»   » 2018 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಸ್ಯಾಮ್ ರಾಕ್ವೆಲ್

2018 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಸ್ಯಾಮ್ ರಾಕ್ವೆಲ್

Posted By:
Subscribe to Filmibeat Kannada

2018 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದೆ. ಅಮೆರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ಈ ಬಾರಿಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ವಿಶ್ವದ ಹಲವು ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ.

ನಟ ಸ್ಯಾಮ್ ರಾಕ್ವೆಲ್ ಅವರಿಗೆ ತಮ್ಮ 'ತ್ರಿ ಬಿಲ್ ಬೋರ್ಡ್' ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಈ ಚಿತ್ರದಲ್ಲಿ ಅವರು ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದರು. ಹಾಗೂ 'ಐ ಟೊನ್ಯಾ' ಸಿನಿಮಾದ ಅಭಿನಯಕ್ಕಾಗಿ ಆಲಿಸನ್ ಜನ್ನಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

2018 ರಲ್ಲಿ ಆಸ್ಕರ್ ಪ್ರಶಸ್ತಿಗೆ 13 ಸಿನಿಮಾಗಳು ನಾಮಿನೇಟ್ ಆಗಿವೆ. ಅವುಗಳಲ್ಲಿ 'ಶೇಪ್ ಆಫ್ ವಾಟರ್', 'ಡಂಕಿರ್ಕ್' ಮತ್ತು 'ತ್ರಿ ಬಿಲ್ ಬೋರ್ಡ್' ಪ್ರಶಸ್ತಿ ಪಡೆಯುವ ರೇಸ್ ನಲ್ಲಿ ಮುಂಚುಣಿಯಲ್ಲಿವೆ.

Oscar Awards 2018 : Sam Rockwell wins best supporting actor

ಈ ಬಾರಿಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ಮಾಡುತ್ತಿದ್ದಾರೆ. ಇನ್ನು ಹಿರಿಯ ನಟಿ ಮೆರಿಲ್ ಸ್ಟ್ರೀ ಪ್ ಕೂಡ ಈ ಅದ್ಬುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

English summary
Oscar Awards 2018 : Sam Rockwell wins best supporting actor for 'Three bill boards movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada