»   »  ಶಿವರಾಜ್ ಮಗನಿಗಾಗಿ ನಿರಂತರ ಹುಡುಕಾಟ

ಶಿವರಾಜ್ ಮಗನಿಗಾಗಿ ನಿರಂತರ ಹುಡುಕಾಟ

Posted By:
Subscribe to Filmibeat Kannada
The pursuit of Sandalwood s Jaden Smith
ಇಲ್ಲಿಯವರೆಗೂ ಅಕ್ಕ ಪಕ್ಕದ ಚಿತ್ರರಂಗದ ಮಸಾಲೆ ಚಿತ್ರಗಳ ಕಥೆ ಕದ್ದು, ಅವರಿವರಿಗೆ ಅಡ್ಡ ಬಿದ್ದು ರಿಮೇಕ್ ಹಕ್ಕು ಪಡೆದು ಹಳಸಿದ ಚಿತ್ರಾನ್ನಕ್ಕೆ ಹೊಸದಾಗಿ ಒಗ್ಗರಣೆ ಹಾಕಿ ಕನ್ನಡ ಸಿನಿಮಾ ಪ್ರೇಕ್ಷಕ ಮಹಾಪ್ರಭುಗಳನ್ನು ಖುಷಿ ಪಡಿಸುತ್ತಿದ್ದ ನಿರ್ಮಾಪಕ,ನಿರ್ದೇಶಕರು ಈಗ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದ್ದಾರೆ.

*ಮಹೇಶ್ ಮಲ್ನಾಡ್

ಹಾಲಿವುಡ್ ನತ್ತ ಮುಖ ಮಾಡಿರುವ ಖ್ಯಾತ ವಾಣಿಜ್ಯ ಚಿತ್ರನಿರ್ದೇಶಕ ರವಿ ಶ್ರೀವತ್ಸ ಅವರು, ಹೊಡಿ ಬಡಿ ಚಿತ್ರಗಳಿಂದ ಶಿವರಾಜ್ ಕುಮಾರ್ ಅವರಿಗೆ ಮುಕ್ತಿ ನೀಡುವ ಹರಕೆ ಹೊತ್ತಿದ್ದಾರೆ. ವಿಲ್ ಸ್ಮಿತ್ ಹಾಗೂ ಅವರ ಮಗ ಜೇಡನ್ ಸ್ಮಿತ್ ನಟಿಸಿದ್ದ 'ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್'(The Pursuit of Happyness) ಎಂಬ ಅಪ್ಪಟ ಸತ್ಯ ಕಥೆಯನ್ನು ಕನ್ನಡಕ್ಕೆ ತರುತ್ತಿರುವುದಾಗಿ ರವಿ ಶ್ರೀವತ್ಸ ಹೇಳಿ ಅದಕ್ಕೆ 'ಮುತ್ತು ನಮ್ಮಪ್ಪ' ಎಂಬ ಹೆಸರು ಎಂದು ಪ್ರಚಾರ ನೀಡಿದ್ದಾಯಿತು. ಸದ್ಯ ಜೇಡನ್ ಸ್ಮಿತ್ ಮಾಡಿದ ಪಾತ್ರಕ್ಕೆ ಕನ್ನಡದಲ್ಲಿ ಜೀವ ತುಂಬಬಲ್ಲ ಬಾಲಕನ ಹುಡುಕಾಟದ ಹೊಣೆಯನ್ನು ನಿರ್ಮಾಪಕರಿಗೆ ವಹಿಸಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್, ಕೋಟೆ ಪ್ರಭಾಕರ, ಮಂಜು ಸೇರಿದಂತೆ ಉಳಿದವರು ಸುಮಾರು 2ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ನೋಡಿ, ಹುಡುಗರನ್ನು ಪರೀಕ್ಷಿಸಿ, ಕೊನೆಗೆ 6 ಜನರನ್ನು ಆಯ್ಕೆ ಮಾಡಿದ್ದಾರೆ. ಇವರಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತಾಡಬಲ್ಲ, ಒಳ್ಳೆ ಹಾವಭಾವಉಳ್ಳ ಹುಡುಗನಿಗೆ ಶಿವರಾಜ್ ಮಗನಾಗಿ ನಟಿಸುವ ಯೋಗ ಒದಗಲಿದೆ. ಆಸಕ್ತ ಪೋಷಕರು ಸೌಂದರ್ಯ ಜಗದೀಶ್ ಅವರನ್ನು ಕಾಣಬಹುದು.

ಚಿತ್ರವನ್ನು ಹಾಂಕಾಂಗ್ ಹಾಗೂ ಭಾರತದಲ್ಲಿ ಚಿತ್ರೀಕರಿಸಲಾಗುವುದು, ಅಮಿತಾಬ್ ಚಿತ್ರಕ್ಕೆ ಚಿತ್ರಕಥೆ ಬರೆದ ಅನುಭವವುಳ್ಳ ಕೆವಿ ರಾಜು ನಮ್ಮ ಚಿತ್ರಕ್ಕೆ ಚಿತ್ರಕಥೆ ರಚಿಸಲಿದ್ದಾರೆ. ಸೆಪ್ಟೆಂಬರ್ ವೇಳೆಗೆ ಶೂಟಿಂಗ್ ಶುರು ಮಾಡುತ್ತೇವೆ ಎನ್ನುತ್ತಾರೆ ಕೆಕೆ ಫಿಲ್ಮಂಸ್ ನನಿರ್ಮಾಪಕರಲ್ಲಿ ಒಬ್ಬರಾದ ಶ್ರೀನಾಥ್.

ಮೂಲ ಚಿತ್ರದ ಬಗ್ಗೆ ಒಂದಿಷ್ಟು
ಗೆಬ್ರಿಲೆ ಮುಚಿನೊ (Gabriele Muccino) ನಿರ್ದೇಶನ ಮಾಡಿದ 2006 ರಲ್ಲಿ ತೆರೆಕಂಡ 'ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್'(The Pursuit of Happyness) ಚಿತ್ರ ವಿಲ್ ಸ್ಮಿತ್ ಅವರ ಅತ್ಯಂತ ಯಶಸ್ವಿ ಹಾಗೂ ತೃಪ್ತಿದಾಯಕ ಚಿತ್ರ. ಅಮೆರಿಕದ ಶ್ರೀಮಂತ ಕ್ರಿಸ್ಟೋಫರ್ ಪೌಲ್ ಗಾರ್ಡ್ನರ್ ಅವರ ಜೀವನ ಕಥೆಯನ್ನು ಚಿತ್ರ ಆಧರಿಸಿದೆ. ಸಣ್ಣ ಸ್ಟಾಕ್ ಎಕ್ಸೆಂಜ್ ಬ್ರೋಕರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಗಾರ್ಡ್ನರ್, ಮನೆ ಕಳೆದು ಕೊಂಡು, ತನ್ನ ಕಷ್ಟಪಟ್ಟು ಮಗನನ್ನು ಬೆಳಸಿ, ಕೊನೆಗೆ ಸ್ಟಾಕ್ ಎಕ್ಸೆಂಜ್ ಕಂಪೆನಿ(Garden Rich & Co) ತೆರೆದು ಶ್ರೀಮಂತನಾದ ಕಥೆ ಹೊಂದಿದೆ. ಇದರಲ್ಲಿ ನಿರ್ಗತಿಕರ ಬವಣೆ, ತಂದೆ ಮಗನ ಬಾಂಧವ್ಯ, ಕಠಿಣ ಪರಿಶ್ರಮಕ್ಕೆ ಸಿಗುವ ಫಲ , ಯಶಸ್ಸಿನ ಸೂತ್ರ ಮುಂತಾದ ವಿಷಯಗಳನ್ನು ಅದ್ಭುತವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಚಿತ್ರದ ಗಾರ್ಡ್ನರ್ ಪಾತ್ರಧಾರಿ ವಿಲ್ ಸ್ಮಿತ್ ,ಅಕಾಡೆಮಿ ಪ್ರಶಸ್ತಿ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು.

ಇಟಲಿ ಮೂಲದವರಾದ ನಿರ್ದೇಶಕ ಗೆಬ್ರಿಲೆ ಮುಚಿನೊ ,ಖ್ಯಾತ ತಾರೆ ಮೊನಿಕಾ ಬೆಲುಚ್ಚಿ ಅಭಿನಯದ L'ultimo bacio (One Last Kiss) and Remember Me, My Love (Ricordati di me) ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ನಂತರ ಹಾಲಿವುಡ್ ಗೆ ಹಾರಿ, ಉತ್ತಮ ಚಿತ್ರಗಳನ್ನು ನೀಡಿದರು. 2008ರಲ್ಲಿ ವಿಲ್ ಸ್ಮಿತ್ ಅಭಿನಯದ ಸೆವೆನ್ ಪೌಂಡ್ಸ್ (Seven Pounds) ಎಂಬ ಉತ್ತಮ ಚಿತ್ರ ನೀಡಿದರು. ಈ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಬಹು ಮೆಚ್ಚುಗೆ ಗಳಿಸಿತು.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more