾಜಿ ಪ್ರಿಯತಮ ಪ್ರಭುದೇವ ಬಾಲಿವುಡ್ ನಲ್ಲಿ ಬಿಜಿಯಾಗಿರುವ ಕಾರಣ ತಾವು ಮತ್ತೆ ಅತ್ತ ತಲೆಹಾಕುವುದು ಅಷ್ಟು ಸರಿಯಲ್ಲ ಎಂದು ನಯನಿ ಸುಮ್ಮನಾಗಿರಬಹುದು ಎನ್ನಲಾಗಿದೆ. (ಏಜೆನ್ಸೀಸ್)

English summary
It is said that South sensation Nayanthara rejects item dance in Shah Rukh Khan-Deepika starrer Chennai Express. Recently, top director Rohit Shetty approached to do an item number in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada