For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ್' ಸಿನಿಮಾ ಮರು ಚಿತ್ರೀಕರಣ? ಪ್ರಭಾಸ್ ಭಾಗಿಯಾಗುತ್ತಾರಾ?

  |

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಸೆಟ್ಟೇರಿದಾಗಿನಿಂದಲೂ ದೊಡ್ಡ ಮಟ್ಟದ ಕುತೂಹಲ ಕೆರಳಿಸಿತ್ತು. ಈ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್‌ನ ಸಿನಿಮಾ ಆಗಿರಲಿದೆ ಎನ್ನಲಾಗಿತ್ತು. ಆದರೆ ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಈ ವರ್ಷ ಅತಿ ಹೆಚ್ಚು ಟ್ರೋಲ್ ಆದ ಸಿನಿಮಾ ಎನಿಸಿಕೊಳ್ಳತೊಡಗಿದೆ.

  'ಆದಿಪುರುಷ್' ಸಿನಿಮಾದಲ್ಲಿ ಅತಿ ಕಳಪೆ ವಿಎಫ್‌ಎಕ್ಸ್ ಬಳಕೆ, ರಾಮಾಯಣದ ಮೂಲ ಕತೆಯನ್ನು ತಪ್ಪಾಗಿ ನಿರೂಪಿಸಿರುವುದು ಇನ್ನೂ ಹಲವು ಕಾರಣಕ್ಕೆ 'ಆದಿಪುರುಷ್' ಸಿನಿಮಾವನ್ನು ಅತಿಯಾಗಿ ಟ್ರೋಲ್ ಮಾಡಲಾಗುತ್ತಿದೆ.

  ಸಿನಿಮಾವು 3ಡಿಯಲ್ಲಿ ಚೆನ್ನಾಗಿ ಕಾಣಲಿದೆ ಇನ್ನಿತರೆ ಸಫಾಯಿಗಳನ್ನು ನಿರ್ದೇಶಕ ಓಂ ರಾವತ್ ನೀಡಿದ್ದಾರಾದರೂ ಸಿನಿಮಾದ ಬಗ್ಗೆ ಋಣಾತ್ಮಕ ಪ್ರಚಾರ ಹಬ್ಬಿ ಆಗಿದೆ. ಇದೀಗ ಎಚ್ಚೆತ್ತುಕೊಂಡಿರುವ ಚಿತ್ರತಂಡ ಸಿನಿಮಾವನ್ನು ಮರು ಚಿತ್ರೀಕರಣ ಮಾಡಲು ಸಜ್ಜಾಗಿದೆ.

  ಸಂಕ್ರಾಂತಿಗೆ ಬಿಡುಗಡೆ ಆಗಬೇಕಿತ್ತು

  ಸಂಕ್ರಾಂತಿಗೆ ಬಿಡುಗಡೆ ಆಗಬೇಕಿತ್ತು

  ಸಿನಿಮಾವನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಬಂದ ಕಾರಣದಿಂದ ಸಿನಿಮಾವನ್ನು ಮರು ಚಿತ್ರೀಕರಣ ಮಾಡಲು ಮುಂದಾಗಿದೆ. ಹಾಗಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ.

  ವಿಎಫ್‌ಎಕ್ಸ್ ತಿದ್ದುವ ಕಾರ್ಯ

  ವಿಎಫ್‌ಎಕ್ಸ್ ತಿದ್ದುವ ಕಾರ್ಯ

  ಅದರಲ್ಲಿಯೂ ಸಿನಿಮಾದ ವಿಎಫ್‌ಎಕ್ಸ್‌ ಅನ್ನು ಸೂಕ್ತವಾಗಿ ತಿದ್ದುವ ಕಾರ್ಯವನ್ನು ಚಿತ್ರತಂಡ ಮಾಡಲಿದೆ. ಜೊತೆಗೆ ಸಿನಿಮಾದ ಕೆಲವು ಭಾಗಗಳ ಮರು ಚಿತ್ರೀಕರಣವೂ ಆಗಲಿದೆ ಎನ್ನಲಾಗುತ್ತಿದೆ. ಸಿನಿಮಾದ ಮರು ಚಿತ್ರೀಕರಣ ಮಾಡುವ ಆಲೋಚನೆ ಪ್ರಭಾಸ್ ಅವರದ್ದೇ ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ. ಸಿನಿಮಾವನ್ನು ಒಪ್ಪ ಓರಣವಾಗಿ ಮಾಡಿಯೇ ಬಿಡುಗಡೆ ಮಾಡಬೇಕೆಂದು ಪ್ರಭಾಸ್ ಪಟ್ಟು ಹಿಡಿದಿದ್ದಾರಂತೆ.

  ಇತರೆ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಇತರೆ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ

  ಆದರೆ ಪ್ರಭಾಸ್ ಪ್ರಸ್ತುತ 'ಸಲಾರ್' ಹಾಗೂ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿದ್ದರೂ ಸಹ ಕೆಲವು ದಿನಗಳ ಡೆಟ್ಸ್ ಅನ್ನು ಓಂ ರಾವತ್‌ಗೆ ನೀಡಿದ್ದು, ಪಕ್ಕಾ ಯೋಜನೆಯೊಂದಿಗೆ ಕೆಲವು ಭಾಗಗಳ ಮರು ಚಿತ್ರೀಕರಣ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

  ಓಂ ರಾವತ್ ನಿರ್ದೇಶನ

  ಓಂ ರಾವತ್ ನಿರ್ದೇಶನ

  'ಆದಿಪುರುಷ್' ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ರಾಮಾಯಣದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಕೃತಿ ಸೆನನ್ ಸೀತಾ ಮಾತೆ. ಸಿನಿಮಾವನ್ನು ಟಿ ಸೀರೀಸ್‌ನ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

  English summary
  Prabhas's Adipurush movie to be re shoot soon. Movie faces backlash due to worst VFX and misrepresentation of Ramayana story.
  Friday, November 4, 2022, 18:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X