»   » ಎರಡನೆ ಮದುವೆ ಬಳಿಕ ಮತ್ತೊಂದ್ ಮದುವೆಗೆ ಬ್ರಿಟ್ನಿ ಸಿದ್ಧ

ಎರಡನೆ ಮದುವೆ ಬಳಿಕ ಮತ್ತೊಂದ್ ಮದುವೆಗೆ ಬ್ರಿಟ್ನಿ ಸಿದ್ಧ

Posted By:
Subscribe to Filmibeat Kannada

ಖ್ಯಾತ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಎರಡನೆ ಮದುವೆ ಬಳಿಕ ಈಗ ಮತ್ತೊಂದ್ ಮದುವೆಗೆ ಸಿದ್ಧರಾಗಿದ್ದಾರೆ. ತನ್ನ ಬಹು ಕಾಲದ ಗೆಳೆಯ ಜಾಸನ್ ಟ್ರಾವಿಕ್ (39) ಕೈಹಿಡಿಯುವುದಾಗಿ ಬ್ರಿಟ್ನಿ ಸೂಚನೆ ಕೊಟ್ಟಿದ್ದಾರೆ. "ನಾವಿಬ್ಬರೂ ಒಬ್ಬರನ್ನೊಬ್ಬರು ತುಂಬ ಹಚ್ಚಿಕೊಂಡಿದ್ದೇವೆ. ನನ್ನನ್ನು ನಕ್ಕಿ ನಗಿಸುತ್ತಾನೆ. ಇಷ್ಟೊಂದು ಸಂತೋಷವಾಗಿ ನಾನು ಈ ಹಿಂದೆಂದೂ ಇರಲಿಲ್ಲ" ಎಂದು ತನ್ನ ಪ್ರಿಯತಮನ ಬಗ್ಗೆ ಬ್ರಿಟ್ನಿ ಮನಬಿಚ್ಚಿ ಹೇಳಿಕೊಂಡಿದ್ದಾರೆ.

ಅದೆಲ್ಲಾ ಸರಿ ನಿಮ್ಮ ಮತ್ತೊಂದು ಮದುವೆ ಯಾವಾಗ ಎಂದು ಕೇಳಲಾಗಿ, "ಆಗಬಹುದು, ಆದರೆ ಇಲ್ಲ ಎಂದು ಮಾತ್ರ ಹೇಳಲ್ಲ" ಎಂದು ಯುಎಸ್ ನಿಯತಕಾಲಿಕೆಗೆ ಚಲ್ಲು ಚಲ್ಲಾಗಿ ಉತ್ತರಿಸಿದ್ದಾರೆ ಬ್ರಿಟ್ನಿ. ತನ್ನ ಮಾಜಿ ಪತಿ ಫೆಡರ್ಲಿನ್ ಸುಪರ್ದಿಗೆ ತನ್ನ ಮಕ್ಕಳಾದ ಸಿಯಾನ್ ಹಾಗೂ ಜೇಡನ್ ಒಪ್ಪಿಸಿದ ಬಳಿಕ ಬ್ರಿಟ್ನಿ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದರು.

ಈಗ ಹೊಸ ಬಾಯ್ ಫ್ರೆಂಡ್ ಟ್ರಾವಿಕ್ ಸಿಕ್ಕ ಬಳಿಕ ಮತ್ತೆ ಆಕೆಯ ಜೀವನದಲ್ಲಿ ಆನಂದ ತುಂಬಿ ತುಳುಕುತ್ತಿದೆ ಎಂದು ಬ್ರಿಟ್ನಿ ಕುಟುಂಬ ಮೂಲಗಳು ಮತ್ತೊಂದು ಮದುವೆಯನ್ನು ಪರೋಕ್ಷವಾಗಿ ಬೆಂಬಲಿಸಿವೆ. ಫೆಡರ್ಲಿನ್ ಅವರನ್ನು ವರಿಸುವುದಕ್ಕೂ ಮುನ್ನ ತನ್ನ ಬಾಲ್ಯದ ಗೆಳೆಯ ಜಾಸನ್ ಅಲೆನ್ ಅಲೆಕ್ಸಾಂಡರ್ ಅವರನ್ನು ಬ್ರಿಟ್ನಿ ಮದುವೆಯಾಗಿದ್ದರು.

English summary
Pop Singer Britney Spears seems to be planning to walk down the aisle for the third time.Spears, who has been dating Hollywood agent Jason Trawick, 39, for over two years has hinted at soon tying the knot with him.Asked about her marriage plans, she said: "Maybe. Never say never!"

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada