»   » ಭಾರತದ ಆಶ್ರಮದಲ್ಲಿ ಹಾಲಿವುಡ್ ಜೋಡಿ ಸಪ್ತಪದಿ

ಭಾರತದ ಆಶ್ರಮದಲ್ಲಿ ಹಾಲಿವುಡ್ ಜೋಡಿ ಸಪ್ತಪದಿ

Posted By:
Subscribe to Filmibeat Kannada

ಇದೊಂದು ರೀತಿ ವಿಭಿನ್ನ ಮದುವೆ ಸಂಭ್ರಮ. ಭಾರತದ ಆಶ್ರಮವೊಂದರಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಹಾಲಿವುಡ್ ಜೋಡಿ ಗೃಹಸ್ಥಾಶ್ರಮ ಸೇರಲು ನಿರ್ಧರಿಸಿದೆ. ಕ್ಯಾಲಿಫೋರ್ನಿಯಾದ ಗಾಯಕಿ ಕಾಟಿ ಫೆರ್ರಿ ಮತ್ತು ಬ್ರಿಟನ್ ಹಾಸ್ಯನಟ ರಸ್ಸೆಲ್ ಬ್ರ್ಯಾಂಡ್ ಸಪ್ತಪದಿ ತುಳಿಯಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು, ಕೈ ತುಂಬ ಬಳೆ ತೊಟ್ಟು , ಅಂಗೈಗೆ ಗೋರಂಟಿ ಹಚ್ಚಿ ಮದುವೆಗೆ ವಧು ಕಾಟಿ ಸಿಂಗಾರವಾಗಲಿದ್ದಾರೆ. ವರ ತಾನೇನು ಕಮ್ಮಿ ಎಂಬಂತೆ ಥೇಟ್ ಭಾರತೀಯ ಉಡುಗೆ ತೊಡುಗೆಗಳಲ್ಲಿ ಮಿಂಚಲಿದ್ದಾರೆ. ಇವರಿಬ್ಬರ ಮದುವೆ ಆಶ್ರಮವೊಂದರಲ್ಲಿ ನೆರವೇರಲಿದೆ ಎನ್ನುತ್ತವೆ ಮೂಲಗಳು.

ಇವರಿಬ್ಬರೂ ಈಗಾಗಲೆ ಜೈಪುರದ ತಾಜ್ ರಾಮ್‍ಬಾಗ್ ಅರಮನೆಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ. ಇನ್ನೇನು ಸಪ್ತಪದಿ ತುಳಿಯುವುದು ಬಾಕಿ ಇದೆ. ಹಾಲಿವುಡ್ ಶೈಲಿಯಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆ ಸಂಭ್ರಮ ಒಟ್ಟು ಏಳು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆಯಂತೆ.

ಅಕ್ಟೋಬರ್ ಅಂತ್ಯದಲ್ಲಿ ಇವರಿಬ್ಬರ ಮದುವೆ ದೆಹಲಿಯಲ್ಲಿ ನಡೆಯಲಿದೆ. ಯಾವ ಆಶ್ರಮದಲ್ಲಿ ಎಲ್ಲಿನಡೆಯಲಿದೆ ಎಂಬುದನ್ನು ಗೌಪ್ಯವಾಗಿ ಇಡಲಾಗಿದೆ. ಒಟ್ಟು ಏಳು ದಿನಗಳ ಕಾಲ ನಡೆಯಲಿರುವ ಮದುವೆ ಸಂಭ್ರಮದಲ್ಲಿ 75ರಿಂದ 100 ಮಂದಿ ಭಾಗವಹಿಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada