»   » ಕನ್ನಡದ ಅತ್ಯಂತ ನತದೃಷ್ಟ ನಿರ್ದೇಶಕ ಯಾರು ಗೊತ್ತಾ?

ಕನ್ನಡದ ಅತ್ಯಂತ ನತದೃಷ್ಟ ನಿರ್ದೇಶಕ ಯಾರು ಗೊತ್ತಾ?

By: ಕುಸುಮ
Subscribe to Filmibeat Kannada

ಈ ಪ್ರಶ್ನೆಗೆ ಬರುವ ಉತ್ತರ ನಿಸ್ಸಂಶಯವಾಗಿ 'ಜೋಗಿ' ಖ್ಯಾತಿಯ ಪ್ರೇಮ್. ಪ್ರೇಮ್ ನಿರ್ದೇಶಕನಾಗಿ ದೊಡ್ಡ ಹೆಸರು. ನಟನಾಗು ಮಿಂಚ್ತಿಯಾ ಅಂತ ಅವರಿಗೆ ಯಾರು ಸಲಹೆ ಕೊಟ್ಟರೋ, ಅವರ ನಸೀಬೇ ಕೆಟ್ಟುಹೋಗಿದೆ. ಈಕಡೆ ನಿರ್ದೇಶಕನಾಗಿಯೂ ಮಿಂಚ್ತಿಲ್ಲ, ನಟನಾಗಿಯೂ ಹೊಳೀತಿಲ್ಲ.

ಮೊದಲಿಗೆ ಸೂಪರ್ ಡೂಪರ್ ಹಿಟ್ 'ಕರಿಯಾ' ಸಿನಿಮಾ ಕೊಟ್ಟ ಈ ಮಂಡ್ಯ ಹೈದನಿಗೆ 'ಕರಿಯಾ' ಪ್ರೇಮ್ ಅಂದ್ರು. ನಂತರ 'ಎಕ್ಸ್‌ಕ್ಯೂಸ್ ಮಿ' ಅಂತ ತಾನೇ ದಾರಿ ಮಾಡಿಕೊಂಡು ಬಂದು ಗೆದ್ದು ನಿಂತ ಪ್ರೇಮ್ಗೆ 'ಎಕ್ಸ್‌ಕ್ಯೂಸ್‌ಮಿ' ಪ್ರೇಮ್ ಅಂದ್ರು.


ಅದಾದ ನಂತರ 2005ರಲ್ಲಿ 'ಜೋಗಿ' ಬಂತು. ಜೋಗಿ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸ್ತು, ಚಿತ್ರಪ್ರೇಮಿಗಳು ಜೋಗಿ ಪ್ರೇಮ್ ಅಂದ್ರು. ಅದಾದ ನಂತರ ಪ್ರೇಮ್ ಹೆಸರೇ ಬದಲಾಗಿಲ್ಲ. ಪ್ರೇಮ್ ಅನ್ನೋ ಹ್ಯಾಟ್ರಿಕ್ ಡೈರೆಕ್ಟರ್ ಹವಾ ಅಲ್ಲಿಗೆ ನಿಂತು ಹೋಯ್ತಾ?


ಆಮೇಲೆ ಬಂದ ಯಾವ ಸಿನಿಮಾಗಳು ಹಿಟ್ ಪಟ್ಟಿ ಸೇರಿಲ್ಲ. ಬಹುಷಃ ಮೂರು ವರ್ಷದ ಅಂತರದಲ್ಲಿ 3 ಸೂಪರ್ಹಿಟ್ ಕೊಟ್ಟು ಹತ್ತು ವರ್ಷವಾದ್ರೂ ಒಂದೂ ಯಶಸ್ವಿ ಸಿನಿಮಾ ಕೊಡದ ಅಪರೂಪದ ನಿರ್ದೇಶಕ ಪ್ರೇಮ್.


ಇದರ ನಡುವೆ ಪ್ರೇಮ್ ನನಗೆ ಡೈರೆಕ್ಷನ್ಗಿಂತ ನಟನೆ ಸುಲಭ ಅನ್ನಿಸುತ್ತೆ ಅಂತ ಅಲ್ಲಿಗೆ ಹೋದ್ರು. ಆದರೆ ಅಲ್ಲಿ ಕೂಡ ಪ್ರೇಮ್ ಅಡ್ಡಡ್ಡ ಮಲಗಿದ್ರು. [ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್]

Who is the most unluckiest director? Jogi Prem

ಇನ್ನು ಈಗಿನ ಪರಿಸ್ಥಿತಿ ಹೇಳೋದಾದ್ರೆ. ಅವರದ್ದೇ ನಟನೆಯಲ್ಲಿ ಬರಬೇಕಿದ್ದ 'ಗಾಂಧಿಗಿರಿ' ಸುದ್ದಿಯೇ ಇಲ್ಲ. 'ಮೈ ನೇಮ್ ಈಸ್ ಭೈರೇಗೌಡ' ಸದ್ದಡಗಿದೆ. 'ಭಂಭಂ ಭೋಲೇನಾಥ್' ಸಿನಿಮಾ ಶುರುವಾಗೋ ಮೊದಲೇ ನಿಂತುಹೋಗಿದೆ. ಇನ್ನು 'ಆರ್ ದಿ ಕಿಂಗ್' ಅನ್ನೋ ಚಿತ್ರ ವಿನಯ್ರಾಜ್ ಕುಮಾರ್ಗೆ ನಿರ್ದೇಶನ ಮಾಡೋಕೆ ಹೊರಟು ಅದೂ ನಿಂತು ಹೋಯ್ತು.

ಈಗ ಭಾರೀ ಸುದ್ದಿ ಮಾಡುತ್ತಿದ ಹೆಸರು 'ಕಲಿ'. ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಜೋಡಿಯ ಕಲಿಯ ಕಥೆಯೂ ಅರ್ಧಕ್ಕೇ ನಿಂತಿದೆ. ಅದರ ಬದಲಿಗೆ ಅದೇ ಶಿವಣ್ಣ ಮತ್ತು ಸುದೀಪ್ ಜೋಡಿಯಾಗಿರೋ ಮಾಸ್ ಸಿನಿಮಾ ರೆಡಿಯಾಗಲಿದೆಯಂತೆ. ಸದ್ಯಕ್ಕೆ ಅದೂ ನಿಂತು ಹೋಗದಿದ್ರೆ ಸಾಕು! [ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿ ಇವರೇನಾ?]

English summary
Who is the most unluckiest director in Kannada film industry? That is none other than Jogi Prem. He gave 3 super hit movies, Excuse Me, Kariya and Jogi, one after the other. But, what happened after that? Array of flop cinemas one after the other.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada