ಬಾಲಿವುಡ್ ನಟ ಸಂಜಯ್ ದತ್ ಈಗ ಕನ್ನಡಕ್ಕೆ ಬರುತ್ತಾರಂತೆ. ಕನ್ನಡದ ಸ್ಟಾರ್ ನಟನ ಸಿನಿಮಾಗೆ ವಿಲನ್ ಆಗುತ್ತಾರಂತೆ. ಇನ್ನು ಸಂಜಯ್ ದತ್ ಅವರನ್ನು ಕನ್ನಡಕ್ಕೆ ಕರೆ ತರುತ್ತಿರುವವರು ಬೇರೆ ಯಾರು ಅಲ್ಲ ನಿರ್ದೇಶಕ ಓಂ ಪ್ರಕಾಶ್ ರಾವ್.
ನಿರ್ದೇಶಕ ಓಂ ಪ್ರಕಾಶ್ ರಾವ್ ಇತ್ತೀಚಿಗಷ್ಟೆ 50ನೇ ಸಿನಿಮಾವನ್ನು ಶಿವರಾಜ್ ಕುಮಾರ್ ಜೊತೆಗೆ ಮಾಡುವುದಾಗಿ ಹೇಳಿದ್ದರು. ಈಗ ಅವರು ಆ ಸಿನಿಮಾಗೆ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕರೆತರುವ ತಯಾರಿ ನಡೆಸಿದ್ದಾರೆ. ಜೊತೆಗೆ ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾಗೆ 'ತ್ರಿವಿಕ್ರಮ' ಎಂಬ ಮಾಸ್ ಹೆಸರನ್ನು ಇಡಲಾಗಿದೆ.
50ನೇ, 100ನೇ ಚಿತ್ರದ ನಿರ್ದೇಶಕರಿಗೆ ಶಿವಣ್ಣ ಸಾಥ್.!
ಅಂದಹಾಗೆ, ನಿರ್ದೇಶಕ ಓಂ ಪ್ರಕಾಶ್ ರಾವ್ ಇನ್ನೊಂದು ವಾರದಲ್ಲಿ ಸಂಜಯ್ ದತ್ ಅವರನ್ನು ಸಂಪರ್ಕ ಮಾಡಲಿದ್ದಾರಂತೆ. ಓಂ ಪ್ರಕಾಶ್ ರೀತಿಯೇ ಕೆಲವು ಕನ್ನಡದ ನಿರ್ದೇಶಕರು ಈ ಹಿಂದೆ ಸಂಜಯ್ ದತ್ ಅವರನ್ನು ಕನ್ನಡಕ್ಕೆ ಕರೆ ತರುವ ಪಯತ್ನ ಮಾಡಿದ್ದರು. ಸಂಜಯ್ ದತ್ ಜೊತೆಗೆ ಸುನೀಲ್ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ನಟಿಸಬೇಕು ಎಂಬುದು ಓಂ ಪ್ರಕಾಶ್ ರಾವ್ ಆಸೆ.
ಈ ಹಿಂದೆ ಶಿವರಾಜ್ ಕುಮಾರ್ ಅವರಿಗೆ ಓಂ ಪ್ರಕಾಶ್ ರಾವ್ 'AK47', 'ಸಿಂಹದ ಮರಿ' 'ಶಿವ' ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.