For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ಕುಮಾರಸ್ವಾಮಿ ಯಮಹಾ ಬೈಕ್ ಟ್ರಿಕ್

  By ಉದಯರವಿ
  |

  ಇದು ರಾಧಿಕಾ ಕುಮಾರಸ್ವಾಮಿ ಅವರ ಯಮಹಾ ಬೈಕ್ ರೈಡಿಂಗ್. ಒಂದು ಮಗುವಿನ ತಾಯಿಯಾಗಿದ್ದರೂ ಇನ್ನೂ ಅವರ ಗ್ಲಾಮರ್ ಮಾತ್ರ ಎಳ್ಳಷ್ಟೂ ಕುಗ್ಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಅವರು 'ಸ್ವೀಟಿ' ಚಿತ್ರದ ಮೂಲಕ ಪ್ರೇಕ್ಷಕ ಮುಂದೆ ಬರಲು ಸಿದ್ಧವಾಗಿದ್ದಾರೆ.

  ಈ ಚಿತ್ರದ ಸನ್ನಿವೇಶವೊಂದಕ್ಕಾಗಿ ಯಮಹಾ ಬೈಕ್ ಹತ್ತಿ ಸಾಹಸ ಮಾಡಿದ್ದಾರೆ. ಆದರೆ ಅವರು ಅದನ್ನು ಓಡಿಸಿಲ್ಲ ಎಂಬುದು ಸೂಕ್ಷ್ಮವಾಗಿ ನೋಡಿದರೆ ನಿಮಗೇ ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಬೈಕ್ ಗೆ ಸೈಡ್ ಸ್ಟ್ಯಾಂಡ್ ಹಾಕಿರುವುದನ್ನು ನೀವು ಕಣ್ಣಾರೆ ಕಾಣಬಹುದು.

  ನಿಲ್ಲಿಸಿರುವ ಬೈಕ್ ನಲ್ಲಿ ಕುಳಿತಿರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ಫ್ಯಾನ್ ಗಾಳಿ ಬಿಟ್ಟು ಅವರ ತಲೆಗೂದಲು ಕೆದರುವಂತೆ, ಫ್ಯಾನ್ ಗಾಳಿಗೆ ಧೂಳು ಏಳುವಂತೆ ಮಾಡಿದ್ದಾರೆ. ಇದರ ಜೊತೆಗೆ ಒಂದಷ್ಟು ಗ್ರಾಫಿಕ್ಸ್ ಮಾಡಿ ಮೂವ್ ಮೆಂಟ್ ಎಫೆಕ್ಟ್ ಕೊಟ್ಟಿದ್ದಾರೆ ಎಂಬುದು ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ.

  ಇರಲಿ ಬಿಡಿ ಸಿನಿಮಾ ಅಂದ್ರೆ ಅಷ್ಟೂ ಟ್ರಿಕ್ಸ್ ಇರುವುದಿಲ್ಲವೇ? ಆದರೆ ಚಿತ್ರತಂಡ ಒಂಚೂರು ಜಾಗ್ರತೆ ವಹಿಸಿದ್ದರೆ ಈ ಎಡವಟ್ಟು ಆಗುತ್ತಿರಲಿಲ್ಲ ಎಂಬುದಷ್ಟೇ ನಮ್ಮ ಸಲಹೆ. ರಾಧಿಕಾ ಕುಮಾರಸ್ವಾಮಿ ಅವರಿಗೂ ಒಂಚೂರು ಇರುಸುಮುರುಸಾಗುವ ಪ್ರಸಂಗ ತಪ್ಪುತ್ತಿತ್ತು.

  ಇನ್ನು ಸ್ವೀಟಿ ಚಿತ್ರದ ಬಗ್ಗೆ ಹೇಳಬೇಕೆಂದರೆ, ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ರಾಧಿಕಾ ಕುಮಾರಸ್ವಾಮಿ ನಟಿಸಿ ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ವಿಜಯಲಕ್ಷ್ಮಿ ಸಿಂಗ್. ಚಿತ್ರದ ನಾಯಕ ಆದಿತ್ಯ. ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿದೆ.

  ಅಜಯ್ ವಿನ್ಸೆಂಟ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಇಮ್ರಾನ್ ಸರ್ದಾರಿಯಾ ಮತ್ತು ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ತಾರಾಬಳಗದಲ್ಲಿ ರಮ್ಯಾಕೃಷ್ಣ, ಗಿರೀಶ್ ಕಾರ್ನಾಡ್, ಸಾಧು ಕೋಕಿಲ, ಉಮಾಶ್ರೀ, ತಬಲಾ ನಾಣಿ, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

  English summary
  Kannada actress Radhika Kumaraswamy rides Yamaha bike in her upcoming film 'Sweety'. But observing narrowly the actress is not riding the bike. Read more for her bike riding trick in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X