»   » ಕನ್ನಡ ಚಿತ್ರಕ್ಕೆ ಶ್ರೀಯಾ ಸರನ್ ಸಂಭಾವನೆ ಎಷ್ಟು?

ಕನ್ನಡ ಚಿತ್ರಕ್ಕೆ ಶ್ರೀಯಾ ಸರನ್ ಸಂಭಾವನೆ ಎಷ್ಟು?

Posted By:
Subscribe to Filmibeat Kannada
ಚಂದ್ರ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿರುವ ಬಹುಭಾಷಾ ನಟಿ ಶ್ರೀಯಾ ಸರನ್ ಕನ್ನಡ ಚಿತ್ರದಲ್ಲಿ ನಟಿಸಲು ಎಷ್ಟು ಸಂಭಾವನೆಗೆ ಒಪ್ಪಿಕೊಂಡಿದ್ದಾರೆ ಎಂಬುದೀಗ ಕುತೂಹಲದ ವಿಷಯ. ಆದರೆ ಅದೆಷ್ಟಕ್ಕೆ ಮಾತುಕತೆಯಾಗಿದೆ ಎಂಬುದು ರಹಸ್ಯವಾದರೂ ಅವರ ಮಾಮೂಲಿ ಸಂಭಾವನೆಯಾದ ಕೋಟಿ ರೂಪಾಯಿಯನ್ನು ಶ್ರೀಯಾ ಕೇಳಿಲ್ಲ ಎನ್ನಲಾಗುತ್ತಿದೆ. ರಮ್ಯಾ ಸಂಭಾವನೆಯೇ ದುಬಾರಿ ಎಂದು ಕಣ್ಣುಬಾಯಿ ಬಿಡುವ ಕನ್ನಡದ ನಿರ್ಮಾಪಕರು ಶ್ರೀಯಾಗೆ ಕೋಟಿ ಕೊಡಲಾರರು.

ಅವರ ವಕ್ತಾರರನ್ನು ಕೇಳಿದರೆ "ಅವರು ಕನ್ನಡದಲ್ಲಿ ನಟಿಸಲು ಆಸಕ್ತರಾಗಿದ್ದರು" ಎಂದಷ್ಟೇ ಚುಟುಕು ಉತ್ತರ ನೀಡಿದ್ದಾರೆ. ಅವರೆಷ್ಟಕ್ಕೆ ಒಪ್ಪಿದ್ದಾರೆ, ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಏಳೆಂಟು ವರ್ಷಗಳ ಹಿಂದೆಯೇ ತಮಿಳು ಚಿತ್ರವೊಂದಕ್ಕೆ 15 ಲಕ್ಷ ರು. ಎಣಿಸುತ್ತಿದ್ದ ಶ್ರೀಯಾ ಈಗ ಕೋಟಿ ರು.ಗಿಂತ ಹೆಚ್ಚು ಕೇಳುವುದು ಜಗಜ್ಜಾಹೀರು. ಅದಕ್ಕಿಂತ ಒಂದು ರು. ಕೂಡ ಕಡಿಮೆಗೆ ಒಪ್ಪದ ಅವರು ಕನ್ನಡದಲ್ಲಿ ನಟಿಸಲು ಒಪ್ಪಿರುವುದೇ ಹಲವರ ಅಚ್ಚರಿಗೆ ಕಾರಣವಾಗಿದೆ.

ಕನ್ನಡದಲ್ಲಿ ಖಂಡಿತ ಅವರಿಗೆ ಕೋಟಿ ರು ಸಿಗಲು ಸಾಧ್ಯವಿಲ್ಲ. ಆದರೆ ಈ ಮೊದಲು ಅರಸು ಚಿತ್ರದ ಅತಿಥಿ ಪಾತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಶ್ರೀಯಾಗೆ, ಪೂರ್ಣ ಪ್ರಮಾಣದಲ್ಲಿ ನಟಿಸಲು ಚಂದ್ರದಲ್ಲಿ ಅವಕಾಶವಾಗಿದೆ. ಜೊತೆಗೆ ಚಂದ್ರಾವತಿ ಎಂಬ ಯುವರಾಣಿಯ ಪಾತ್ರ ಅವರಿಗೆ ತುಂಬಾ ಇಷ್ಟವಾಗಿದೆ. ಮುಖಪುಟ ಎಂಬ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ನಿರ್ದೇಶಕ ರೂಪಾ ಅಯ್ಯರ್ ಚಿತ್ರ ಬೇರೆ.

ಹೀಗಾಗಿ ಶ್ರೀಯಾ ಈ ಚಿತ್ರ ಒಪ್ಪಿ ಕಡಿಮೆ ಸಂಭಾವನೆಗೆ ಕನ್ನಡಕ್ಕೆ ಕಾಲಿಟ್ಟಿರಬಹುದು ಎನ್ನುತ್ತಿದೆ ಗಾಂಧಿನಗರದ ಸುದ್ದಿಮೂಲ. ಅದಕ್ಕಿಂತ ಹೆಚ್ಚಾಗಿ ಸಮೀರಾ ರೆಡ್ಡಿಯಂತಹ ಬಹಳಷ್ಟು ಜನಪ್ರಿಯ ತಾರೆಯರೂ ಕನ್ನಡದ ಕಡೆ ಮುಖಮಾಡುತ್ತಿದ್ದಾರೆ. ಈ ಮೊದಲು ಡೇಟ್ಸ್ ಸಮಸ್ಯೆಯಿಂದ ಸಾಕಷ್ಟು ಕನ್ನಡದ ಚಿತ್ರಗಳ ಆಫರ್ ಗಳನ್ನು ತಪ್ಪಸಿಕೊಂಡಿದ್ದ ಶ್ರೀಯಾ ಈಗ ಇರುವ ಡೇಟ್ಸ್ ಬಳಸಿಕೊಂಡು ಕನ್ನಡದಲ್ಲಿ ನಟಿಸುತ್ತಿದ್ದಾರೆ ಎಂಬುದೇ ಹೆಚ್ಚು ಸೂಕ್ತವಾದ ಕಾರಣವೇನೋ..! (ಒನ್ ಇಂಡಿಯಾ ಕನ್ನಡ)

English summary
As everybody knows, Actress Shriya Saran is acting in a Kannada Movie called Chandra. Roopa iyer directs this movie and Lovely Star Prem is the Hero. Her remuneration is normally One Crore Rupees. But she agreed less than crore for the Kannada movie as sources are reviled. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada