»   » ಹೊಸ ಹುಡುಗಿ ಹಿಂದೆ ಡಾನ್ಸ್ ಮಾಸ್ಟರ್ ಪ್ರಭುದೇವ

ಹೊಸ ಹುಡುಗಿ ಹಿಂದೆ ಡಾನ್ಸ್ ಮಾಸ್ಟರ್ ಪ್ರಭುದೇವ

Posted By: ರವಿಕಿಶೋರ್
Subscribe to Filmibeat Kannada

ಡಾನ್ಸ್ ಮಾಸ್ಟರ್ ಪ್ರಭುದೇವನಿಗೆ ನಟಿ ನಯನತಾರಾ ಕೈಕೊಟ್ಟ ಬಳಿಕ ಆತ ಮತ್ತೊಬ್ಬ ಹುಡುಗಿಯ ತಲಾಷ್ ನಲ್ಲಿದ್ದ. ಈಗ ಆತನ ಬಾಳಲಿನಲ್ಲಿ ಹೊಸ ಉಷೋದಯವಾಗಿದೆ. ಸದ್ದಿಲ್ಲದಂತೆ ಪ್ರಭುದೇವ ಮತ್ತೊಬ್ಬ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎನ್ನುತ್ತವೆ ಮೂಲಗಳು.

ನಟಿ ನಯನತಾರಾ ಹಾಗೂ ಪ್ರಭುದೇವ ಮೂರು ವರ್ಷಗಳ ಕಾಲ ಜೋಡಿ ಹಕ್ಕಿಗಳಂತೆ ವಿಹರಿಸಿದ್ದರು. ಈತ ಮತ್ತೊಬ್ಬಳ ಜೊತೆ ಕದ್ದುಮುಚ್ಚಿ ಮಾಡುತ್ತಿದ್ದ ವ್ಯವಹಾರ ಆಕೆಗೆ ಗೊತ್ತಾಗುತ್ತಿದ್ದಂತೆ ಇನ್ನೇನು ಹಸೆಮಣೆವರೆಗೂ ಬಂದಿದ್ದ ನಯನಿ ಮದುವೆ ಮುರಿದುಬಿದ್ದಿತ್ತು.

ಇಷ್ಟಕ್ಕೂ ಈತ ರಹಸ್ಯವಾಗಿ ಓಡಾಡುತ್ತಿರುವ ಹುಡುಗಿ ಯಾರು ಎಂಬುದು ಇಷ್ಟು ದಿನಗಳ ಕಾಲ ರಹಸ್ಯವಾಗಿತ್ತು. ಈಗ ಈ ಹುಡುಗಿ ಯಾರು ಎಂಬ ಬಗ್ಗೆ ಮಸುಕು ಮಸುಕಾದ ಅಲ್ಪಸ್ವಲ್ಪ ವಿವರಗಳು ಬಹಿರಂಗವಾಗಿವೆ.

ಇತ್ತೀಚೆಗೆ ಪ್ರಭುದೇವ ಮುಂಬೈನಲ್ಲಿ ಹೊಸ ಮನೆಯನ್ನೂ ಮಾಡಿದ್ದಾನೆ. ಈಗಾಗಲೆ ಚೆನ್ನೈನಲ್ಲೂ ಆತನಿಗೆ ಮನೆಯಿದೆ. ಈ ಮನೆಯಲ್ಲಿ ಆತನ ವಿಚ್ಛೇದಿತ ಪತ್ನಿ ಹಾಗೂ ಮಕ್ಕಳಿದ್ದಾರೆ. ಇತ್ತೀಚೆಗೆ ನಡೆದ ತನ್ನ ಮಗನ ಹುಟ್ಟುಹಬ್ಬಕ್ಕೆ ಪ್ರಭುದೇವ ಬಂದು ಹೋಗಿದ್ದಾನೆ. ಆ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಅದೆಲ್ಲಾ ಸರಿ ಈತನ ಬಾಳಿನಲ್ಲಿ ಬಂದ ಹೊಸ ಹುಡುಗಿ ಯಾರು ಎಂಬ ಬಗ್ಗೆ ಮಾತ್ರ ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ. ಪ್ರಭುದೇವ ಮಾತ್ರ ಈಕೆಯ ಜೊತೆ ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದಾನೆ. ಈ ಹುಡುಗಿಯ ಬಗ್ಗೆ ನಯನತಾರಾಗೆ ಗೊತ್ತು. ಆಕೆಯನ್ನು ಕೇಳಿದರೆ ಈಗ ಹಳೆಯದೆಲ್ಲಾ ಯಾಕೆ. ನಾನು ಆತನನ್ನು ಮರೆತು ಎಷ್ಟೋ ದಿನಗಳಾಗಿವೆ ಎನ್ನುತ್ತಾರೆ.

ಇತ್ತ ನಯನತಾರಾ ಕೂಡ ಹಳೆಯ ನೆನಪುಗಳಲ್ಲಿ ಕಾಲ ಕಳೆಯದೆ ತನ್ನ ಹಳೆಯ ಗೆಳೆಯನಿಗೆ ಹತ್ತಿರವಾಗಿದ್ದಾರೆ. ನಯನತಾರಾ ಹೆಸರು ನಟ ಸಿಲಂಬರಸನ್ (ಸಿಂಬು) ಜೊತೆ ಮತ್ತೊಮ್ಮೆ ಕೇಳಿಬರುತ್ತಿದೆ. ನಯನತಾರ ಮಾತ್ರ ಇದನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ಆದರೆ ಹಳೆಯ ಗೆಳೆಯ ಸಿಂಬು ಮಾತ್ರ 'ತಪ್ಪಿ ಹೋದ ಹಕ್ಕಿ ಮತ್ತೆ ಸಿಕ್ಕ ಖುಷಿ'ಯಲ್ಲಿ ತೇಲಾಡುತ್ತಿದ್ದಾರಂತೆ. ಅದೇನು ಕಥೇನೋ ಏನೋ! (ಏಜೆನ್ಸೀಸ್)

English summary
If rumours and some media reports are to be believed then ace director-choreographer Prabhu Dheva has a new woman in his life. No one seems to know who this mystery lady is.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada