»   » ನಟಿ ಜಯಮಾಲಾ ಮಗಳು ಸೌಂದರ್ಯ ಬಗ್ಗೆ ಕೇಳಿ ಬಂದ ಹೊಸ ಗಾಸಿಪ್ ಇದು!

ನಟಿ ಜಯಮಾಲಾ ಮಗಳು ಸೌಂದರ್ಯ ಬಗ್ಗೆ ಕೇಳಿ ಬಂದ ಹೊಸ ಗಾಸಿಪ್ ಇದು!

Posted By:
Subscribe to Filmibeat Kannada
soundarya Jayamala new gossip in sandalwood

ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಜಯಮಾಲಾ ಈಗ ಎಲ್ಲಿದ್ದಾರೆ.? ಏನ್ ಮಾಡುತ್ತಾ ಇದ್ದಾರೆ.? ಯಾರಿಗೂ ಗೊತ್ತಿಲ್ಲ.! ಶುರುವಿನಲ್ಲಿ ಒಂದೆರಡು ಸಿನಿಮಾ ಮಾಡಿದ ಸೌಂದರ್ಯ ಜಯಮಾಲಾ ನಂತರ ತೆರೆಯಿಂದ ಮರೆ ಆದರು.

ತಾಯಿ ಜಯಮಾಲಾ ರೀತಿ ಸೌಂದರ್ಯ ಕೂಡ ದೊಡ್ಡ ನಟಿಯಾಗುತ್ತಾರೆ ಎಂಬ ಅಭಿಮಾನಿಗಳ ಕನಸು ಕನಸಾಗಿಯೇ ಉಳಿಯಿತು. ಗಾಂಧಿನಗರದಿಂದ ಸ್ವಲ್ಪ ದೂರವೇ ಉಳಿದಿರುವ ನಟಿ ಸೌಂದರ್ಯ ಜಯಮಾಲಾ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್ ವೊಂದು ಹರಿದಾಡಿದೆ.

ಮುಸ್ಸಂಜೆ ಮಹೇಶ್ ಗೊಂದು ಪ್ಲಾನ್ ಇದೆ

ಮುಸ್ಸಂಜೆ ಮಹೇಶ್ ಈಗ ಒಂದು ಹೊಸ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ನಾಲ್ಕು ನಟಿಯರಿದ್ದಾರಂತೆ. ವಿಶೇಷ ಅಂದರೆ ಹಳೆಯ ನಟಿಯರ ಪುತ್ರಿಯರನ್ನೇ ಚಿತ್ರಕ್ಕೆ ನಾಯಕಿಯರನ್ನಾಗಿ ಮಾಡುವ ಪ್ಲಾನ್ ನಿರ್ದೇಶಕರದ್ದಾಗಿದೆ.

ಮಾತುಕತೆ ಆಗಬೇಕು

ಮುಸ್ಸಂಜೆ ಮಹೇಶ್ ರವರ ಚಿತ್ರದಲ್ಲಿ ನಟಿಸುವ ನಾಲ್ಕು ನಾಯಕಿಯರ ಪೈಕಿ ಮೇಘನಾ ರಾಜ್ ಕೂಡ ಒಬ್ಬರು. ಇನ್ನು ಇನ್ನೊಬ್ಬ ನಾಯಕಿಯಾಗಿ ಮುಸ್ಸಂಜೆ ಮಹೇಶ್ ಲಿಸ್ಟ್ ನಲ್ಲಿ ಸೌಂದರ್ಯ ಜಯಮಾಲಾ ಕೂಡ ಇದ್ದಾರಂತೆ. ಜೊತೆಗೆ ಅವರ ಜೊತೆ ಮಾತುಕತೆ ನಡೆಸಲು ನಿರ್ದೇಶಕ ಮುಸ್ಸಂಜೆ ಮಹೇಶ್ ಮನಸ್ಸು ಮಾಡಿದ್ದಾರೆ.

ಒಪ್ಪಿಕೊಳ್ತಾರಾ ಸೌಂದರ್ಯ ಜಯಮಾಲಾ.?

ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸೌಂದರ್ಯ ಜಯಮಾಲಾ ಒಪ್ಪಿಕೊಳ್ತಾರಾ.? ಇಷ್ಟು ದಿನ ಚಿತ್ರರಂಗದಿಂದ ದೂರ ಉಳಿದಿರುವ ಈ ಚೆಲುವೆ ಈಗ ಗ್ರೀನ್ ಸಿಗ್ನಲ್ ಕೊಟ್ಟರೆ, ಅಭಿಮಾನಿಗಳಿಗೆ ಖುಷಿ.

ಸೆಕೆಂಡ್ ಇನ್ನಿಂಗ್ಸ್ ಶುರು?

ಅಂದಹಾಗೆ, ಸೌಂದರ್ಯ ಜಯಮಾಲಾ ಕೊನೆಯದಾಗಿ ದುನಿಯಾ ವಿಜಯ್ ಜೊತೆ 'ಸಿಂಹಾದ್ರಿ' ಚಿತ್ರದಲ್ಲಿ ನಟಿಸಿದ್ದರು. ಈಗ ಮುಸ್ಸಂಜೆ ಮಹೇಶ್ ಚಿತ್ರದಲ್ಲಿ ಮತ್ತೆ ನಟಿಸಿದರೆ ಅವರ ಸೆಕೆಂಡ್ ಇನ್ನಿಂಗ್ಸ್ ಶುರುವಾಗುತ್ತದೆ.

English summary
Will Soundarya Jayamala act in a movie directed by Mussanje Mahesh?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada