»   » ತಾಪಸಿ ಮೀನಖಂಡದ ಮೇಲೆ ಚೆಲುವಿನ ಚಿತ್ತಾರ

ತಾಪಸಿ ಮೀನಖಂಡದ ಮೇಲೆ ಚೆಲುವಿನ ಚಿತ್ತಾರ

By: ರವಿಕಿಶೋರ್
Subscribe to Filmibeat Kannada

ತಮಿಳು, ತೆಲುಗು ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿ ಈಗ ಬಾಲಿವುಡ್ ಗೆ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ ತಾರೆ ತಾಪಸಿ ಪನ್ನು. ಬಾಲಿವುಡ್ ನಲ್ಲೂ ಆಕೆಯ ಮೈಮಾಟದ ಮಾಯಾಜಾಲ ನಡೆಯುತ್ತದೆ ಎಂಬ ಬಗ್ಗೆ ಭಾರಿ ನಿರೀಕ್ಷೆಗಳಿವೆ. 'ಚಸ್ಮೆ ಬದ್ದೂರ್' ಎಂಬ ಚಿತ್ರದಲ್ಲಿ ಈ ಪಂಜಾಬಿ ಪಾರಿಜಾತ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ನಾಯಕ ನಟ ಸಿದ್ಧಾರ್ಥ್. ಇತ್ತೀಚೆಗೆ ಈ ಚಿತ್ರ ಆಡಿಯೋ ಬಿಡುಗಡೆಯಾಯಿತು. ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದದ್ದು ಮಾತ್ರ ತಾಪಸಿ. ತಿಳಿಗೆಂಪು ಬಣ್ಣದ ಬಟ್ಟೆಗಳಲ್ಲಿ ಮಿರಮಿರ ಮಿಂಚುತ್ತಿದ್ದರು. ಕ್ಯಾಮೆರಾಗಳ ಕಣ್ಣು ಮಾತ್ರ ಆಕೆಯ ಕಡೆಗೆ ನೆಟ್ಟಿತ್ತು.

ಅದರಲ್ಲೂ ಆಕೆಯ ಪಾದದ ಬಳಿ ಇದ್ದ ಹಚ್ಚೆ ಎಲ್ಲರ ಗಮನಸೆಳೆಯಿತು. ಆಗಾಗ ತಮ್ಮ ಮೈಮಾಟ, ಅಂದಚೆಂದದ ವೈಯ್ಯಾರದ ಪ್ರದರ್ಶನವೂ ಆಗುತ್ತಿತ್ತು. ಇಲ್ಲಿವೆ ನೋಡಿ ಆಕೆಯ ಮೈಮಾಟದ ಝಲಕ್. ಈ 25ರ ಹರೆಯದ ತಾರೆ ಬಾಲಿವುಡ್ ಅಂಗಳಕ್ಕೆ ಅಡಿಯಿಡುತ್ತಿದ್ದಂತೆ ಅಲ್ಲಿನ ವ್ಯಾಕರಣವನ್ನು ಚೆನ್ನಾಗಿ ಕರಗತ ಮಾಡಿಕೊಂಡಂತಿದೆ.

ಟ್ಯಾಟೂ ಪ್ರದರ್ಶನಕ್ಕಾಗಿಯೇ ಈ ಡ್ರೆಸ್ಸಾ?

ತಾಪಸಿಯ ಹೊಸ ಉಡುಗೆತೊಡುಗೆ ನೋಡಿದರೆ ಅವರು ಹಾಕಿಸಿಕೊಂಡಿರುವ ಟ್ಯಾಟೂ ಪ್ರದರ್ಶನಕ್ಕಾಗಿಯೇ ಈ ಅವತಾರ ಎನ್ನಿಸುತ್ತದೆ. ತಮ್ಮ ಮೀನಖಂಡಗಳ ಮೇಲೆ ತಾಪಸಿ ಹಚ್ಚೆ ಹಾಕಿಸಿಕೊಂಡಿರುವುದು ವಿಶೇಷ.

ತಾಪಸಿ ಹಾಕಿಸಿಕೊಂಡಿದು ಯಾರ ಹಚ್ಚೆ?

ಸಾಮಾನ್ಯವಾಗಿ ತಮಗಿಷ್ಟದ ವ್ಯಕ್ತಿಗಳ ಹೆಸರನ್ನು ಹಚ್ಚೆಯಾಗಿ ಹಾಕಿಸಿಕೊಳ್ಳುತ್ತಾರೆ. ಆದರೆ ತಾಪಸಿ ಮಾತ್ರ ಅದೇನನ್ನು ಹಾಕಿಸಿಕೊಂಡಿದ್ದಾರೋ ಅದೇನೋ ಆಕೆಗೇ ಗೊತ್ತಾಗಬೇಕು.

ಬಾಲಿವುಡ್ ನಲ್ಲಿ ಇಷ್ಟೂ ಮಾಡದಿದ್ದರೆ ಹೇಗೆ?

ಅತ್ತ ಬಾಲಿವುಡ್ ಗೆ ಜಿಗಿಯುತ್ತಿದ್ದಂತೆಯೇ ಆಕೆಯ ವೇಷಭೂಷಣದಲ್ಲೂ ಬದಲಾವಣೆ ಬಂದಿದೆ. ಈ ರೀತಿಯ ಮೈಮಾಟದ ಪ್ರದರ್ಶನದ ಟ್ರಿಕ್ ಕಲಿಯದಿದ್ದರೆ ಬಾಲಿವುಡ್ ನಲ್ಲಿ ಉಳಿಗಾಲವಿಲ್ಲ ಬಿಡಿ.

ಯರ್ರಾ ಬಿರ್ರಿ ಕುಣಿತಕ್ಕೆ ಬಟ್ಟೆಗಳು ಸಹಕರಿಸಲಿಲ್ಲ

ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳ ಜೊತೆಗೂ ಹೆಜ್ಜೆ ಹಾಕಿದರು ತಾಪಸಿ. ಆದರೆ ಆಕೆಯ ಯರ್ರಾ ಬಿರ್ರಿ ಕುಣಿತಕ್ಕೆ ಅರೆಬರೆ ಬಟ್ಟೆಗಳು ಸಂಪೂರ್ಣ ಸಹಕರಿಸಲಿಲ್ಲ.

ತಾಪಸಿಗೆ ಇದೆಲ್ಲಾ ಬೇಕಿತ್ತಾ?

ಅರೆಬರೆ ಉಡುಗೆಯಲ್ಲಿ ತಮ್ಮ ಮೈಮಾಟ ಪ್ರದರ್ಶಿಸಿದ ತಾಪಸಿ ಕಡೆಗೆ ಈ ರೀತಿಯೂ ಒಂದು ಫೋಸು ನೀಡಿದರು. ನೋಡಿದವರು ಅಬ್ಬಬ್ಬಾ ಎಂದು ಹೌಹಾರಿದ್ದಾರೆ. ತಾಪಸಿಗೆ ಇದೆಲ್ಲಾ ಬೇಕಿತ್ತಾ ಎಂದವರೂ ಇದ್ದಾರೆ.

ತಾಪಸಿ ಇನ್ನೂ ಚೊಚ್ಚಲ ಹೆಜ್ಜೆ ಅಷ್ಟೇ?

ಬಾಲಿವುಡ್ ನ ರಂಭೆ, ಊರ್ವಶಿ, ತಿಲೋತ್ತಮೆಯರಾದ ಸನ್ನಿ ಲಿಯೋನ್, ವೀಣಾ ಮಲಿಕ್, ಪೂನಂ ಪಾಂಡೆ ಇವರಿಗೆ ಹೋಲಿಸಿದರೆ ತಾಪಸಿ ಅದೆಷ್ಟೋ ಉತ್ತಮ ಅನ್ನಿಸುತ್ತದೆ.

English summary
Hot and happening Tapasee Pannu seems to be going places. The actress, who has tasted success in Tamil and Telugu films, is ready to spell the same magic in Bollywood. The Punjabi kudi is entering Hindi film industry with Chashme Baddoor, which also stars Siddharth.
Please Wait while comments are loading...