Just In
Don't Miss!
- News
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ
- Sports
ಐಎಸ್ಎಲ್: ಮನೆಯಂಗಣದ ಹೊರಗಡೆ ಮೊದಲ ಜಯದ ನಿರೀಕ್ಷೆಯಲ್ಲಿ ಚೆನ್ನೈ
- Automobiles
ಅನಾವರಣಗೊಂಡ 2020ರ ಬೆಂಝ್ ಜಿಎಲ್ಎ ಎಸ್ಯುವಿ
- Education
IBPS SO Admit Card 2019: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಪ್ರಿಲಿಮಿನರಿ ಪರೀಕ್ಷಾ ಪ್ರವೇಶ ಪತ್ರ ಪ್ರಕಟ
- Finance
ಹಿಂದಿ ಚಿತ್ರರಂಗದ ಹತ್ತು ವರ್ಷದ ಲೆಕ್ಕಾಚಾರ: ಸಲ್ಮಾನ್ ಖಾನ್ 'ಬಾಹುಬಲಿ'
- Lifestyle
ಆಟದ ನಡುವೆ ಮಗುವಿಗೆ ಎದೆ ಹಾಲುಣಿಸಿದ ವಾಲ್ಬಾಲ್ ಆಟಗಾರ್ತಿ, ಫೋಟೋ ವೈರಲ್
- Technology
ಅಗ್ಗದ ಬೆಲೆಯಲ್ಲಿ 'ನೋಕಿಯಾ C1' ಸ್ಮಾರ್ಟ್ಫೋನ್ ಬಿಡುಗಡೆ!
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಅಟ್ಲಿ ಇಲ್ಲ, ಹಿರಾನಿನೂ ಅಲ್ಲ....ಶಾರೂಖ್ ಮುಂದಿನ ಸಿನಿಮಾ ಇವರ ಜೊತೆ!
ಶಾರೂಖ್ ಖಾನ್ ಈ ವರ್ಷ ಯಾವ ಸಿನಿಮಾನೂ ಮಾಡಿಲ್ಲ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಜೀರೋ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಪ್ರೇಕ್ಷಕರಿಂದಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿಲ್ಲ. ಇದರಿಂದ ತೀವ್ರವಾಗಿ ಚಿಂತೆಗೆ ಒಳಗಾದ ಕಿಂಗ್ ಖಾನ್ ಮುಂದಿನ ಚಿತ್ರವನ್ನ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಮುಂದಿನ ಚಿತ್ರದ ಮೂಲಕ ಕಂಬ್ಯಾಕ್ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಶಾರೂಖ್, ಯಾವ ನಿರ್ದೇಶಕನ ಜೊತೆ ಕೆಲಸ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ.
ಶಾರೂಖ್ ಇಲ್ಲ, ಎನ್.ಟಿ.ಆರ್ ಇಲ್ಲ...ಸರ್ಪ್ರೈಸ್ ಕೊಟ್ರು ಅಟ್ಲಿ!
'ಬಿಗಿಲ್' ಸಿನಿಮಾ ಖ್ಯಾತಿಯ ಅಟ್ಲಿ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಮತ್ತೊಂದೆಡೆ ರಾಜ್ ಕುಮಾರ್ ಹಿರಾನಿ ಜೊತೆಯಲ್ಲೊಂದು ಪ್ರಾಜೆಕ್ಟ್ ಮಾಡುವ ಬಗ್ಗೆ ಮಾತುಕತೆ ಆಗುತ್ತಿದೆಯಂತೆ. ಆದ್ರೀಗ, ಈ ಎರಡು ಚಿತ್ರಗಳಿಗೂ ಮೊದಲು ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಎಂಬ ಸುದ್ದಿ ಈಗ ಬಿಟೌನ್ ನಲ್ಲಿ ಸದ್ದು ಮಾಡ್ತಿದೆ.
'ಜೀರೋ' ಸೋಲಿನ ಬಳಿಕ ಅಚ್ಚರಿ ನಿರ್ಧಾರ ತಗೊಂಡ ಶಾರೂಖ್ ಖಾನ್
ಬಾಲಿವುಡ್ನ ಜೋಡಿ ನಿರ್ದೇಶಕರು ಎಂದೇ ಗುರುತಿಸಿಕೊಂಡಿರುವ ರಾಜ್ ಮತ್ತು ಡಿಕೆ ಜೊತೆ ಶಾರೂಖ್ ಮುಂದಿನ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಈ ಕುರಿತು ಬಾಲಿವುಡ್ ಚಿತ್ರ ವಿಶ್ಲೇಷಕ ಕೋಮಲ್ ನೆಹ್ತಾ ಅವರು ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಅಧಿಕೃತವಾಗಿ ಹೇಳಿದ್ದಿದರೂ, ಬಹುತೇಕ ಖಚಿತ ಎಂದು ಹೇಳಿದ್ದಾರೆ.
ಶಾರೂಖ್ ಖಾನ್ ಕಾಮೆಂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ವಿಜಯ್ ಸೇತುಪತಿ
ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರದ ಶೀರ್ಷಿಕೆ, ಸ್ಕ್ರಿಪ್ಟ್, ಕಲಾವಿದರು ಎಲ್ಲವೂ ಅಂತಿಮವಾಗಿದೆ. ಬಹಳ ಗ್ರ್ಯಾಂಡ್ ಆಗಿ ಸಿನಿಮಾ ಲಾಂಚ್ ಮಾಡಲು ಸಿದ್ಧವಾಗಿದ್ದಾರೆ. 2020ರ ಆರಂಭದಲ್ಲಿ ಸಿನಿಮಾ ಶುರುವಾಗಲಿದ್ದು, 2020ರ ಅಂತ್ಯದಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆಯಂತೆ.
ಅಟ್ಲಿ, ರಾಜ್ ಕುಮಾರ್ ಹಿರಾನಿ ಮತ್ತು ರಾಜ್-ಡಿಕೆ ನಿರ್ದೇಶಕರಲ್ಲಿ ಯಾರ ಜೊತೆ ಶಾರೂಖ್ ಖಾನ್ ಸಿನಿಮಾ ಮಾಡಲಿ ಎಂದು ನೀವು ಇಷ್ಟಪಡುತ್ತೀರಾ ಎಂದು ಕಾಮೆಂಟ್ ಮಾಡಿ ತಿಳಿಸಿ.