Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನ್ನ ಸಿದ್ದು ಮಧ್ಯೆ '180' ಲವ್ ಇಲ್ಲ : ಪ್ರಿಯಾ
180 ಚಿತ್ರದಲ್ಲಿ ನಾಯಕ ಸಿದ್ದಾರ್ಥ್ ಜೊತೆ ಇದ್ದ ಪ್ರಣಯ ಸಂಬಂಧ ಇನ್ನೂ ಮುಂದುವರೆದಿದೆ ಎಂದು ಸುಮ್ಮಸುಮ್ಮನೆ ಯಾರೋ ಗುಲ್ಲೆಬ್ಬಿಸಿರುವುದು ಪ್ರಿಯಾಗೆ ಕೋಪ ತಂದಿದೆ.
ತೆಲುಗು, ತಮಿಳು ಚಿತ್ರರಂಗದ ಆಗಾಗ ಹಿಂದಿ ಚಿತ್ರದಲ್ಲೂ ಕಾಣಿಸಿಕೊಳ್ಳುವ ಲವರ್ ಬಾಯ್ ಸಿದ್ದಾರ್ಥ್ ಗೆ ಈ ರೀತಿ ಫ್ಲರ್ಟ್ ಮಾಡುವುದು ಮಾಮೂಲಿ ಆದರೆ, ಪ್ರಿಯಾ ಆತನ ಸಂಗಕ್ಕೆ ಬಿದ್ದು ಹಾಳುಗುವುದು ಬೇಡ ಎಂದು ಪ್ರಿಯಾ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಗಾಳಿ ಸುದ್ದಿಗಳನ್ನು ತಳ್ಳಿಹಾಕಿರುವ ಪ್ರಿಯಾ, ನಾನು ಸಿದ್ದ್ ನೋಡಿ ತುಂಬಾ ದಿನ ಆಯ್ತು, 180 ಚಿತ್ರ ಆದಮೇಲೆ ಮರೆತೇಬಿಟ್ಟಿದ್ದೇನೆ. ಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಸಿದ್ದು ನನ್ನ ಉತ್ತಮ ಗೆಳೆಯರಲ್ಲಿ ಒಬ್ಬ. ಆದರೆ, ನಾನು ಆತನೊಡನೆ ಡೇಟಿಂಗ್ ಮಾಡಿಲ್ಲ. ಲಿವ್ ಇನ್ ಸಂಬಂಧ ಇಷ್ಟ ಪಡುವ ಸಿದ್ದು ಜೊತೆ ಕಾಲ ಕಳೆಯಲು ನಾನು ಇಚ್ಛಿಸಿಲ್ಲ ಎಂದು ಪ್ರಿಯಾ ನೇರವಾಗಿ ಹೇಳಿದ್ದಾರೆ.
ತೆಲುಗಿನ ರಾಣಾ ದಗ್ಗುಬಾತಿ ಅಭಿನಯದ 'ಲೀಡರ್' ಚಿತ್ರದ ಮೂಲಕ ಪ್ರಚಾರ ಪಡೆದ ಪ್ರಿಯಾ ಹಾಗೂ ಸಿದ್ದಾರ್ಥ್ ನಟಿಸಿದ 180 ಚಿತ್ರದಲ್ಲಿ ಯುವಪ್ರೇಮಿಗಳ ಸಂಬಂಧ, ಅಗಲಿಕೆ, ನೋವು ಸುಂದರವಾಗಿ ಚಿತ್ರಿತವಾಗಿತ್ತು.
ಶ್ರೀದೇವಿ ಅಭಿನಯದ ಬಹುನಿರೀಕ್ಷೆಯ ಬಹುಭಾಷಾ ಚಿತ್ರ ಇಂಗ್ಲೀಷ್ ವಿಂಗ್ಲೀಷ್ ನಲ್ಲಿ ನಟಿಸಿರುವ ಪ್ರಿಯಾ, ಚಿತ್ರದ ಬಿಡುಗಡೆ ದಿನ(ಅಕ್ಟೋಬರ್ 5)ಕ್ಕಾಗಿ ಕಾದು ನೋಡುತ್ತಿದ್ದಾರೆ. ಸಿದ್ದಾರ್ಥ್ ಸದ್ಯಕ್ಕೆ ಮೀರಾ ನಾಯರ್ ಅವರ ಮಿಡ್ ನೈಟ್ಸ್ ಚಿಲ್ಡ್ರನ್ ಹಾಗೂ ನಂದಿನಿ ರೆಡ್ಡಿ ನಿರ್ದೇಶನದ ಚಿತ್ರದಲ್ಲಿ ಸಮಂತಾ ಜೊತೆ ನಟಿಸುತ್ತಿದ್ದಾರೆ.
ಮಣಿರತ್ನಂ ಅವರ ಜೊತೆಗೆ ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಇಳಿದ ಸಿದ್ದಾರ್ಥ್, ನಟ, ಗಾಯಕ, ಚಿತ್ರ ಬರಹಗಾರ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಆದರೆ, ವೈಯಕ್ತಿಕ ಬದುಕಿನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ ಮೇಲೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜೊತೆ ಲಿನ್ ಇನ್ ಸಂಬಂಧ ವನ್ನು ಹಾಳುಗೆಡವಿಕೊಂಡರು. ಎಲ್ಲಾ ಪ್ರಮುಖ ನಟಿಯರ ಜೊತೆ ಸಿದ್ದಾರ್ಥ್ ಹೆಸರು ಬೇಡದ ವಿಷಯಗಳಿಗೆ ತಗುಲಿಹಾಕಿಕೊಂಡಿದ್ದು ಅವರ ಕೆರಿಯರ್ ಗೆ ಕಪ್ಪುಚುಕ್ಕೆಯಾಗಿದೆ.