For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲಿ ಕೈ ಬಿಡೋರೇ ಜಾಸ್ತಿ

  By ಜೀವನರಸಿಕ
  |

  ಆ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಕಣ್ತುಂಬಾ ಕನಸು ತುಂಬಿಕೊಂಡು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ರು. ಮೊದಲ ಸಿನಿಮಾನೇ ಈಗಾಗ್ಲೇ ಗುರುತಿಸಿಕೊಂಡಿರೋ ನಟ ಚಿರಂಜೀವಿ ಸರ್ಜಾಗೇ ಜೋಡಿಯಾಗೋ ಅವಕಾಶ ಸಿಕ್ಕಾಗ ಫುಲ್ ಖುಷಿಯಾದ್ರು. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ.

  ಅಯ್ಯ-2 ಸಿನಿಮಾದಿಂದ ವೈಶಾಲಿ ದೀಪಕ್ ಹೊರಬಂದ್ರು. ಕನ್ನಡದಲ್ಲಿ ಮೊದಲ ಸಿನಿಮಾನೇ ಕಳ್ಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲವಲ್ಲ ಅನ್ನೋ ನೋವು ಈ ಬ್ಯೂಟಿಯ ಕಣ್ಣಲ್ಲಿತ್ತು. ಅಯ್ಯ ಚಿತ್ರಕ್ಕೆ ಈಗ ಹೊಸ ನಾಯಕಿ ಐಶ್ವರ್ಯ ದೇವನ್. ['ಅಯ್ಯ 2' ಚಿತ್ರದಿಂದ ನಟಿ ವೈಶಾಲಿ ದೀಪಕ್ ಔಟ್]

  ಯಾಕೆ ಫಸ್ಟ್ ಪ್ರಾಜೆಕ್ಟೇ ಕೈಬಿಡ್ತು ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಕೈ ಬಿಡೋರೇ ಜಾಸ್ತಿ. ನಾವ್ ಎಲ್ಲದಕ್ಕೂ ಓಕೆ ಅಂದ್ರೆ ಆಗುತ್ತೆ. ಆದ್ರೆ ನಂಗ್ಯಾಕೋ ಕೆಲವು ವಿಷ್ಯಗಳು ಇಷ್ಟ ಆಗ್ಲಿಲ್ಲ ಅಂಥ ತಣ್ಣಗೆ ಸುಮ್ಮನಾದ್ರು.

  ಅಲ್ಲ ಯಾಕೆ ಹೀಗಾಯ್ತು. ಏನು ಮ್ಯಾಟ್ರು ಅಂಥ ಮತ್ತೆ ಮತ್ತೆ ನಾವು ಕೇಳಿದ ಪ್ರಶ್ನೆಗೆ ಉತ್ತರ ಕೊಡೋಕಾಗ್ದೇ ವೈಶಾಲಿ ಅಮ್ಮನ ಮುಖ ನೋಡಿದ್ರು. ಏನೇ ಆಗ್ಲಿ ಸ್ಯಾಂಡಲ್ ವುಡ್ ನಲ್ಲಿ ಕೈ ಹಿಡಿಯೋರು ಕಡಿಮೆ ಕೈ ಬಿಡೋರೆ ಜಾಸ್ತಿ. ಚಿತ್ರರಂಗದವ್ರೇ ಹೊಸಬರ ಕೈ ಹಿಡೀರಿ ಯಾಕಂದ್ರೆ ಈ ವರ್ಷ ನಿಮ್ಮ ಕೈ ಹಿಡಿದಿದ್ದು ಸಹ ಅವರೇ.

  ಈ ಚಿತ್ರದಲ್ಲಿ ದೇಶ ಕಾಯುವ ನಾಯಕನಾಗಿ ಚಿರಂಜೀವಿ ಸರ್ಜಾ ಇದ್ದಾರೆ. ಅವರ ಪಾತ್ರದ ಮುಖೇನ ಯುವ ಜನತೆ ದೇಶವನ್ನು ಕಾಪಾಡಿಕೊಳ್ಳಬೇಕೆಂದು ಹೇಳಲಾಗಿದೆ. ಓಂ ಪ್ರೊಡಕ್ಷನ್ ಅಡಿಯಲ್ಲಿ, ಎ ಎಂ ಉಮೇಶ್ ರೆಡ್ಡಿ ಅವರ ನಿರ್ಮಾಣದ ಚಿತ್ರಕ್ಕೆ ಎಂ ಎಸ್ ರಮೇಶ್ ಅವರ ಸಂಭಾಷಣೆ, ಅರ್ಜುನ್ ಜನ್ಯ ಅವರ ಸಂಗೀತ, ರಾಜೇಶ್ ಕಟ್ಟ ಅವರ ಛಾಯಾಗ್ರಹಣ, ರವಿ ವರ್ಮ ಅವರ ಸಾಹಸ, ಸರಿಗಮ ವಿಜಿ ಅವರ ನಿರ್ದೇಶನ ಸಹಾಯ, ಗೋವರ್ಧನ್ ರೆಡ್ಡಿ ಅವರ ಸಂಕಲನ ಇದೆ.

  English summary
  Why actress Vyshali Deepak has backed out of Chiranjeevi Sarja starrer Ayya 2 and Aishwarya Devan has replaced Vyshali in the film. Just after Vyshali walked out of the film, director Omprakash Rao has zeroed in on Aishwarya Devan. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X