Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂಟರ್ನೆಟ್ ಸ್ಥಗಿತ: ಕೆಲ ಕಾಲ ಕಂಗಾಲಾದ ದೈತ್ಯ ಸಂಸ್ಥೆಗಳು
ಜನಜೀವನದ ಅವಿಭಾಜ್ಯ ಅಂಗವಾಗಿರುವ ಇಂಟರ್ನೆಟ್ ಇಂದು ಕೆಲ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ದೈತ್ಯ ಸಂಸ್ಥೆಗಳೇ ಕೆಲ ಕಾಲ ಕಂಗಾಲಾಗಿ ಹೋದವು.
Recommended Video
ವಿಶ್ವದ ಹಲವು ದೇಶಗಳಲ್ಲಿ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದ್ದು, ಅಮೆಜಾನ್, ಬಿಬಿಸಿ, ಸರ್ಕಾರಿ ವೆಬ್‌ಸೈಟ್‌ಗಳು, ನ್ಯೂಯಾರ್ಕ್ ಟೈಮ್ಸ್, ರೆಡಿಟ್, ಸ್ಪೂಟಿಫೈ, ಪಿನ್‌ಟ್ರಸ್ಟ್, ಬಿಫಂಕಿ ಸೇರಿದಂತೆ ಹಲವು ದೈತ್ಯ ಸಂಸ್ಥೆಗಳ ವೆಬ್‌ಸೈಟ್‌ಗಳು ಕೆಲ ಕಾಲ ಡೌನ್ ಆಗಿದ್ದವು. ಕೆಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳು ಸಹ ಬಂದ್ ಆಗಿದ್ದವು.
ಯುಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲೌಡ್ ಸಂಸ್ಥೆ ಫಾಸ್ಟ್ಲಿಯಲ್ಲಿ ಕಂಟೆಂಟ್ ಡೆಲಿವರಿ ನೆಟ್‌ವರ್ಕ್ ವಿಭಾಗದಲ್ಲಿ ಸಮಸ್ಯೆ ಆಗಿದ್ದ ಕಾರಣ ಈ ಇಂಟರ್ನೆಟ್ ಸ್ಥಗಿತವಾಗಿತ್ತು ಎಂದು ಗಾರ್ಡಿಯನ್ ವರದಿ ಮಾಡಿದೆ.
ಹಲವು ವೆಬ್‌ಸೈಟ್‌ಗಳನ್ನು ತೆರೆದಾಗ 'Error 503 Service Unavailable' ಎಂಬ ಸಂದೇಶ ಬರುತ್ತಿತ್ತು. ಸುಮಾರು ಎರಡು ಗಂಟೆಗಳ ಕಾಲ ಈ ಸಮಸ್ಯೆ ಇತ್ತು.
ಫಾಸ್ಟ್ಲಿ ಸಂಸ್ಥೆಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಂಟೆಂಟ್ ಡೆಲಿವರಿ ನೆಟ್‌ವರ್ಕ್ ಆದ ಸಮಸ್ಯೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದೆ. ಸುಮಾರು ಒಂದು ಗಂಟೆಗಳ ಅವಧಿಯಲ್ಲಿ ಸಮಸ್ಯೆಯನ್ನು ಸರಿಪಡಿಸಲಾಗಿದೆ, ಸೇವೆಯನ್ನು ಪುನರ್ಸ್ಥಾಪಿತಗೊಳಿಸಲಾಗಿದ್ದು ಕಾರ್ಯದಕ್ಷತೆ ಪರಿಶೀಲನೆ ಮಾಡಲಾಗುತ್ತಿದೆ ಎಂದಿದೆ ಸಂಸ್ಥೆ.