»   »  ಸ್ಲಂಡಾಗ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳ ಸುರಿಮಳೆ

ಸ್ಲಂಡಾಗ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗಳ ಸುರಿಮಳೆ

Posted By: Staff
Subscribe to Filmibeat Kannada
resul pookutty
ಲಾಸ್ ಏಂಜಲ್ಸ್, ಫೆ.23: ಕೋಡಾಕ್ ಥಿಯೇಟರ್ ನಲ್ಲಿ 81ನೇ ವರ್ಣರಂಜಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ವೈಭವೋಪೇತವಾಗಿ ಆರಂಭವಾಯಿತು. ಇಡೀ ವಿಶ್ವವವೇ ಬೆರಗುಗಣ್ಣಿನಿಂದ ಎದುರು ನೋಡುತ್ತಿರುವ 'ಸ್ಲಂಡಾಗ್ ಮಿಲಿಯನೇರ್' ಚಿತ್ರ ಒಟ್ಟು ಏಳು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಒಟ್ಟು ಒಂಬತ್ತು ವಿಭಾಗಗಳಲ್ಲಿ 10 ನಾಮನಿರ್ದೇಶನದೊಂದಿಗೆ ಸ್ಲಂಡಾಗ್ ಮುಂದಿದೆ.

ಅತ್ಯುತ್ತಮ ನಿರ್ದೇಶನ: ಡ್ಯಾನಿ ಬಾಯ್ಲ್, ಅತ್ಯುತ್ತಮ ಗೀತೆ ಎ.ಆರ್.ರೆಹಮಾನ್, ಗುಲ್ಜರ್, ಅತ್ಯುತ್ತಮ ಸಂಗೀತ ನಿರ್ದೇಶನಕ್ಕೆ ಎ.ಆರ್.ರೆಹಮಾನ್, ಅತ್ಯುತ್ತ್ತಮ ಚಿತ್ರಕಥೆ ಸಿಮನ್ ಬಿಫಾಯ್, ಅತ್ಯುತ್ತಮ ಛಾಯಾಗ್ರಹಣ ಆಂಟನಿ ಡ್ಯಾಡ್ ಮ್ಯಾಂಟಲ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಸ್ಲಂಡಾಗ್ ಚಿತ್ರ ಈ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ.
1. ಅತ್ಯುತ್ತಮ ಚಿತ್ರ: ಸ್ಲಂಡಾಗ್ ಮಿಲಿಯನೇರ್
2.ಅತ್ಯುತ್ತಮ ನಿರ್ದೇಶನ: ಡ್ಯಾನಿ ಬಾಯ್ಲ್
3.ಅತ್ಯುತ್ತಮ ಚಿತ್ರಕತೆ: ಸಿಮನ್ ಬಿಫಾಯ್
4.ಅತ್ಯುತ್ತಮ ಹಿನ್ನೆಲೆ ಸಂಗೀತ: ಎ.ಆರ್.ರೆಹಮಾನ್
5.ಅತ್ಯುತ್ತಮ ಗೀತೆ: ರೆಹಮಾನ್, ಗುಲ್ಜರ್
6.ಅತ್ಯುತ್ತಮ ಗೀತೆ: ರೆಹಮಾನ್
7.ಅತ್ಯುತ್ತಮ ಛಾಯಾಗ್ರಹಣ: ಆಂಟನಿ ಡ್ಯಾಡ್ ಮ್ಯಾಂಟಲ್
8.ಅತ್ಯುತ್ತಮ ದೃಶ್ಯ ಸಂಕಲನ: ಕ್ರಿಸ್ ಡಿಕೆನ್ಸ್
9.ಅತ್ಯುತ್ತಮ ಧ್ವನಿ ಸಂಕಲನ: ಟಾಂ ಸೇಯರ್ಸ್
10: ಅತ್ಯುತ್ತಮ ಧ್ವನಿ ಮುದ್ರಣ: ಇಯಾನ್ ಟ್ಯಾಪ್, ರಿಚರ್ಡ್, ರಸೆಲ್ ಪೂಕುಟ್ಟಿ

(ಏಜೆನ್ಸೀಸ್)

English summary
'Slumdog Millionaire' has won two awards including Best Adapted Screenplay,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada