»   » ಬ್ರಾಡ್ ಪಿಟ್ ನೊಂದಿಗೆ ಚುಂಬನ ನಿರಾಕರಿಸಿದ ಐಶ್

ಬ್ರಾಡ್ ಪಿಟ್ ನೊಂದಿಗೆ ಚುಂಬನ ನಿರಾಕರಿಸಿದ ಐಶ್

Posted By:
Subscribe to Filmibeat Kannada

ಬಾಲಿವುಡ್ ನಟಿ ಐಶ್ವರ್ಯ ರೈಗೆ ಹಾಲಿವುಡ್ ಅವಕಾಶದ ಬಾಗಿಲನ್ನೇ ತೆರೆದಿದೆ. ಆದರೆ ಆಕೆ ಹಾಲಿವುಡ್ ನಿಂದ ಬರುತ್ತಿರುವ ಎಲ್ಲ ಚಿತ್ರಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗೆ ಇತ್ತೀಚೆಗೆ ಹಾಲಿವುಡ್ 'ಟ್ರಾಯ್' ಚಿತ್ರದಲ್ಲಿ ಅವಕಾಶ ನಟಿಸುವ ಅವಕಾಶ ಹುಡುಕಿಕೊಂಡು ಬಂದಿತ್ತು. ಆದರೆ ಈ ಚಿತ್ರದಲ್ಲಿ ನಟಿಸಲು ಐಶ್ ನಿರಾಕರಿಸಿದ್ದಾರೆ.

ಇದಕ್ಕೆ ಕಾರಣ ಚಿತ್ರದಲ್ಲಿ ಕೆಲವೊಂದು ಅಸಭ್ಯ ದೃಶ್ಯಗಳಿವೆಯಂತೆ. ಹಾಲಿವುಡ್ ತಾರೆ ಬ್ರಾಡ್ ಪಿಟ್ ನೊಂದಿಗೆ ಚುಂಬನ ದೃಶ್ಯಗಳು ಇವೆ ಎಂಬ ಕಾರಣಕ್ಕೆ ಐಶ್ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಐಶ್ವರ್ಯ ರೈ, 'ಟ್ರಾಯ್' ಚಿತ್ರಕತೆಯನ್ನು ಗಮನಿಸಿದಾಗ ಅದರಲ್ಲಿ ಕೆಲವೊಂದು ಅಸಭ್ಯಕರವಾದ ದೃಶ್ಯಗಳಿರುವುದು ತಿಳಿಯಿತು ಎಂದಿದ್ದಾರೆ.

"ಚಿತ್ರದಲ್ಲಿ ಬಹಳಷ್ಟು ಚುಂಬನ ದೃಶ್ಯಗಳೂ ಇವೆ. ಅಯ್ಯೋ ಭಗವಂತ, ಅಷ್ಟೋಂದು ಚುಂಬನ ದೃಶ್ಯಗಳಲ್ಲಿ ನಟಿಸಲು ನನಗೆ ಸಾಧ್ಯವಿಲ್ಲ" ಎಂದು ಖಂಡತುಂಡವಾಗಿ ಹೇಳಿದ್ದಾರೆ. ಈ ಹಿಂದೆ 'ಹಾನ್ ಕಾಕ್' ಹಾಗೂ 'ಸೆವೆನ್ ಫೌಂಡ್ಸ್' ಎಂಬ ಚಿತ್ರಗಳಲ್ಲೂ ಅವಕಾಶ ಬಂದಿತ್ತು. ಆಗಲೂ ಐಶ್ ಚಿತ್ರಗಳನ್ನು ಸರಾಸಗಟಾಗಿ ನಿರಾಕರಿಸಿದ್ದರು.

ಚಿತ್ರಕತೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದಾಗಿ ಚಿತ್ರದ ನಿರ್ದೇಶಕ ಬ್ರೆಟ್ ರಾಟ್ನರ್ ಭರವಸೆ ನೀಡಿದ್ದಾರೆ. ಆದರೆ ಐಶ್ವರ್ಯ ರೈ ಮಾತ್ರ ಸುತಾರಾಂ ಒಪ್ಪುವ ಸ್ಥಿತಿಯಲ್ಲಿಲ್ಲ. ಚಿತ್ರದ ನಿರ್ದೇಶಕರು ಮಾತ್ರ ಐಶ್ವರ್ಯ ರೈ ಅವರನ್ನು ಹೇಗಾದರೂ ಮಾಡಿ ಒಪ್ಪಿಸುವ ಪಣ ತೊಟ್ಟಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada