For Quick Alerts
  ALLOW NOTIFICATIONS  
  For Daily Alerts

  ಕುಡಿದು ಕುಡಿದೇ ಹಾಳಾದೆ: ಹಿರಿಯ ನಟನ ಪ್ರಲಾಪ

  By Srinath
  |

  ಧರ್ಮೇಂದ್ರ - ಒಂದು ಕಾಲದಲ್ಲಿ ಹೆಂಗೆಳೆಯರ ಪಾಲಿನ ಆರಾಧ್ಯದೈವ. ಕೊನೆಗೆ ಹೇಮಮಾಲಿನಿ ಎಂಬ ಅಪ್ಪಟ ಅಭಿನೇತ್ರಿಯ ಪತಿರಾಯನಾಗಿ ಜೀವನದಲ್ಲಿ ಸೆಟಲ್ ಆದವ. ಆದರೆ ಈ ಮಧ್ಯೆ ಹತ್ತಿಸಿಕೊಂಡ ಕುಡಿಯುವ ಚಟ ತನ್ನ ವೃತ್ತಿಜೀವನವನ್ನೇ ಹಾಳುಮಾಡಿಬಿಟ್ಟಿತು ಎಂದು ಅಪ್ಪಟ ಕುಡುಕನಂತೆ ಧರ್ಮೇಂದ್ರ ಗೋಳಾಡಿದ್ದಾರೆ.

  ಧರ್ಮೇಂದ್ರ ತಮ್ಮ 77ನೇ ವಯಸ್ಸಿನಲ್ಲಿ ತಮ್ಮಿಬ್ಬರು ಪುತ್ರರಾದ ಬಾಬ್ಬಿ ಮತ್ತು ಸನ್ನಿ ಡಿಯೋಲ್ ಜತೆ ನಟಿಸಿರುವ Yamla Pagla Deewana 2 ಸಿನಿಮಾ ಸದ್ಯದಲ್ಲೇ ಬಿಡುಗೆಯಾಗಲಿದೆ. ಚಿತ್ರ ನಿರ್ಮಾಣವನ್ನು ತಾವೀಗ ಗಂಭಿರವಾಗಿ ಪರಿಗಣಿಸಿದ್ದು, ವೃತ್ತಿ ಜೀವನದಲ್ಲಿ ಮತ್ತೆ ಯಶಸ್ಸಿನ ಹಾದಿಯಲ್ಲಿ ದಾಪುಗಾಲು ಹಾಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಈ ಹಿಂದೆ ಖಂಡಿತ ಕುಡಿತದ ಚಟವೇ ತಮ್ಮನ್ನು ಹಾಳುಮಾಡಿದ್ದು ಎಂಬುದನ್ನು ಒಪ್ಪಿಕೊಂಡಿರುವ ಹಿರಿಯ ಯಶಸ್ವೀ ನಟ ಧರ್ಮೇಂದ್ರ ಚಿತ್ರರಂಗದಲ್ಲಿ ಮತ್ತೆ ಯಶಸ್ಸು ಕಲಾಣುವ ದೃಢಸಂಕಲ್ಪ ತೊಟ್ಟಿದ್ದಾರೆ.

  ಇತ್ತೀಚೆಗೆ ಮದ್ಯದ ಬಾಟಲ್ ಎತ್ತುವುದಿಲ್ಲ. ಗ್ಲಾಸ್ ಮುಟ್ಟೋದೇ ಇಲ್ಲ. ನಿಜಕ್ಕೂ ಕುಡಿತದಿಂದಲೇ ನನ್ನ ವೃತ್ತಿಜೀವನ ಹಾಳುಮಾಡಿಕೊಂಡೆ. ಮಾನವತೆಯಲ್ಲಿ ನಾನೀಗ ನಂಬಿಕೆಯನ್ನಿಟ್ಟಿದ್ದೇನೆ. ನಾವು ಅಪ್ಪ-ಮಕ್ಕಳು ತ್ರಿಮೂರ್ತಿಗಳು ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಅತ್ಯಂತ ಶ್ರದ್ಧೆಯಿಂದ ಚಿತ್ರ ನಿರ್ಮಿಸಿದ್ದೇವೆ ಎಂದು ಧರ್ಮೇಂದ್ರ ಹೇಳಿದ್ದಾರೆ.

  ಅಂದಹಾಗೆ 2011ರಲ್ಲಿ ಆರೋಗ್ಯ ವಿಪರೀತ ಹದಗೆಟ್ಟಾಗ ಧರ್ಮೇಂದ್ರ ಅನಿವಾರ್ಯವಾಗಿ ಕೈಯಲ್ಲಿದ್ದ ಗ್ಲಾಸನ್ನು ಕೆಳಗಿಳಿಸಿದ್ದರು.

  English summary
  Drinking habit destroyed my cinema life Bollywood vetern actor Dharmendra- Action king Dharmendra admits his drinking habit in the past destroyed him as an actor but he is coming to terms with his films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X