For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ 'ಭಂ ಭಂ ಭೋಲೇನಾಥ್' ಡ್ರಾಪ್ ಆಯಿತಾ?

  By ಉದಯರವಿ
  |

  ಈ ರೀತಿಯ ಸುದ್ದಿಯೊಂದು ಗಾಂಧಿನಗರದ ಕತ್ತಲಲ್ಲಿ ಮಿಂಚಿನಂತೆ ಪ್ರವಹಿಸುತ್ತಿದೆ. ಜೋಗಿ ಪ್ರೇಮ್ ಅಭಿನಯದ 'ಭಂ ಭಂ ಭೋಲೇನಾಥ್' ಚಿತ್ರ ಡ್ರಾಪ್ ಆಗಿದೆಯಂತೆ, ಇನ್ನು ಆ ಚಿತ್ರ ಸೆಟ್ಟೇರುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

  ಏಕೆಂದರೆ 'ಭಂ ಭಂ ಭೋಲೇನಾಥ್' ಚಿತ್ರದ ಮುಹೂರ್ತ ಫೆಬ್ರವರಿ 25ಕ್ಕೆ ನೆರವೇರಬೇಕಾಗಿತ್ತು. ಈ ಬಗ್ಗೆ ಪತ್ರಿಕಾ ಜಾಹೀರಾತನ್ನೂ ನೀಡಲಾಗಿತ್ತು. ಆದರೆ ಚಿತ್ರದ ಮುಹೂರ್ತ ನಡೆದಿಲ್ಲ. ಈ ಹಿನ್ನೆಲೆಯಲ್ಲಿ 'ಭಂ ಭಂ ಭೋಲೇನಾಥ್' ಚಿತ್ರ ಡ್ರಾಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

  'ಡಿಕೆ' ಚಿತ್ರ ಸೋತಿರಬಹುದು. ಆದರೆ ಸೋಲು, ಗೆಲುವು ಎಂಬುದು ಒಂದು ಪಾಠವಿದ್ದಂತೆ. ಸೋಲಿಗೆ ಕುಗ್ಗಲ್ಲ, ಗೆಲುವಿನ ಹಿಗ್ಗಲ್ಲ ಪ್ರೇಮ್. ಸದ್ಯಕ್ಕೆ ಅವರು ಚಿತ್ರದ ಟ್ರೇಲರ್ ರೆಡಿ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಜೊತೆಗೆ ಸೇರಿ ಹಾಡುಗಳ ಕಾಂಪೋಸ್ ಮಾಡುತ್ತಿದ್ದಾರೆ ಪ್ರೇಮ್. ಚಿತ್ರದ ಮಾರ್ಚ್ 15ರಿಂದ ಪ್ರಾರಂಭವಾಗುತ್ತಿದೆ ಎಂದಿದ್ದಾರೆ ಚಿತ್ರದ ನಿರ್ಮಾಪಕ ಸುರೇಶ್ ('ಆನೆಪಟಾಕಿ' ಖ್ಯಾತಿ).

  ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಜೋಗಿ ಪ್ರೇಮ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಈಗಾಗಲೆ ಅವರು ಹಲವಾರು ಗೆಟಪ್ ಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸಿ ತಕ್ಕಮಟ್ಟಿಗೆ ಯಶಸ್ಸನ್ನೂ ಸಾಧಿಸಿರುವುದು ಗೊತ್ತೇ ಇದೆ.

  ಈ ಬಾರಿ ಅವರು ಸಿಕ್ಸ್ ಪ್ಯಾಕ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ. ತಮ್ಮ ದೇಹವನ್ನು ಹುರಿಗಟ್ಟಿ ಸಿಕ್ಸ್ ಪ್ಯಾಕ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಪ್ರೇಮ್. ಚಿತ್ರದ ನಾಯಕಿ ಇನ್ನೂ ಫಿಕ್ಸ್ ಆಗಿಲ್ಲ.

  English summary
  The Speculation is circulating that, Prem's upcoming movie Bham Bm Bholenath is stalled berfore the lauch of the film. But the producer Suresh denays the reports, the movie will launch on 15th March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X