»   » ಪೂನಂ ಬೆತ್ತಲೆ ಬೆನ್ನಿನ ಚಿತ್ರ ಇಂಟರ್ನೆಟ್ಟಲ್ಲಿ ಲೀಕ್!

ಪೂನಂ ಬೆತ್ತಲೆ ಬೆನ್ನಿನ ಚಿತ್ರ ಇಂಟರ್ನೆಟ್ಟಲ್ಲಿ ಲೀಕ್!

By: ಯಶ್
Subscribe to Filmibeat Kannada

"ಬಟ್ಟೆಗಳ ಮೇಲೆ ನಾವು ಎಷ್ಟೊಂದು ದುಡ್ಡನ್ನು ಸುರಿಯುತ್ತೇವೆ. ಆದರೆ, ನೀವು ಜೀವನದಲ್ಲಿ ಅತ್ಯುತ್ತಮ ಕ್ಷಣಗಳನ್ನು ಕಳೆಯುವುದು ಮೈಮೇಲೆ ಬಟ್ಟೆ ಇಲ್ಲದಾಗಲೆ. ಎಂಥ ವಿಪರ್ಯಾಸ ಅಲ್ಲವೆ" ಎಂದು ಹೇಳಿ ಸತ್ಯವನ್ನು ಬೆತ್ತಲೆ ಮಾಡಿರುವ, ನಿರ್ಭಯ ನಿರ್ವಾಣ ಸುಂದರಿ ಪೂನಂ ಪಾಂಡೆ ಸುದ್ದಿ ಮಾಡುವುದೇ ಇಲ್ಲ, ಸುದ್ದಿಯೇ ಅವರನ್ನು ಹುಡುಕಿಕೊಂಡು ಬರುತ್ತದೆ.

ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೆ ಸಂಪೂರ್ಣ ಬೆತ್ತಲಾಗುವುದಾಗಿ ಹೇಳಿ, ಅವಕಾಶ ವಂಚಿತೆಯಾಗಿದ್ದ ಕಿಂಗ್‌ಫಿಷರ್ ಬಿಕಿನಿ ಕ್ಯಾಲೆಂಡರ್ ಬೆಡಗಿ ಪೂನಂ ಪಾಂಡೆ, ನಾನಾ ವಿಷಯಗಳಿಗಾಗಿ ಸುದ್ದಿಗೆ ಗ್ರಾಸವಾಗಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಮೊತ್ತಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿರುವ ಹಿಂದಿ ಚಲನಚಿತ್ರ 'ನಶಾ'. [ನಶಾ ಚಿತ್ರಪಟ]

ತಾವು ಮಾಡುತ್ತಿರುವ ಪಾತ್ರವನ್ನು ಪರಕಾಯ ಪ್ರವೇಶ ಮಾಡಿ, ಪಾತ್ರಕ್ಕೆ ನೂರಕ್ಕೆ ನೂರರಷ್ಟು ಜೀವ ತುಂಬುವವರು ಅನೇಕ ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ. ಪೂನಂ ಪಾಂಡೆ ನಿಜ ಜೀವನದಲ್ಲೂ ನಶಾ ಚಿತ್ರದ ಪಾತ್ರಕ್ಕಾಗಿ ತಮ್ಮನ್ನು ತಾವೇ ಮಾರ್ಪಾಟು ಮಾಡಿಕೊಂಡಿದ್ದಾರೆ. ಪಾತ್ರಕ್ಕೆ ನೂರಕ್ಕೆ ನೂರರಷ್ಟಲ್ಲ, ನೂರಕ್ಕೆ ಇನ್ನೂರರಷ್ಟು ಜೀವ 'ತುಂಬಿ'ದ್ದಾರೆ.

