»   » ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಇಬ್ಬರು ಈಗ ರಾಮ - ಸೀತಾ!

ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಇಬ್ಬರು ಈಗ ರಾಮ - ಸೀತಾ!

Posted By:
Subscribe to Filmibeat Kannada
ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಇಬ್ಬರು ಈಗ ರಾಮ - ಸೀತಾ | FIlmibeat Kannada

ನಟಿ ರಚಿತಾ ರಾಮ್ ಸದ್ಯ ಸಿಕ್ಕಾಪಟ್ಟೆ ಬಿಜಿ ಇರುವ ನಟಿ. 'ಅಯೋಗ್ಯ' ಚಿತ್ರದಲ್ಲಿ ನೀನಾಸಂ ಸತೀಶ್ ಮತ್ತು 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆ ರಚಿತಾ ಸದ್ಯ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ಮತ್ತೊಂದು ಹೊಸ ಸಿನಿಮಾಗೆ ರಚಿತಾ ಆಯ್ಕೆ ಆಗಿದ್ದಾರೆ.

ಈಗಾಗಲೇ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ರಚಿತಾ ತೆರೆ ಹಂಚಿಕೊಂಡಿದ್ದಾರೆ. ಆದರೆ ಈಗ ನಟ ನಿಖಿಲ್ ಕುಮಾರ್ ಅವರ ಹೊಸ ಸಿನಿಮಾಗೆ ರಚಿತಾ ರಾಮ್ ನಾಯಕಿ ಆಗಿದ್ದಾರೆ. ನಿಖಿಲ್ ಸದ್ಯ 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿಸಿದ್ದಾರೆ. ಅದರ ಬಳಿಕ ಅವರ ಹೊಸ ಚಿತ್ರ 'ಸೀತಾ ರಾಮ ಕಲ್ಯಾಣ' ಸಿನಿಮಾ ಕೆಲ ದಿನಗಳ ಹಿಂದೆ ಅಷ್ಟೇ ಸೆಟ್ಟಿರಿದ್ದು, ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಮುಂದೆ ಓದಿ...

'ಸೀತಾ ರಾಮ ಕಲ್ಯಾಣ'

ನಿಖಿಲ್ ಕುಮಾರ್ ಅವರ ಹೊಸ ಚಿತ್ರ 'ಸೀತಾ ರಾಮ ಕಲ್ಯಾಣ' ಸಿನಿಮಾಗೆ ನಾಯಕಿಯ ಆಯ್ಕೆ

ಆಗಿದೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ನಿಖಿಲ್ - ರಚಿತಾ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದಾರೆ.

ಸೀತಾ ಆಗಿ ರಚಿತಾ ರಾಮ್

'ಸೀತಾ ರಾಮ ಕಲ್ಯಾಣ'ದಲ್ಲಿ ನಿಖಿಲ್ ರಾಮನಾಗಿದ್ದು, ಅವರಿಗೆ ರಚಿತಾ ಸೀತಾ ಆಗಿದ್ದಾರೆ. ಈ ಚಿತ್ರದಲ್ಲಿ ರಚಿತಾ ಹೋಮ್ಲಿ ಹುಡುಗಿಯಾಗಿ ನಟಿಸುತ್ತಿದ್ದು, ಅವರ ಲುಕ್ ತುಂಬ ಟ್ರಡಿಷನಲ್ ಆಗಿ ಇರಲಿದೆಯಂತೆ.

ಕೌಟುಂಬಿಕ ಕಥೆ

ಚಿತ್ರದ ನಾಯಕಿ ಪಾತ್ರಕ್ಕೆ ಕನ್ನಡದ ನಟಿಯೇ ಬೇಕು ಅಂತ ಚಿತ್ರತಂಡ ಮೊದಲೇ ನಿರ್ಧಾರ ಮಾಡಿತ್ತಂತೆ. ಸಿನಿಮಾ ಕೌಟುಂಬಿಕ ಕಥೆ ಹೊಂದಿದ್ದು, ನಾಯಕಿಯ ಪಾತ್ರಕ್ಕೆ ರಚಿತಾ ಸೂಟ್ ಆಗುತ್ತಾರೆ ಅಂತ ಅವರನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ.

ಹರ್ಷ ನಿರ್ದೇಶನ

ಪುನೀತ್ ಜೊತೆ 'ಅಂಜನೀಪುತ್ರ' ಸಿನಿಮಾ ಮಾಡುತ್ತಿರುವ ಹರ್ಷ ಅದರ ಹಿಂದೆಯೇ ನಿಖಿಲ್ ಜೊತೆ 'ಸೀತಾರಾಮ ಕಲ್ಯಾಣ' ಚಿತ್ರ ಪ್ರಾರಂಭಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಲಿದ್ದು, ಹರ್ಷ ಜೊತೆಗೆ ಹರೀಶ್ ಎನ್ನುವವರು ಚಿತ್ರದ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ.

ಆಂಜನೇಯ ನಿಂದ ರಾಮ

ಹರ್ಷ ನಿರ್ದೇಶನದ ಚಿತ್ರಗಳಲ್ಲಿ ಆಂಜನೇಯನ ಹೆಸರು ಇದ್ದೇ ಇರುತ್ತಿದೆ ಎನ್ನುವ ಹಾಗೆ ಆಗಿತ್ತು. ಆದರೆ ಈಗ ಆಂಜನೇಯ ಹೆಸರಿನ ಬದಲಿಗೆ ಹರ್ಷ 'ಸೀತಾ ರಾಮ ಕಲ್ಯಾಣ' ಅಂತ ರಾಮನ ಹೆಸರನ್ನು ಚಿತ್ರಕ್ಕೆ ಇಟ್ಟಿದ್ದಾರೆ.

'ಸೀತಾರಾಮ ಕಲ್ಯಾಣ'ಕ್ಕೆ ಸಜ್ಜಾದ 'ಜಾಗ್ವಾರ್' ಬಾಯ್ ನಿಖಿಲ್ ಕುಮಾರ್

ಡಿಸೆಂಬರ್ 20ಕ್ಕೆ ಶೂಟಿಂಗ್

ಇದೇ ಡಿಸೆಂಬರ್ 20ಕ್ಕೆ 'ಸೀತಾರಾಮ ಕಲ್ಯಾಣ' ಚಿತ್ರದ ಶೂಟಿಂಗ್ ಶುರು ಆಗಲಿದೆ. ಚಿತ್ರಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಬಂಡವಾಳ ಹೂಡಲಿದ್ದಾರೆ.

English summary
Kannada Actress Rachita Ram is selected to play lead opposite Kannada Actor Nikhil Kumar in 'Seetha Rama Kalyana' directed by A.Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada