»   »  ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್

ಅತ್ಯುತ್ತಮ ಚಿತ್ರ ಸೇರಿದಂತೆ ಸ್ಲಂಡಾಗ್ ಗೆ 8 ಆಸ್ಕರ್

Posted By: Staff
Subscribe to Filmibeat Kannada
Oscar gold for Slumdog Millionaire
ಲಾಸ್ ಏಂಜಲ್ಸ್, ಫೆ.23: ಕಡೆಗೂ ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಆಸ್ಕರ್ ಕಣದಲ್ಲಿ ಸ್ಪರ್ಧಿಸುವುದೇ ದುಸ್ತರವಾಗಿದ್ದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂದು ಹಬ್ಬದ ವಾತಾವರಣ ನೆಲಸಿದೆ. ಭಾರತೀಯರ ನಿರೀಕ್ಷೆ ಫಲಿಸಿದೆ. ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಎಂಟು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿಗಳ ಸುರಿಮಳೆ ಇನ್ನೂ ಮುಂದುವರೆದಿದೆ.

ನಿರ್ದೇಶಕ ಡೇನಿ ಬಾಯ್ಲ್ ಅವರ ಮುಂಬೈ ಕೊಳೆಗೇರಿ ಮಕ್ಕಳ ಸಾಹಸಗಾಥೆ ಆಧಾರಿತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರ ಒಟ್ಟು 8ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಬೆಸ್ಟ್ ಆಡಾಪ್ಟೆಡ್ ಸ್ಕ್ರೀನ್ ಪ್ಲೇ; ಸಿಮನ್ ಬಿಫಾಯ್, ಅತ್ಯುತ್ತಮ ಛಾಯಾಗ್ರಹಣ; ಆಂಟನಿ ಡ್ಯಾಡ್ ಮ್ಯಾಂಟಲ್ ಗೆ ಆಸ್ಕರ್ ಪ್ರಶಸ್ತಿ ಸಂದಿದೆ.

ಹಾಗೆಯೇ ಅತ್ಯುತ್ತಮ ಚಿತ್ರ; ಸ್ಲಂಡಾಗ್ ಮಿಲಿಯನೇರ್, ಅತ್ಯುತ್ತಮ ಧ್ವನಿ ಮುದ್ರಣ; ರಸೆಲ್ ಪುಕುಟಿ, ಅತ್ಯುತ್ತಮ ದೃಶ್ಯ ಸಂಕಲನ; ಕ್ರಿಸ್ ಡಿಕೆನ್ಸ್, ಅತ್ಯುತ್ತಮ ನಿರ್ದೇಶನ; ಡ್ಯಾನಿ ಬಾಯ್ಲ್ ಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. 81ನೇ ಆಸ್ಕರ್ ಪ್ರಶಸ್ತಿಗಳು ಪ್ರಕಟವಾಗುತ್ತಿದ್ದಂತೆ ಲಾಸ್ ಏಂಜಲ್ಸ್ ನಲ್ಲಿದ್ದ 'ಸ್ಲಂಡಾಗ್' ಚಿತ್ರತಂಡವಷ್ಟೇ ಅಲ್ಲ ನೂರು ಕೋಟಿ ಭಾರತೀಯರು ಹುಚ್ಚೆದ್ದು ಕುಣಿಯುವಂತಾಗಿದೆ.

(ಏಜೆನ್ಸೀಸ್)
ಗ್ಯಾಲರಿ: |ಸ್ಲಂಡಾಗ್ ಮಿಲಿಯನೇರ್ ಚಿತ್ರದ ದೃಶ್ಯಗಳು || ಮಂಗಳೂರು ಬೆಡಗಿ ಫ್ರೀಡಾ ಪಿಂಟೋ

ಸ್ಲಂಡಾಗ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳ ಸುರಿಮಳೆ
ಪೂಕುಟ್ಟಿ ಪಡೆದ ಆಸ್ಕರ್ ದೇಶಕ್ಕೆ ಅರ್ಪಣೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada