»   » ಪುನೀತ್ ಚಿತ್ರದಲ್ಲಿ 'ನೀಳ ಕಾಲ್ಗಳ' ಶ್ರುತಿ ಹಾಸನ್?

ಪುನೀತ್ ಚಿತ್ರದಲ್ಲಿ 'ನೀಳ ಕಾಲ್ಗಳ' ಶ್ರುತಿ ಹಾಸನ್?

By: * ಅನ್ಬು
Subscribe to Filmibeat Kannada
Shruti Hassan to enter Kannada films, pairing up with Puneet Rajkumar?
ಕಮಲ್ ಹಾಸನ್ ಅವರ ಪುತ್ರಿ ಗಾಯಕಿ, ನಟಿ ಶ್ರುತಿ ಹಾಸನ್ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ ಎಂಬ ಸುದ್ದಿ ಮತ್ತೊಮ್ಮೆ ಹಬ್ಬಿದೆ. ಈ ಹಿಂದೆ ಪುನೀತ್ ಅವರ ಪೃಥ್ವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ, ಆ ಚಿತ್ರದಲ್ಲಿ ಒಂದು ಹಾಡನ್ನು ಮಾತ್ರ ಶ್ರುತಿ ಹಾಡಿದ್ದರು. ಉತ್ತಮ ಗಾಯಕಿಯಾಗಿದ್ದ ಶ್ರುತಿ ಕಾಲಿಟ್ಟ ಕಡೆಯೆಲ್ಲ ಚಿತ್ರಗಳು ತೋಪೆದ್ದಿದ್ದು 'ಐರೆನ್ ಲೆಗ್' ಎಂದು ಚಿತ್ರರಂಗ ಆಡಿಕೊಂಡಿದ್ದು ಇದೆ.

ಆದರೆ, ಈಗ ಪವರ್ ಸ್ಟಾರ್ ಪುನೀತ್ ಜೊತೆ ಶ್ರುತಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ನಿರ್ದೇಶಕ ಜಯಂತ್ ಚಿ ಪರಾಂಜಿ ಅವರು ಶ್ರುತಿ ಅವರನ್ನು ಸಂಪರ್ಕಿಸಿದ್ದು, ಶ್ರುತಿ ಬಹುತೇಕ ಒಪ್ಪಿಗೆ ನೀಡಿದ್ದಾರೆ ಎಂಬ ಮಾತಿದೆ. ಕನ್ನಡದ ಕೋಟ್ಯಧಿಪತಿ ಶೂಟಿಂಗ್ ನಲ್ಲಿ ಪುನೀತ್ ಬ್ಯುಸಿಯಾಗಿರುವುದರಿಂದ ಚಿತ್ರ ಇನ್ನೂ ಸೆಟ್ಟೇರಿಲ್ಲ. ಪುನೀತ್ ಅವರ ಹುಟ್ಟುಹಬ್ಬದ ದಿನದಂದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಹಾಕುವ ನಿರೀಕ್ಷೆಯಿತ್ತು.

ಜಯಂತ್ ಪರಾಂಜಿ ಅವರು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ಮಹೇಶ್ ಬಾಬು, ಪವನ್ ಕಲ್ಯಾಣ್ ಸೇರಿ ಎಲ್ಲಾ ಜನಪ್ರಿಯ ನಟರಿಗೂ ಆಕ್ಷನ್ ಕಟ್ ಹೇಳಿದ ಅನುಭವಿದೆ. ಪುನೀತ್ ಅವರ ಹೊಸ ಚಿತ್ರ 'ನಿನ್ನಿಂದಲೇ..' ಗೆ ಜಯಂತ್ ನಿರ್ದೇಶಕರಾಗಿ ಶ್ರುತಿ ಕಾಲಿಡುವುದು ಬಹುತೇಕ ಖಾತ್ರಿ ಎನ್ನಬಹುದು.

