»   » ಭಾರತದಲ್ಲಿ ಸೊಂಟ ಬಳುಕಿಸಲಿರುವ ಜೆನ್ನಿಫರ್ ಲೋಪೆಜ್

ಭಾರತದಲ್ಲಿ ಸೊಂಟ ಬಳುಕಿಸಲಿರುವ ಜೆನ್ನಿಫರ್ ಲೋಪೆಜ್

Posted By: ಉದಯರವಿ
Subscribe to Filmibeat Kannada

ಹಾಲಿವುಡ್ ತಾರೆ, ಪಾಪ್ ಗಾಯಕಿ ಜೆನ್ನಿಫರ್ ಲೋಪೆಜ್ ಅವರು ಭಾರತಕ್ಕೆ ಅಡಿಯಿಡುತ್ತಿದ್ದಾರೆ. ಕೇವಲ ಅಡಿಯಿಡುವುದೇನು ಬಂತು ಇಲ್ಲಿ ತಮ್ಮ ಸೊಂಟವನ್ನೂ ಬಳುಕಿಸುತ್ತಿದ್ದಾರೆ. ಇನ್ನು ಜೆನ್ನಿಫರ್ ಅವರ ಜೊತೆ ವ್ಯವಹಾರ ಎಂದರೆ ಕಾಂಜಿಪಿಂಜಿ ವ್ಯವಹಾರವಂತೂ ಅಲ್ಲ.

ಜೆನ್ನಿಫರ್ ಅವರನ್ನು ಭಾರತಕ್ಕೆ ಕರೆಸುತ್ತಿರುವುದು ಯುಕೆ ಮೂಲದ ಬಿಲಿಯನೇರ್, ಹಿಂದೂಜಾ ಗ್ರೂಪ್ ನ ಉದ್ಯಮಿ ಸಂಜಯ್ ಹಿಂದೂಜಾ. ಅವರ ಮದುವೆಯಲ್ಲಿ ಹಾಡಿ ಕುಣಿಯಲಿದ್ದಾರೆ ಜೆನ್ನಿಫರ್. ಉದಯ್ ಪುರದಲ್ಲಿ ಮದುವೆ ನಡೆಯಲಿದೆ. [ತಾರೆಗಳ ವಕ್ಷೋಜ ಸೌಂದರ್ಯ, ವಯಸ್ಕರಿಗೆ ಮಾತ್ರ]

ಫೆಬ್ರವರಿ 10 ರಿಂದ 12ರವರೆಗೂ ನಡೆಯುವ ಮದುವೆ ಕಾರ್ಯಕ್ರಮಕ್ಕೆ ದೇಶ ವಿದೇಶಗಳ ಗಣ್ಯರು ಆಗಮಿಸುತ್ತಿದ್ದಾರಂತೆ. ಈ ಮದುವೆ ಮನೆಯಲ್ಲಿ ಜೆನ್ನಿಫರ್ ಅವರ ಡಾನ್ಸ್ ಪರ್ಫಾಮೆನ್ಸ್ ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ ಎನ್ನುತ್ತವೆ ಮೂಲಗಳು.

Jennifer Lopez perform Indian wedding

ಒಬೆರಾಯ್ ಉದಯ್ ವಿಲಾಸ್ ಹೋಟೆಲ್ ನ ಕೋಹಿನೂರ್ ಸೂಟ್ ನಲ್ಲಿ ಜೆನ್ನಿಫರ್ ಉಳಿದುಕೊಳ್ಳಲಿದ್ದಾರೆ. ಈ ಸೂಟ್ ಗೆ ದಿನಕ್ಕೆ ರು.3 ಲಕ್ಷ ಬಾಡಿಗೆ. ಅವರ ವಸತಿ ಖರ್ಚುಗಳೇ ಈ ಪಾಟಿ ಇದ್ದರೆ ಇನ್ನು ಸಂಭಾವನೆ ಯಾವ ರೇಂಜ್ ನಲ್ಲಿರಬಹುದು? ಊಹೆ ನಿಮಗೇ ಬಿಟ್ಟಿದ್ದು.

ಅವರ ಒಟ್ಟಾರೆ ಆಸ್ತಿ ಮೌಲ್ಯವೇ ಅಂದಾಜು 400 ಮಿಲಿಯನ್ ಡಾಲರ್ಸ್ (ರು.2,500 ಕೋಟಿ). ಇಷ್ಟೆಲ್ಲಾ ದುಡ್ಡಿದ್ದರೂ ಹಣ ಸಂಪಾದನೆಗೆ ಯಾವುದೇ ಚಾನ್ಸ್ ಸಿಕ್ಕಿದರೂ ಜೆನ್ನಿಫರ್ ಮಿಸ್ ಮಾಡಿಕೊಳ್ಳಲ್ಲ. ಇತ್ತೀಚೆಗೆ ಕ್ರಿಸ್ಮಸ್ ಪ್ರಯುಕ್ತ ಮಕಾವುನಲ್ಲಿ ಒಂದು ಖಾಸಗಿ ಡಾನ್ಸ್ ಪಾರ್ಟಿಯಲ್ಲಿ ತಮ್ಮ ಮೈ ಬಳುಕಿಸಿದರು. ಇದಕ್ಕಾಗಿ ಅವರು 1.75 ಡಾಲರ್ (ರು.11 ಕೋಟಿಗೂ ಅಧಿಕ) ಚಾರ್ಚ್ ಮಾಡಿದರು.

ನಲವತ್ತೈದರ ಹರೆಯದ ಜೆನ್ನಿಫರ್ ಈಗಲೂ ತಮ್ಮ ಸೆಕ್ಸಿ ಲುಕ್ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಕೇವಲ 40 ನಿಮಿಷಗಳ ಕಾಲ ಕುಣಿಯಲು 1.75 ಕೋಟಿ ಸಂಭಾವನೆ ಪಡೆದಿದ್ದಾರೆ. ಇದಕ್ಕಾಗಿ ಅಮೆರಿಕಾದಿಂದ ಮಕಾವುವರೆಗೂ ವಿಶೇಷ ವಿಮಾನದಲ್ಲಿ ಅವರನ್ನು ಕರೆಸಲಾಗಿತ್ತು.

English summary
If rumors are anything to go by, then Jennifer Lopez is expected to perform at the Hinduja Wedding. It is Industrialist Sanjay Hinduja’s wedding with designer Anu Mahtani this week and the wedding is on in full-swing!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada