For Quick Alerts
  ALLOW NOTIFICATIONS  
  For Daily Alerts

  ಪೋಲಿ ಚಿತ್ರಗಳ ಬಗ್ಗೆ ಬಿಚ್ಚಮ್ಮ ಶೆರ್ಲಿನ್ ಬಿಚ್ಚುಮಾತು

  By Rajendra
  |

  ಪರಮ ಪೋಲಿ ಪತ್ರಿಕೆ ಎಂದೇ ಜನಪ್ರಿಯವಾಗಿರುವ 'ಪ್ಲೇಬಾಯ್'ಗೆ ತಮ್ಮ ಇಡೀ ಆಸ್ತಿ ಪಾಸ್ತಿಯನ್ನು ಧಾರೆ ಎರೆಯುವ ಮೂಲಕ ಬಾಲಿವುಡ್ ತಾರೆ ಶೆರ್ಲಿನ್ ಚೋಪ್ರಾ ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದರು. ಶೆರ್ಲಿನ್ ಬೆತ್ತಲೆ ಫೋಟೋಗಳ ಬಗ್ಗೆ ಅಪಸ್ವರಗಳೂ ಕೇಳಿಬಂದಿದ್ದವು.

  ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಶೆರ್ಲಿನ್ ತಮ್ಮ ರುಸುರುಸು ಫೋಟೋಗಳ ಬಗ್ಗೆ ಟ್ವೀಟಿಸಿ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದಾರೆ. "1000 ಒದ್ದೆಮುದ್ದೆ ಚುಂಬನಗಳು ಹಾಗೂ 10,000 ಬಿಗಿಯಪ್ಪುಗೆಗಳು, ಪ್ಲೇಬಾಯ್ ತಂಡದಿಂದ ಸಿಕ್ಕ ಉಡುಗೊರೆಗಳಿವು!!! ನಮ್ಮ ತಂದೆ ಜೀವಂತವಾಗಿದ್ದಿದ್ದರೆ ಅದೆಷ್ಟು ಖುಷಿಪಡುತ್ತಿದ್ದರೋ!!..."

  "ನನ್ನ ತಂದೆ ನನಗೆ ಅಪ್ಪ ಮತ್ತು ಅಮ್ಮ ಎರಡೂ ಆಗಿದ್ದರು. ವೈದ್ಯರಾಗಿದ್ದ ಅವರು ನನ್ನ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಿದ್ದರು, ಮುಟ್ಟಿನ ಯಾತನಾಮಯ ದಿನಗಳಲ್ಲೂ ನನ್ನ ಆರೈಕೆ ಮಾಡುತ್ತಿದ್ದರು!!" ಎಂದು ಟ್ವೀಟಿಸುವ ಮೂಲಕ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.

  ಒಂದು ವೇಳೆ ಶೆರ್ಲಿನ್ ಅವರ ತಂದೆ ಬದುಕಿದ್ದಿದ್ದರೆ ಆಕೆಯ ಈ ಘನಂದಾರಿ ಕೆಲಸಕ್ಕೆ ಏನೆನ್ನುತ್ತಿದ್ದರೋ ಏನೋ ಗೊತ್ತಿಲ್ಲ. ಆದರೆ ಈಕೆ ಮಾತ್ರ ಸತ್ತು ಸ್ವರ್ಗ ಸೇರಿರುವ ತಂದೆ ಹೆಸರನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂಬ ಮಾತುಗಳು ಬಾಲಿವುಡ್ ನಿಂದ ಕೇಳಿಬಂದಿವೆ.

  ವಯಸ್ಕರ ಪತ್ರಿಕೆಗಾಗಿ ಶೆರ್ಲಿನ್ ಚೋಪ್ರಾ ಸಂಪೂರ್ಣ ಬೆತ್ತಲಾಗುವ ಮೂಲಕ ಪ್ಲೇಬಾಯ್ ಮುಖಪುಟ ಅಲಂಕರಿಸುತ್ತಿರುವ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

  ಪತ್ರಿಕೆಗಾಗಿ ನಡೆದ ಫೋಟೋ ಶೂಟ್ ದೃಶ್ಯಗಳನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕುವ ಮೂಲಕ ಪಡ್ಡೆಗಳ ಬಿಪಿ ರೈಸ್ ಮಾಡಿದ್ದರು ಶೆರ್ಲಿನ್. ಕೇವಲ ಸ್ವಲ್ಪ ಸಮಯ ಮಾತ್ರ ಈ ಫೋಟೋಗಳನ್ನು ಪ್ರದರ್ಶಿಸಿ ಬಳಿಕ ಡಿಲೀಟ್ ಮಾಡಿದ್ದರು.

  ಆದರೆ ಈಕೆ ಡಿಲೀಟ್ ಮಾಡುವಷ್ಟರಲ್ಲಾಗಲೆ ಲಕ್ಷಾಂತರ ಪ್ರೇಮಿಗಳು ಈ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡಾಗಿತ್ತು. ಈ ಹಿಂದೊಮ್ಮೆ ಶೆರ್ಲಿನ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮದೇ ಆದ ಪೋಲಿ ಫೋಟೋವನ್ನು ತೇಲಿಬಿಟ್ಟಿದ್ದರು.

  ನನ್ನ ಸಂಗ್ರಹಲ್ಲಿದ್ದ ಫೋಟೋವನ್ನು ಗೆಳೆಯರು ಹಾಗೂ ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗಾಗಿ ಈ ಫೋಟೋ ಹಾಕಿದ್ದೇನೆ ಎಂದು ಶೆರ್ಲಿನ್ ಸಮರ್ಥಿಸಿಕೊಂಡಿದ್ದರು. ಈಗಲೂ ಅದನ್ನೇ ಮಾಡಿದ್ದಾರೆ. (ಏಜೆನ್ಸೀಸ್)

  English summary
  Actress Sherlyn Chopra recently tweeted, "1000 wet kisses n 10,000 super tight hugs 2 the entire Playboy team!!!Wish my dad were alive,he'd hv been so proud of this!! (sic)." "My dad was both a dad n a mom 2 me. As a doc,he knew better 2 take care of me at all times,even during my painful periods!!! (sic)."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X