For Quick Alerts
  ALLOW NOTIFICATIONS  
  For Daily Alerts

  ಪ್ಯಾರಿಸ್ ಹಿಲ್ಟನ್ ಗೆ ಬ್ಯಾಟ್ ನಿಂದ ಹೊಡೆದ ಶೆರ್ಲಿನ್

  By ರವಿಕಿಶೋರ್
  |

  ಬಾಲಿವುಡ್ ಬೆಡಗಿ ಶೆರ್ಲಿನ್ ಚೋಪ್ರಾ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಶೆರ್ಲಿನ್ ಅಭಿನಯಿಸುತ್ತಿರುವ ಕಾಮಸೂತ್ರ 3D ಚಿತ್ರದ ಶೂಟಿಂಗ್ ನ್ಯೂಯಾರ್ಕ್ ನ ಪ್ರದಾ ಸ್ಟೋರ್ ನಲ್ಲಿ ಭರದಿಂದ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಕುಡಿದ ಮತ್ತಿನಲ್ಲಿದ್ದ ಹಾಲಿವುಡ್ ತಾರೆ ಪ್ಯಾರಿಸ್ ಹಿಲ್ಟನ್ ಬಂದಿದ್ದಾರೆ.

  ಗುಂಡಿನ ಮತ್ತಿನಲ್ಲಿ ತೇಲಾಡುತ್ತಿದ್ದ ಹಿಲ್ಟನ್ ಇದ್ದಕ್ಕಿದ್ದಂತೆ ಶೆರ್ಲಿನ್ ಕಾಲು ಹಿಡಿದು ಆಕೆಯ ಶೂ ತೆಗೆಯಲು ಪ್ರಯತ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಶೆರ್ಲಿನ್ ಅಲ್ಲೇ ಇದ್ದ ಬೇಸ್ ಬಾಲ್ ಬ್ಯಾಟನ್ನು ಕೈಗೆತ್ತಿಕೊಂಡು ಹಿಲ್ಟನ್ ಮುಖಕ್ಕೆ ರಪ್ಪನೆ ಬಾರಿಸಿದ್ದಾರೆ.

  ಈ ಘಟನೆಯಿಂದ ಹಿಲ್ಟನ್ ಅವರ ತುಟಿ ಹಾಗೂ ಮೂಗಿಗೆ ಗಾಯವಾಗಿದೆ. ಕೂಡಲೆ ಶೆರ್ಲಿನ್ ಅವರನ್ನು ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಶೋಬಿಜ್ ವೆಬ್ ಸೈಟ್ ವರದಿ ಮಾಡಿದೆ. ಬಳಿಕ ಶೆರ್ಲಿನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

  ಶೆರ್ಲಿನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಲಿಂಡ್ಸೆ ಲೋಹನ್ ಹಾಗೂ ಪಿಂಕ್ ಎಂಬುವವರ ಮೇಲೂ ಕೈಮಾಡಿದ್ದರು. ಈಗ ಪ್ಯಾರಿಸ್ ಹಿಲ್ಟನ್ ಮೇಲೆ ಬ್ಯಾಟು ಎತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಮಾತನಾಡಿರುವ ಹಿಲ್ಟನ್, "ಇಷ್ಟಕ್ಕೆ ಅವಳನ್ನು ಸುಮ್ಮನೆ ಬಿಡಲ್ಲ" ಎಂದಿದ್ದಾರೆ.

  ಶೆರ್ಲಿನ್ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ. ಶೆರ್ಲಿನ್ ಸಹ ಅಷ್ಟೇ ರಾಮ್ ಜೇಠ್ಮಲಾನಿ ಅವರಾದರೂ ಸರಿ ಪ್ಯಾರಿಸ್ ಹಿಲ್ಟನ್ ಳನ್ನೂ ಸುಮ್ಮನೆ ಬಿಡಲ್ಲ ಎಂದು ಗುಡುಗಿದ್ದಾರೆ ಎನ್ನುತ್ತವೆ ಮೂಲಗಳು. ಏಪ್ರಿಲ್ ತಿಂಗಳಲ್ಲಿ ಈ ರೀತಿಯ ಸುದ್ದಿ ಹರಿದಾಡಿರುವುದು ಅದೆಷ್ಟು ಸತ್ಯವೋ ಅದೆಷ್ಟು ಸುಳ್ಳೋ ಆ ಚೆಂಬೇಶ್ವರನಿಗೇ ಗೊತ್ತಾಗಬೇಕು.

  English summary
  If reports are to be believed, sexy starlet Sherlyn Chopra beat up Paris Hilton at a high end New York Prada store and was arrested by the police, for causing injury to the socialite.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X