Don't Miss!
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Automobiles
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿದೇಶಿ ಗರ್ಲ್‌ಫ್ರೆಂಡ್ ಜೊತೆ ಫಾರಂ ಹೌಸ್‌ನಲ್ಲಿ ಸಲ್ಮಾನ್ ಖಾನ್ ಬಂಧಿ!
ಬಾಲಿವುಡ್ ಬಿಗ್ ಬಾಸ್ ಸಲ್ಮಾನ್ ಖಾನ್ ಗೆ ಈಗ 54 ವರ್ಷ ವಯಸ್ಸು. ಹಲವಾರು ನಟಿಯರೊಂದಿಗೆ ಅವರ ಹೆಸರು ತಳುಕುಹಾಕಿಕೊಂಡಿದೆ. ಹಲವರೊಂದಿಗೆ ಪ್ರೇಮ ಪ್ರಸಂಗ ನಡೆದಿವೆ. ಆದರೆ ಯಾರನ್ನೂ ಈ ವರೆಗೆ ಮದುವೆಯಾಗಿಲ್ಲ.
Recommended Video
ಸಲ್ಮಾನ್ ಖಾನ್ ತಮ್ಮ ಗರ್ಲ್‌ಫ್ರೆಂಡ್‌ಗಳನ್ನು ಆಗಾಗ್ಗೆ ಬದಲಾಯಿಸುತ್ತಲೇ ಇರುತ್ತಾರೆ. ನಟಿಯರೇ ಇವರೊಂದಿಗೆ ಇರುವುದಿಲ್ಲವೋ ಅಥವಾ ಸಲ್ಮಾನ್ ಖಾನ್ ಬೇಗನೇ ಬೋರಾಗುತ್ತಾರೋ ಗೊತ್ತಿಲ್ಲ.
ಕೊರೊನಾ
ಸಮಯದಲ್ಲಿ
ಸುಂದರ
ಚಿತ್ರ
ಹಂಚಿಕೊಂಡ
ಸಲ್ಮಾನ್
ಖಾನ್
ಕತ್ರೀನಾ ಕೈಫ್ ಜೊತೆ ಸುತ್ತಾಡುತ್ತಿದ್ದ ಸಲ್ಮಾನ್ ಖಾನ್ ಈಗ ಮತ್ತೆ ಗರ್ಲ್‌ಫ್ರೆಂಡ್ ಬದಲಿಸಿದ್ದು ಮತ್ತೆ ವಿದೇಶಿ ನಟಿಯೊಂದಿಗೆ ಕೈ-ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಯಾರಾ ವಿದೇಶಿ ನಟಿ, ಇಲ್ಲಿದೆ ನೋಡಿ ಉತ್ತರ...

ವಿದೇಶಿ ನಟಿಯೊಂದಿಗೆ ಸಲ್ಮಾನ್ ಪ್ಯಾರ್-ಪ್ಯಾರ್
ಸಲ್ಮಾನ್ ಖಾನ್ ಹೆಸರು ವಿದೇಶಿ ನಟಿ ಯುಲಿಯಾ ವೆಂಟೂರ್ ಜೊತೆ ಜೋರಾಗಿ ಕೇಳಿಬರುತ್ತಿದೆ. ರೊಮಾನಿಯಾದ ನಟಿಯಾಗಿರುವ ಯುಲಿಯಾ ವೆಂಟೂರ್ ಸಲ್ಮಾನ್ ಖಾನ್ ಜೊತೆ ರೇಸ್ 3 ನಲ್ಲಿ ನಟಿಸಿದ್ದರು.

ಕೆಲವು ತಿಂಗಳಿಂದಲೂ ಯುಲಿಯಾ ಜೊತೆ ಸಲ್ಮಾನ್
ಕಳೆದ ಕೆಲವು ತಿಂಗಳಿನಿಂದಲೂ ಯುಲಿಯಾ ವೆಂಟೂರ್ ಸಲ್ಮಾನ್ ಖಾನ್ ಜೊತೆಯಲ್ಲಿಯೇ ಇದ್ದಾರೆ ಎನ್ನಲಾಗಿದ್ದು, ಪ್ರಸ್ತುತ ಲಾಕ್‌ಡೌನ್ ಸಮಯದಲ್ಲೂ ಸಹ ಸಲ್ಮಾನ್ ಖಾನ್ ಹಾಗೂ ಯುಲಿಯಾ ವೆಂಟೂರ್ ಒಂದೇ ಫಾರ್ಮ್ ಹೌಸ್‌ನಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಸಹ ಸಿಕ್ಕಿದೆ.
ಹುಚ್ಚ
ಸಿನಿಮಾ
ರೀಮೇಕ್
ಮಾಡುವಾಗ
ಹೀಗೆ
ಹೇಳಿದ್ದರು
ಸಲ್ಮಾನ್
ಖಾನ್

ನಟಿಯ ಲೈವ್ ವಿಡಿಯೋದಲ್ಲಿ ಹಿಂದೆ ಕಾಣಿಸಿಕೊಂಡ ಸಲ್ಮಾನ್
ನಟಿ ಯುಲಿಯಾ ವೆಂಟೂರ್ ಇತ್ತೀಚೆಗೆ ತಮ್ಮ ದೇಶದ ಮಾಧ್ಯಮದವರಿಗೆ ವಿಡಿಯೋ ಸಂದರ್ಶನ ನೀಡುತ್ತಿದ್ದರು. ಇದು ಲೈವ್ ಆಗಿ ಪ್ರಸಾರವಾಗುತ್ತಿತ್ತು, ಆಗ ತಟ್ಟನೆ ಸಲ್ಮಾನ್ ಖಾನ್ ಹಿಂದೆ ಪ್ರತ್ಯಕ್ಷವಾಗಿಬಿಟ್ಟರು. ಯುಲಿಯಾ ಸಲ್ಮಾನ್ ಖಾನ್ ಅನ್ನು ವಿಡಿಯೋಕ್ಕೆ ಬರದಂತೆ ಪಕ್ಕಕ್ಕೆ ಕಳುಹಿಸಿದರು. ಆದರೆ ಸಲ್ಮಾನ್ ವಿಡಿಯೋದಲ್ಲಿ ಕಂಡು ಬಿಟ್ಟರು.

ಸಲ್ಮಾನ್ ಫಾರಂ ಹೌಸ್‌ನಲ್ಲಿ ಕುದುರೆ ಸವಾರಿ ಮಾಡಿದ್ದ ನಟಿ
ಇದಕ್ಕೆ ಮುನ್ನಾ ಯುಲಿಯಾ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಒಂದನ್ನು ಹಾಕಿಕೊಂಡಿದ್ದರು. ಆ ಕುದುರೆ ಸಲ್ಮಾನ್ ಖಾನ್ ಅವರಿಗೆ ಸೇರಿದ್ದು, ಸವಾರಿ ಸಹ ಸಲ್ಮಾನ್ ಖಾನ್ ಫಾರಂ ಹೌಸ್‌ನಲ್ಲಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದು ಸತ್ಯವೂ ಆಗಿತ್ತು.

ಹಲವರೊಂದಿಗೆ ಸಲ್ಮಾನ್ ಖಾನ್ ಹೆಸರು ತಳುಕು
ಐಶ್ವರ್ಯಾ ರೈ, ಸಂಗೀತಾ ಬಿಜಲಾನಿ, ಸ್ನೇಹಾ ಉಲ್ಲಾಳ್, ಸೋಮಿ ಅಲಿ, ಕತ್ರೀನಾ ಕೈಫ್ ಅವರುಗಳೊಂದಿಗೆ ಸಲ್ಮಾನ್ ಖಾನ್ ಹೆಸರು ಕೇಳಿಬಂದಿದೆ. ಈಗ ಯುಲಿಯಾ ಜೊತೆ ಸಲ್ಮಾನ್ ಪ್ರೇಮ ಅಬಾಧಿತವಾಗಿ ಸಾಗಿದೆ. ಇದು ಎಷ್ಟು ದೂರ ಸಾಗುತ್ತದೆಯೋ ಕಾದು ನೋಡಬೇಕು.