Don't Miss!
- Sports
ಶುಭ್ಮನ್ ಗಿಲ್ಗಿದೆ ಶಿಖರ್ ಧವನ್ರ ಈ 3 ದಾಖಲೆ ಮುರಿಯುವ ಅವಕಾಶ
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊದಲ 'ಅವತಾರ್'ಗೂ 'ಅವತಾರ್ 2'ಗೂ ಇರುವ ವ್ಯತ್ಯಾಸಗಳೇನು?
ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳಲ್ಲೊಂದಾದ 'ಅವತಾರ್' ಸಿನಿಮಾದ ಮುಂದಿನ ಭಾಗ ಇಂದು ಬಿಡುಗಡೆ ಆಗಿದೆ.
'ಟೈಟಾನಿಕ್' ಸೇರಿದಂತೆ ಹಲವು ಅತ್ಯದ್ಭುತ ಸಿನಿಮಾಗಳ ಸೃಷ್ಟಿಕರ್ತ ಜೇಮ್ಸ್ ಕ್ಯಾಮರೂನ್ 'ಅವತಾರ್ 2' ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಮೊದಲ ಸಿನಿಮಾ ಬಿಡುಗಡೆ ಆಗಿ ಒಂಬತ್ತು ವರ್ಷಗಳ ಬಳಿಕ 'ಅವತಾರ್ 2' ಸಿನಿಮಾ ಬಂದಿದೆ. ಹೊಸ ಸಿನಿಮಾಕ್ಕೆ 'ಅವತಾರ್; ದಿ ವೇ ಆಫ್ ವಾಟರ್' ಎಂದು ಹೆಸರಿಡಲಾಗಿದೆ.
ಭಾರತ ಸೇರಿದಂತೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಮುಗಿಬಿದ್ದು 'ಅವತಾರ್ 2' ಸಿನಿಮಾ ನೋಡುತ್ತಿದ್ದಾರೆ. ಶನಿವಾರ, ಭಾನುವಾರದ ಶೋನ ಟಿಕೆಟ್‌ಗಳು ಭಾರತದಲ್ಲಿಯೇ ಹಲವೆಡೆ ಸೋಲ್ಡ್ ಔಟ್ ಆಗಿವೆ. ಆದರೆ ನೀವು 13 ವರ್ಷದ ಬಳಿಕ 'ಅವತಾರ್'ನ ಪ್ಯಾಂಡೋರಾ ಪ್ರಪಂಚಕ್ಕೆ ಎಂಟ್ರಿ ನೀಡುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ. 'ಅವತಾರ್ 2' ಸಿನಿಮಾ ನೋಡಲು ಇದೊಂದು ಪ್ರವೇಶಿಕೆ ಎಂದುಕೊಳ್ಳಿ.

ಅವತಾರ್ 1 ಹಾಗೂ ಅವತಾರ್ 2 ನಡುವೆ ಹೋಲಿಕೆ
ಮೊದಲ 'ಅವತಾರ್' ಸಿನಿಮಾ ಪೂರ್ಣವಾಗಿ ಮನುಷ್ಯನ ವಿಸ್ತರಣಾ ಮನೋಭಾವ, ಅಭಿವೃದ್ಧಿ ಹೆಸರಲ್ಲಿ ಅರಣ್ಯನಾಶ, ಲಾಭಕೋರತನಗಳ ಬಗೆಗಿನ ಸಿನಿಮಾ ಆಗಿತ್ತು. ಮನುಷ್ಯ ಪ್ರಕೃತಿಯ ಮೇಲೆ ನಡೆಸುವ ಅತ್ಯಾಚಾರ ಹಾಗೂ ಪ್ರಕೃತಿ ಅಥವಾ ಅದನ್ನು ನಂಬಿದ ಜನ ತಮಗೆ ಸೇರಿದ ಪ್ರಕೃತಿಯನ್ನು ಉಳಿಸಿಕೊಳ್ಳಲು ಮಾಡುವ ಹೋರಾಟದ ಸಿನಿಮಾ ಆಗಿತ್ತು. ಆದರೆ 'ಅವತಾರ್ 2' ಕತೆ ಮೊದಲ ಸಿನಿಮಾದಷ್ಟು ವಿಶಾಲ ಉದ್ದೇಶಗಳನ್ನು ಹೊಂದಿಲ್ಲ. ಇದು ಒಂದು ರೀತಿ ರಿವೇಂಜ್ ಅಥವಾ ಸೇಡು ತೀರಿಸಿಕೊಳ್ಳಲು ಬರುವ ವಿಲನ್ ಹಾಗೂ ಕುಟುಂಬ ಕಾಪಾಡಿಕೊಳ್ಳಲು ಹೆಣಗುವ ಹೀರೋ ಒಬ್ಬನ ನಡುವಿನ ಸಿನಿಮಾ. ಮನುಷ್ಯನ ಲಾಭಕೋರತನಕ್ಕೆ, ಪ್ರಕೃತಿಯನ್ನು, ಪ್ರಾಣಿಗಳನ್ನು ಬಳಸುವ ವಿಷಯವನ್ನು 'ಅವತಾರ್ 2'ನಲ್ಲಿ ತುಸುವಷ್ಟೆ ಮುಟ್ಟಿ ಬಿಟ್ಟಿದ್ದಾರೆ ನಿರ್ದೇಶಕ ಜೇಮ್ಸ್ ಕ್ಯಾಮರನ್.

ಹಾಸ್ಯ ಮೊದಲ ಭಾಗದಲ್ಲಿ ಹೆಚ್ಚಿದೆ
'ಅವತಾರ್' ಮೊದಲ ಭಾಗದಲ್ಲಿ ಸಂಭಾಷಣೆಗಳ ನಡುವೆ ಹಾಸ್ಯವನ್ನು ಚೆನ್ನಾಗಿ ಬಳಸಿಕೊಳ್ಳಲಾಗಿತ್ತು. ಜೇಕ್ ಸುಲಿಯ ಒನ್‌ಲೈನರ್‌ಗಳು ಚೆನ್ನಾಗಿದ್ದವು. ಅದು ಮಾತ್ರವಲ್ಲದೆ, ಜೇಕ್ ಸುಲಿ, ನಾವಿ ಜನರ ರೀತಿ-ನೀತಿಗಳನ್ನು ಕಲಿಯುವಾಗ ಆಗುತ್ತಿದ್ದ ಯಡವಟ್ಟುಗಳು ಸಹ ನೋಡುಗರಲ್ಲಿ ನಗೆ ಉಕ್ಕಿಸುತ್ತಿದ್ದವು. ಆದರೆ 'ಅವತಾರ್ 2'ನಲ್ಲಿ ಹಾಸ್ಯ ತುಸು ಕಡಿಮೆ. ಜೇಕ್ ಸುಲಿ, ನಟೀರಿ ಅಂತೂ ಬಹಳ ಗಂಭೀರವಾಗಿಬಿಟ್ಟಿದ್ದಾರೆ. ಹಾಗೆಂದು 'ಅವತಾರ್ 2' ಬೋರು ಹೊಡೆಸುತ್ತದೆ ಎಂದೇನೂ ಇಲ್ಲ.

ಅದ್ಧೂರಿಯಾಗಿದೆ 'ಅವತಾರ್ 2'
'ಅವತಾರ್' ಮೊದಲ ಭಾಗಕ್ಕಿಂತಲೂ ಅದ್ಧೂರಿಯಾಗಿದೆ 'ಅವತಾರ್ 2'. 'ಅವತಾರ್'ನಲ್ಲಿ ಭೂಮಿಯ ಮೇಲೆ ವಿಚಿತ್ರ ಆದರೆ ಅದ್ಭುತ ಎನಿಸುವಂಥಹಾ ಲೋಕವೊಂದನ್ನು ಜೇಮ್ಸ್ ಕ್ಯಾಮರನ್ ಸೃಷ್ಟಿಸಿದ್ದರು. ಆದರೆ 'ಅವತಾರ್ 2' ನಲ್ಲಿ ಸಮುದ್ರದಾಳದ ಲೋಕವನ್ನು ತೋರಿಸಿದ್ದಾರೆ. ಮೊದಲ 'ಅವತಾರ್' ಹಲವು ಹೊಸ ರೀತಿಯ ಮಷಿನ್‌ಗಳನ್ನು ಸಹ ತೋರಿಸಿದ್ದರು. 'ಅವತಾರ್ 2' ನಲ್ಲಿ ಅವೇ ಮಷಿನ್‌ಗಳು ಇನ್ನಷ್ಟು ಅಭಿವೃದ್ಧಿಗೊಂಡಿವೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಜೇಮ್ಸ್ ಬಳಸಿದ್ದಾರೆ. ಅದೊಂದು ನಕಲಿ ಲೋಕವೆಂದು ಗೊತ್ತಿದ್ದರೂ ಪ್ರೇಕ್ಷಕ ಅದರೊಳಗೆ ಕಳೆದುಹೋಗುವಂತೆ ಜೇಮ್ಸ್ ಮಾಡಿದ್ದಾರೆ. ಸಾಧ್ಯವಾದರೆ 3ಡಿ ಯಲ್ಲಿಯೇ ಸಿನಿಮಾವನ್ನು ನೋಡುವುದು ಒಳಿತು.

ಜೇಕ್ ಸುಲಿ-ನಟೀರಿ ಹೊರತಾಗಿ ಬೇರೆ ಪಾತ್ರಗಳಿಗೂ ಪ್ರಾಧಾನ್ಯತೆ
'ಅವತಾರ್' ಮೊದಲ ಸಿನಿಮಾದ ಕತೆ ಜೇಕ್ ಸೂಲಿ, ನಾಯಕಿ ನಟೀರಿ ಅವರ ಸುತ್ತ ಸುತ್ತುತ್ತಿರುತ್ತದೆ. ಆದರೆ 'ಅವತಾರ್ 2' ನಲ್ಲಿ ಜೇಕ್ ಸೂಲಿ, ನಟೀರಿ ಜೊತೆಗೆ ಅವರ ಮಕ್ಕಳ ಪಾತ್ರಗಳಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಮೊದಲ 'ಅವತಾರ್'ನಲ್ಲಿ ಜೇಕ್ ಸುಲಿಗೆ ನಟೀರಿ ಪ್ಯಾಂಡೋರಾ ಜಗತ್ತಿನ ಬಗ್ಗೆ ತಿಳಿಸುತ್ತಾಳೆ. ನಾವಿ ಜನರ ಆಚರಣೆಗಳನ್ನು ಹೇಳಿಕೊಡುತ್ತಾಳೆ. ಆದರೆ 'ಅವತಾರ್ 2' ನಲ್ಲಿ ನಟೀರಿ ಸೇರಿದಂತೆ ಇಡೀ ಸುಲಿ ಕುಟುಂಬ ಹೊಸ ಜಗತ್ತಿನ ರೀತಿ-ನೀತಿಗಳನ್ನು ಕಲಿಯುತ್ತಾರೆ. ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ತರಬೇತಿ ಪಡೆಯುತ್ತಾರೆ.