ಶ್ರುತಿ ಟ್ರ್ಯಾಕ್ ರೆಕಾರ್ಡ್: ದೇವರ್ ಮಗನ್ ಚಿತ್ರದ 'ಪೊಟ್ರಿ ಪಾಡಡಿ ಪೊನ್ನೆ ಹಾಡು ನೆನಪಿರಬೇಕಲ್ಲ. ಇಳಯರಾಜ ಸಂಗೀತ ಸಂಯೋಜನೆಯ ಗೀತೆಗೆ ದನಿ ನೀಡುವ ಮೂಲಕ 1992ರಲ್ಲೇ ಚಿತ್ರರಂಗಕ್ಕೆ ಅಧಿಕೃತವಾಗಿ ಶ್ರುತಿ ಎಂಟ್ರಿ ಕೊಟ್ಟವರು. ಅಪ್ಪ ಕಮಲ್ ಅಮ್ಮ ಸಾರಿಕಾ ಅವರ ನೆರಳಿಲ್ಲದೆ ಚಿತ್ರರಂಗದಲ್ಲಿ ಗಾಯಕಿಯಾಗಿ ಒಳ್ಳೆ ಹೆಸರು ಗಳಿಸಿದವರು.

ತೆಳ್ಳಗೆ ಬೆಳ್ಳಗೆ ಅಮ್ಮನ ಹೋಲಿಕೆ ಇರುವ ಶ್ರುತಿಗೆ ನಟನೆ ಹುಚ್ಚು ಹಿಡಿದಿದ್ದೆ ತಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದಳು. ಅನಗನಗ ಓ ಧೀರುಡು ಫ್ಯಾಂಟಸಿ ಸಿನಿಮಾಗೆ ಫಿಲಂಫೇರ್ ಬಂದರೂ ಚಿತ್ರ ಓಡಲಿಲ್ಲ. ಹಿಂದಿಯಲ್ಲಿ ಎರಡು ಚಿತ್ರದಲ್ಲಿ ನಟಿಸಿದರೂ 'ಲಕ್' ಕುದುರಲಿಲ್ಲ. ಕಡೆಗೆ ಸೂರ್ಯ ಜೊತೆ 7 ಆಮ್ ಅರಿವು ಚಿತ್ರದಲ್ಲಿ ನಟಿಸಿದರೂ ಏಳಿಗೆಯಾಗಲಿಲ್ಲ.

ಗಬ್ಬರ್ ಸಿಂಗ್ ಓಡಿದರೂ ಪವನ್ ಕಲ್ಯಾಣ್ ನಿಂದಾಗಿ, 3 ಚಿತ್ರ ಸದ್ದು ಮಾಡಿದ್ದು ಕೊಲವೆರಿ ಡಿ ಹಾಡಿಗಾಗಿ ಶ್ರುತಿ ಗಾಯಕಿಯಾಗೇ ಕನ್ನಡ ಚಿತ್ರಕ್ಕೆ ಬಂದರೆ ಸಾಕು ನಾಯಕಿಯಾಗಿ ಏತಕ್ಕೆ ಬೇಕು ಎಂದು ಪುನೀತ್ ಅಭಿಮಾನಿಗಳು ಗೊಣಗಾಡುತ್ತಿರುವುದು ಸುಳ್ಳಲ್ಲ. ಶ್ರುತಿ ಕಾಲಿಟ್ಟ ಕೂಡಲೇ ಚಿತ್ರ ಢಮಾರ್ ಆಗಲೇ ಬೇಕು ಎಂಬ ಸಿದ್ಧಾಂತವಿಲ್ಲ. ಶ್ರುತಿ ಕಾಲ್ಗುಣದಿಂದ ಪುನೀತ್ ಚಿತ್ರವೂ ಓಡಲಿ

English summary
Shruti Hassan, who had earlier crooned a song in Kannada movie Prithvi starring Puneet Rajkumar, is all set to make her Sandalwood acting debut. The singer-turned-actress and the daughter of Kamal Hassan will be reportedly pairing up with the Power Star of Kannada film industry.
Please Wait while comments are loading...