ಪಾತ್ರಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರಿಂದ ನಿರ್ಮಾಪಕ ಆದಿತ್ಯ ಭಾಟಿಯಾ ಸಿಕ್ಕಾಪಟ್ಟೆ ಪುಳಕಿತರಾಗಿದ್ದರೆ, ನಿರ್ದೇಶಕ ಅಮಿತ್ ಸಕ್ಸೇನಾ ನಾಯಕಿ ಪೂನಂಳನ್ನು ಮಿತಿಮೀರಿ ಹಾಡಿಹೊಗಳಲು ಆರಂಭಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ರೋಚಕ ಸುದ್ದಿಗಳಿವೆ ಓದಿ ನೀವೂ ಪುಳಕಿತರಾಗಿರಿ. [ಪೂನಂ ಗ್ಯಾಲರಿ]

ಬೆತ್ತಲೆ ಚಿತ್ರ ಲೀಕ್ ಮಾಡಿದ್ದು ಯಾರು?

ಮೊದಲ ಶಾಟ್ ಬೆಡ್ ರೂಮಲ್ಲಿ ಶೂಟ್ ಮಾಡಿದ್ದ ಚಿತ್ರವನ್ನು ಪೂನಂ ಅವರೇ ಟ್ವಿಟ್ಟರಲ್ಲಿ ಲೀಕ್ ಮಾಡಿದ್ದರು. ಈಗ ಮಹಾಬಳೇಶ್ವರದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಬೆತ್ತಲೆ ಬೆನ್ನಿನ ಚಿತ್ರವನ್ನು ಯೂನಿಟ್‌ನ ಹುಡುಗರು ಲೀಕ್ ಮಾಡಿಬಿಟ್ಟಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ನಿರ್ಮಾಪಕರು ಶೂಟಿಂಗ್ ಸ್ಪಾಟಲ್ಲಿ ಮೊಬೈಲನ್ನು ಸಂಪೂರ್ಣ ಬ್ಯಾನ್ ಮಾಡಿದ್ದಾರಂತೆ. ಆದರೆ, ಇಂಥ ಚಿತ್ರಗಳನ್ನು ಪೂನಂ ಅವರೇ ಲೀಕ್ ಮಾಡುತ್ತಾರಲ್ಲ?

ಪಾತ್ರಕ್ಕಾಗಿ ಮೈಕೈ ತುಂಬಿಕೊಂಡ ಪೂನಂ

ಮಾಡೆಲ್ ಮಾಡಲೆಂದು ಬಿಕಿನಿ ತೊಟ್ಟಿದಾಗಿನಿಂದ ಇಂದಿನವರೆಗೆ ವಿಶ್ವಕ್ಕೆಲ್ಲ ತಮ್ಮ ರೂಪಲಾವಣ್ಯ ತೋರಿಸಿರುವ ಪೂನಂ ಬಳ್ಳಿ ಕೂಡ ನಾಚಿ ನೀರಾಗುವಂತೆ ತೆಳ್ಳಗಿದ್ದರು. ಆದರೆ, ನಶಾ ಚಿತ್ರಕ್ಕಾಗಿ ತಿಂದುಂಡು ದಷ್ಟಪುಷ್ಟವಾಗಿ ತಮ್ಮ ದೇಹದ ಓರೆಕೋರೆಗಳನ್ನೆಲ್ಲ ಇನ್ನಷ್ಟು ಮೊನಚು ಮಾಡಿಕೊಂಡಿದ್ದಾರಂತೆ. ಇದರಲ್ಲಿ ನನ್ನದೇನೂ ಇಲ್ಲ ಪಾತ್ರವೇ ಎಲ್ಲವನ್ನೂ ಬೇಡುತ್ತಿದೆ ಎಂದು ಅವರು ಹೇಳಿದ್ದಾರೆ.

ಅಭಿಮಾನಿಗಳನ್ನು ಹಿಡಿಯುವುದೇ ಕಷ್ಟವಾಗಿದೆ

ವರ್ಷಾನುಕಾಲ ಜತನದಿಂದ ಕಾಪಾಡಿಕೊಂಡಿದ್ದ ತಮ್ಮ ಜೀರೋ ಸೈಜನ್ನು ಕೂಡ ಕಳಚಿರುವ ಪೂನಂ ಪಾಂಡೆ ಮೈಕೈ ತುಂಬಿಕೊಂಡ ಅಂಗಸೌಷ್ಟವದಿಂದ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ ನಡೆಯುತ್ತಿದ್ದಾಗ ಅವರ ಅಭಿಮಾನಿಗಳನ್ನು ಹದ್ದುಬಸ್ತಿನಲ್ಲಿ ಇಡುವುದೇ ನಿರ್ಮಾಪಕರಿಗೆ ಕಷ್ಟವಾಗಿದೆಯಂತೆ.

ಬಿಪ್ಸ್‌ಗಿಂತ ಪೂನಂಳೇ ಬೆಟರಂತೆ!

ಆಕ್ಷನ್ ಕಟ್‌ಗಳಿಗೆ ಸಖತ್ತಾಗಿ ಪ್ರತಿಸ್ಪಂದಿಸುತ್ತಿರುವ ಪೂನಂ ಪಾಂಡೆಯ ವೃತ್ತಿಪರತೆಯಿಂದ ನಿರ್ದೇಶಕ ಅಮಿತ್ ಸಕ್ಸೇನಾ ಫುಲ್ ಖುಷ್ ಆಗಿಬಿಟ್ಟಿದ್ದಾರೆ. ಶೂಟಿಂಗ್ ಮುಗಿಯುವವರೆಗೆ ತಮ್ಮ ಲೀಡ್ ನಟರನ್ನು ನಿರ್ದೇಶಕರು ಹೊಗಳುವುದು ಸರ್ವೇಸಾಮಾನ್ಯ. ಪೂನಂಳಿಂದ ಸಂಪೂರ್ಣ ಸಂತುಷ್ಟರಾಗಿರುವ, ಜಿಸ್ಮ್ ಚಿತ್ರದ ನಿರ್ದೇಶಕ ಸಕ್ಸೇನಾ, ಪೂನಂ ಜಿಸ್ಮ್ ಚಿತ್ರದ ಬಿಪಾಶಾ ಬಸುಗಿಂತ ಒಂದು ಕೈ ಮೇಲು ಎಂದು ಹಾಡಿ ಹೊಗಳಿದ್ದಾರೆ. ಇದಕ್ಕೆ ಬಿಪ್ಸ್ ಏನೆನ್ನುತ್ತಾರೆ?

ಹೌದು ಇದು ವಯಸ್ಕರಿಗೆ ಮಾತ್ರ ಎಂದಿರುವ ಪೂನಂ

ವಿವಾದ ಸೃಷ್ಟಿಸುವುದನ್ನು ನೀರಿನಲ್ಲಿ ಮೀನು ಈಡಾಡಿದಷ್ಟೇ ಸರಳವಾಗಿಸಿಕೊಂಡಿರುವ ಪೂನಂ ಪಾಂಡೆ ನಶಾ ಚಿತ್ರ ವಯಸ್ಕರ ಚಿತ್ರ ಎಂದು ಮುಜುಗರವಿಲ್ಲದೆ ಹೇಳಿದ್ದಾರೆ. ಚಿತ್ರದಲ್ಲಿ ಸಾಕಷ್ಟು ರೋಚಕ ದೃಶ್ಯಗಳಿರುತ್ತವೆ ಎಂದು ಮೊದಲೇ ಗುಟ್ಟುಬಿಟ್ಟುಕೊಟ್ಟಿರುವ ಜುಟ್ಟಿನ ರಾಣಿ ಸೆನ್ಸಾರ್ ಮಂಡಳಿಯಿಂದ ಯಾವುದೇ ಆಕ್ಷೇಪಣೆ ವ್ಯಕ್ತವಾಗುವುದಿಲ್ಲ ಎಂದು ಹೇಳಿ ಗೊಂದಲ ಮೂಡಿಸಿದ್ದಾರೆ.

English summary
Model turned actress Poonam Pandey is in new again. Bare back picture of Poonam was leaked on the net. After this incident producer Aditya Bhatia has banned usage of mobiles on the set. Poonam has also put on lots of weight to look more curvy and to suit the role.
Please Wait while comments are loading...