ಕ್ರಿಕೆಟಿಗ ರಿಷಬ್ ಪಂತ್ ಜೊತೆ 'ಐರಾವತ' ನಾಯಕಿ ಡಿನ್ನರ್ ಪಾರ್ಟಿ!
Recommended Video
ಕ್ರಿಕೆಟಿಗರ ಜೊತೆ ಬಾಲಿವುಡ್ ನಟಿಯರು ಸುತ್ತಾಡುವುದು, ಡೇಟ್ ಮಾಡುವುದು ಹೆಚ್ಚು. ಈಗಲೂ ಆ ಟ್ರೆಂಡ್ ಮುಂದುವರಿದಿದೆ. ಈಗ ಯುವ ಆಟಗಾರ ರಿಷಬ್ ಪಂತ್ ಸರದಿ.
ವೆಸ್ಟ್ ಇಂಡೀಸ್ ತಂಡದ ವಿರುದ್ಧ ಮೂರನೇ ಟಿ-ಟ್ವೆಂಟಿ ಪಂದ್ಯ ಆಟದ ಮುಗಿದ್ಮೇಲೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್, ಐರಾವತ ಚಿತ್ರದಲ್ಲಿ ನಾಯಕಿಯಾಗಿದ್ದ ಊರ್ವಶಿ ರೌಟೇಲ ಜೊತೆ ಡಿನ್ನರ್ ಗೆ ಹೋಗಿದ್ದರು ಎಂಬ ವಿಚಾರ ಈಗ ಬಿಟೌನ್ ನಲ್ಲಿ ಸದ್ದು ಮಾಡ್ತಿದೆ.
ಡಿಸೆಂಬರ್ 11 ರಂದು ಮುಂಬೈನ ವಾಂಖೇಡ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಆದಾದ ಮೇಲೆ ಮುಂಬೈನ ಈಸ್ಟೆಲ್ಲಾ ಹೋಟೆಲ್ ನಲ್ಲಿ ಇಬ್ಬರು ಡಿನ್ನರ್ ಗೆ ಹೋಗಿದ್ದರಂತೆ.

ಈ ಪಂದ್ಯದಲ್ಲಿ ರಿಷಬ್ ಪಂತ್ ಸೊನ್ನೆ ರನ್ ಬಾರಿಸಿದ್ದರು. ರೋಹಿತ್ ಶರ್ಮಾ, ರಾಹುಲ್, ಕೊಹ್ಲಿ ಅವರ ಭರ್ಜರಿ ಆಟದ ನೆರವಿನಿಂದ ಭಾರತದ ತಂಡ ಪಂದ್ಯ ಗೆದ್ದುಕೊಂಡಿತ್ತು.
ರಿಷಬ್ ಮತ್ತು ಊರ್ವಶಿ ಒಟ್ಟಿಗೆ ಊಟಕ್ಕೆ ಹೋಗಿದ್ದರ ಕುರಿತಾದ ಯಾವುದೇ ಫೋಟೋ ಇಲ್ಲ. ಆದರೂ ಹೋಗಿರುವುದನ್ನು ಕೆಲವರು ಗಮನಿಸಿದ್ದಾರಂತೆ. ಹೀಗಾಗಿ, ಇಬ್ಬರ ಮಧ್ಯೆ ಏನು ನಡೆಯುತ್ತಿದೆ ಎಂಬ ಕುತೂಹಲ ಈಗ ಕಾಡುತ್ತಿದೆ.
ಈ ಹಿಂದೆ ಭಾರತದ ಮತ್ತೊಬ್ಬ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ರಿಷಬ್ ಪಂತ್ ಹೆಸರು ಕೇಳಿಬಂದಿತ್ತು. ಆಮೇಲೆ ಅದೆಲ್ಲ ಸುಳ್ಳು ಎಂದು ಊರ್ವಶಿ ಸ್ಪಷ್ಟಪಡಿಸಿದ್ದರು.


Click it and Unblock the Notifications











